‘ಒನ್‌ ಬ್ಯಾಟಲ್‌ ಆಫ್ಟರ್‌ ಅನದರ್‌’ಗೆ ‘ಅತ್ಯುತ್ತಮ ಚಿತ್ರ’ ಆಸ್ಕರ್‌ ಗೌರವ

KannadaprabhaNewsNetwork |  
Published : Mar 17, 2026, 02:00 AM ISTUpdated : Mar 17, 2026, 04:30 AM IST
Oscar

ಸಾರಾಂಶ

ಸಿನಿಲೋಕದ ಅತ್ಯುನ್ನತ ಪುರಸ್ಕಾರವಾದ ಆಸ್ಕರ್‌ ಪ್ರಶಸ್ತಿಗಳನ್ನು ಸೋಮವಾರ ಇಲ್ಲಿ ಪ್ರಧಾನ ಮಾಡಲಾಗಿದ್ದು, ಹಾಲಿವುಡ್‌ನ ಒನ್‌ ಬ್ಯಾಟಲ್‌ ಆಫ್ಟರ್‌ ಅನದರ್‌ ಅತ್ಯುತ್ತಮ ಚಿತ್ರ, ಇದೇ ಚಿತ್ರದ ಪಾಲ್ ಥಾಮಸ್ ಆಂಡರ್ಸನ್‌ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ.

 ಲಾಸ್‌ ಏಂಜಲಿಸ್‌: ಸಿನಿಲೋಕದ ಅತ್ಯುನ್ನತ ಪುರಸ್ಕಾರವಾದ ಆಸ್ಕರ್‌ ಪ್ರಶಸ್ತಿಗಳನ್ನು ಸೋಮವಾರ ಇಲ್ಲಿ ಪ್ರಧಾನ ಮಾಡಲಾಗಿದ್ದು, ಹಾಲಿವುಡ್‌ನ ಒನ್‌ ಬ್ಯಾಟಲ್‌ ಆಫ್ಟರ್‌ ಅನದರ್‌ ಅತ್ಯುತ್ತಮ ಚಿತ್ರ, ಇದೇ ಚಿತ್ರದ ಪಾಲ್ ಥಾಮಸ್ ಆಂಡರ್ಸನ್‌ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ.

ಉಳಿದಂತೆ ಅತ್ಯುತ್ತಮ ರೂಪಾಂತರಿತ ಚಿತ್ರಕಥೆ, ಉತ್ತಮ ತಾರಾತಂಡ, ಉತ್ತಮ ಎಡಿಟಿಂಗ್‌ ಸೇರಿ 6 ಪ್ರಶಸ್ತಿ ಈ ಚಿತ್ರದ ಪಾಲಾಗಿವೆ. ಇದು, ಮಾಜಿ ಉಗ್ರನೊಬ್ಬ ತನ್ನ ಮಗಳನ್ನು ಯೋಧನೊಬ್ಬನಿಂದ ರಕ್ಷಿಸುವ ಕಾದಂಬರಿ ಆಧರಿತ ಆ್ಯಕ್ಷನ್‌ ಸಿನಿಮಾವಾಗಿದೆ.

ಅತ್ಯುತ್ತಮ ಮೂಲ ಚಿತ್ರಕಥೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಸಿನ್ನರ್ಸ್‌ ಚಿತ್ರಕ್ಕಾಗಿ ಮೈಕೆಲ್ ಬಿ ಜೋರ್ಡಾನ್‌ಗೆ ಅತ್ಯುತ್ತಮ ನಟ, ಹ್ಯಾಮ್ನೆಟ್‌ ಚಿತ್ರಕ್ಕಾಗಿ ಜೆಸ್ಸಿ ಬಕ್ಲಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ. ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಆಟಂ ಡ್ಯುರಾಲ್ಡ್ ಅರ್ಕಾಪಾ ಅವರಿಗೆ ಪ್ರಶಸ್ತಿ ದೊರಕಿದ್ದು, ಇದಕ್ಕೆ ಭಾಜನರಾದ ಮೊದಲ ಮಹಿಳೆ ಹಾಗೂ ಕಪ್ಪುವರ್ಣೀಯರು ಎಂಬುದು ಗಮನಾರ್ಹ.

ಸರೋಜಾದೇವಿ, ಧರ್ಮೇಂದ್ರಗೆ ಶ್ರದ್ಧಾಂಜಲಿ, ಆದರೆ ಪ್ರಸ್ತಾಪವಿಲ್ಲ

ವಾಡಿಕೆಯಂತೆ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಕಳೆದೊಂದು ವರ್ಷದಲ್ಲಿ ನಿಧನರಾದ ಸಿನೆಮಾ ದಿಗ್ಗಜರನ್ನು ಸ್ಮರಿಸಲಾಗುತ್ತದೆ. ಈ ಪಟ್ಟಿಯಲ್ಲಿ ಬಹುಭಾಷಾ ನಟಿ, ಕನ್ನಡತಿ ಸರೋಜಾದೇವಿ, ಧರ್ಮೇಂದ್ರ, ಮನೋಜ್‌ ಕುಮಾರ್‌, ಜಯಶ್ರೀ ಕಬೀರ್‌, ಕೋಟ, ಶ್ರೀನಿವಾಸ್‌ ರಾವ್‌. ಎಸ್‌.ಕೃಷ್ಣಸ್ವಾಮಿ ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿತ್ತಾದರೂ, ಉದ್ಘೋಷಣೆ ವೇಳೆ ಯಾವ ಭಾರತೀಯರ ಹೆಸರನ್ನೂ ಉಲ್ಲೇಖಿಸಲಿಲ್ಲ. ಇದು, ಭಾರತೀಯರ ಕಡೆಗಣನೆ ಎಂಬ ಆರೋಪಕ್ಕೆ ಕಾರಣವಾಗಿದೆ.

ಪ್ರಿಯಾಂಕಾ ಪ್ರಶಸ್ತಿ ಪ್ರದಾನ

ಬಾಲಿವುಡ್‌ನಿಂದ ಹಾಲಿವುಡ್‌ನತ್ತ ಪ್ರಯಾಣ ಬೆಳೆಸಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು ಜೇವಿಯರ್ ಬಾರ್ಡೆಂ ಅವರ ಜತೆ ಸೇರಿ, ಸೆಂಟಿಮೆಂಟ್‌ ವ್ಯಾಲ್ಯೂಗೆ ಅತ್ಯುತ್ತಮ ಫೀಚರ್‌ ಫಿಲ್ಮಂ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ರಾಣಾಗೆ ಏಮ್ಸ್‌ನಲ್ಲಿ ದಯಾಮರಣ ಪ್ರಕ್ರಿಯೆ ಆರಂಭ
ಕರ್ನಾಟಕದಲ್ಲಿ ಕಿರು ಸಾಲದ ನೀಡಿಕೆ ಶೇ.34ರಷ್ಟು ಕುಸಿತ