ತೀವ್ರ ಬಿಸಿಲ ಅಪಾಯ: ವಿಶ್ವದ ಟಾಪ್ 50 ನಗರಗಳಲ್ಲಿ ಬೆಂಗ್ಳೂರು

KannadaprabhaNewsNetwork |  
Published : Jul 11, 2026, 12:30 AM IST
summer

ಸಾರಾಂಶ

ಭಾರತವು ಅತಿ ಹೆಚ್ಚು ಬಿಸಿಲಿನ ಅಪಾಯದಲ್ಲಿರುವ ನಗರಗಳನ್ನು ಹೊಂದಿರುವ 4 ದೇಶಗಳಲ್ಲಿ ಒಂದಾಗಿದೆ. ಭಾರತದ 14 ನಗರಗಳು ಅತಿ ಅಪಾಯದ ಅಗ್ರ 50ರ ಪಟ್ಟಿಯಲ್ಲಿದ್ದು, ಕರ್ನಾಟಕದ ಬೆಂಗಳೂರು ಕೂಡಾ ಸ್ಥಾನ ಪಡೆದಿದೆ ಎಂದು ಆಕ್ಸ್‌ಫರ್ಡ್ ವಿವಿಯ ಅಧ್ಯಯನವೊಂದು ತಿಳಿಸಿದೆ.

 ನವದೆಹಲಿ :  ಭಾರತವು ಅತಿ ಹೆಚ್ಚು ಬಿಸಿಲಿನ ಅಪಾಯದಲ್ಲಿರುವ ನಗರಗಳನ್ನು ಹೊಂದಿರುವ 4 ದೇಶಗಳಲ್ಲಿ ಒಂದಾಗಿದೆ. ಭಾರತದ 14 ನಗರಗಳು ಅತಿ ಅಪಾಯದ ಅಗ್ರ 50ರ ಪಟ್ಟಿಯಲ್ಲಿದ್ದು, ಕರ್ನಾಟಕದ ಬೆಂಗಳೂರು ಕೂಡಾ ಸ್ಥಾನ ಪಡೆದಿದೆ ಎಂದು ಆಕ್ಸ್‌ಫರ್ಡ್ ವಿವಿಯ ಅಧ್ಯಯನವೊಂದು ತಿಳಿಸಿದೆ. 

ವಿಶ್ವದ 205 ಅತಿ ದೊಡ್ಡ ನಗರಗಳ ಮೇಲೆ ಅಧ್ಯಯನ

ವಿಶ್ವದ 205 ಅತಿ ದೊಡ್ಡ ನಗರಗಳ ಮೇಲೆ ಅಧ್ಯಯನ ನಡೆಸಲಾಗಿದೆ. ಭಾರತ, ಪಾಕಿಸ್ತಾನ, ನೈಜೀರಿಯಾ ಮತ್ತು ಘಾನಾ ಈ 4 ದೇಶಗಳು ತೀವ್ರ ಬಿಸಿಲಿನ ಅಪಾಯಕ್ಕೆ ಒಳಗಾಗಿರುವ ಅತಿ ಹೆಚ್ಚು ನಗರಗಳನ್ನು ಹೊಂದಿವೆ ಎಂದು ವರದಿ ತಿಳಿಸಿದೆ.  

ಅಪಾಯದ ಪಟ್ಟಿಯಲ್ಲಿ ಬೆಂಗಳೂರು: 

ಅತಿ ಹೆಚ್ಚು ಅಪಾಯದಲ್ಲಿರುವ ನಗರಗಳಲ್ಲಿ ಶೇ.95ಕ್ಕಿಂತ ಹೆಚ್ಚು ನಗರಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಾ ಹಾಗೂ ಉಪ-ಸಹಾರಾ ಆಫ್ರಿಕಾ ಪ್ರದೇಶಗಳಲ್ಲಿವೆ. ಇರಾಕ್‌ನ ಅಲ್ ಬಸ್ರಾ ನಗರ ವಿಶ್ವದ ಅತ್ಯಂತ ಅಪಾಯದಲ್ಲಿರುವ ನಗರವಾಗಿ ದಾಖಲಾಗಿದೆ. ಇದರ ನಂತರ ಗುಜರಾತ್‌ನ ಅಹಮದಾಬಾದ್ 2ನೇ ಸ್ಥಾನದಲ್ಲಿದೆ. ಭಾರತದ 14 ನಗರಗಳು ಅತಿ ಅಪಾಯದ ಟಾಪ್ 50 ಪಟ್ಟಿಯಲ್ಲಿ ಸ್ಥಾನ ಪಡೆದಿವೆ. 

ಇವುಗಳಲ್ಲಿ ಕರ್ನಾಟಕದ ಬೆಂಗಳೂರು, ಮಹಾರಾಷ್ಟ್ರದ ನಾಗ್ಪುರ ಮತ್ತು ಪುಣೆ, ತಮಿಳುನಾಡಿನ ಮದುರೈ ಮತ್ತು ಚೆನ್ನೈ, ಉತ್ತರ ಪ್ರದೇಶದ ಕಾನ್ಪುರ ಮತ್ತು ಲಖನೌ, ಜೈಪುರ ಸೇರಿದಂತೆ ಹಲವು ನಗರಗಳಿವೆ. ಜೈಪುರ, ಕೈರೋ, ಬ್ಯಾಂಕಾಕ್, ಹನಾಯ್‌ನಂತಹ ಪ್ರವಾಸಿ ಮತ್ತು ವ್ಯಾಪಾರ ಕೇಂದ್ರಗಳೂ ಅಪಾಯದ ಪಟ್ಟಿಯಲ್ಲಿವೆ. ಏರ್ ಕಂಡಿಷನರ್‌ಗಳ ಮೇಲಿನ ಅತಿಯಾದ ಅವಲಂಬನೆಯು ಇನ್ನಷ್ಟು ಜಾಗತಿಕ ತಾಪಮಾನಕ್ಕೆ ಕಾರಣವಾಗಬಹುದು. ಪ್ಯಾಸಿವ್ ಕೂಲಿಂಗ್, ಫ್ಯಾನ್‌ಗಳು ಮತ್ತು ಕಡಿಮೆ ಶಕ್ತಿಯ ತಂತ್ರಜ್ಞಾನಗಳನ್ನು ಹೆಚ್ಚು ಬಳಸುವುದು ಸೂಕ್ತ ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬಿಜೆಪಿಗೀಗ ‘ನವೀನ’ ರೂಪ - 65 ಪದಾಧಿಕಾರಿಗಳ ಹೊಸ ರಾಷ್ಟ್ರೀಯ ತಂಡ ರಚನೆ
ವಂದೇಗೆ ತಡೆ ಅಕ್ಷಮ್ಯ ಪಾಪ: ಸೋನಿಯಾ ವಿರುದ್ಧ ಶಾ ಕಿಡಿ