ಜಪಾನ್‌ ಹಿಂದಿಕ್ಕಿದ ಭಾರತ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆ

KannadaprabhaNewsNetwork |  
Published : May 25, 2025, 11:49 PM ISTUpdated : May 26, 2025, 05:12 AM IST
ರುಪಾಯಿ | Kannada Prabha

ಸಾರಾಂಶ

 ವಿಶ್ವದ ಮುಂಚೂಣಿ ದೇಶಗಳ ಪೈಕಿ ಒಂದಾದ ಜಪಾನ್‌ ಹಿಂದಿಕ್ಕಿರುವ ಭಾರತ, ಇದೀಗ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ನೀತಿ ಆಯೋಗದ ಸಿಇಒ ಬಿವಿಆರ್‌. ಸುಬ್ರಹ್ಮಣ್ಯಂ ಈ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.

 ನವದೆಹಲಿ: ಭಾರತದ ಆರ್ಥಿಕ ಪ್ರಗತಿಗೆ ಮತ್ತೊಂದು ಕಿರೀಟ ದೊರಕಿದೆ. ವಿಶ್ವದ ಮುಂಚೂಣಿ ದೇಶಗಳ ಪೈಕಿ ಒಂದಾದ ಜಪಾನ್‌ ಹಿಂದಿಕ್ಕಿರುವ ಭಾರತ, ಇದೀಗ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ನೀತಿ ಆಯೋಗದ ಸಿಇಒ ಬಿವಿಆರ್‌. ಸುಬ್ರಹ್ಮಣ್ಯಂ ಈ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.

ದೆಹಲಿಯಲ್ಲಿ ಆಯೋಜಿತವಾಗಿದ್ದ ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆ ಉದ್ದೇಶಿಸಿ ಮಾತನಾಡಿದ ಸುಬ್ರಹ್ಮಣ್ಯಂ, ‘ನಾನು ಇಲ್ಲಿ ಮಾತನಾಡುತ್ತಿರುವ ಹೊತ್ತಿನಲ್ಲಿ ನಮ್ಮ ಆರ್ಥಿಕತೆ 41.9 ಲಕ್ಷ ಕೋಟಿ ಡಾಲರ್‌ ದಾಟಿದೆ. ನಾವು ಇದೀಗ ಜಪಾನ್‌ ಅನ್ನು ದಾಟಿ ಮುಂದೆ ಸಾಗಿದ್ದೇವೆ. ನಮ್ಮ ಆರ್ಥಿಕತೆ ಇದೀಗ ಜಪಾನ್‌ಗಿಂತಲೂ ದೊಡ್ಡದಾಗಿದೆ. ಈ ಮೂಲಕ ನಾವು ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದೇವೆ’ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ದತ್ತಾಂಶಗಳನ್ನು ಆಧರಿಸಿ ಹೇಳಿದ್ದಾರೆ.

ಜೊತೆಗೆ, ‘ನಮಗಿಂತ ಸದ್ಯ ಅಮೆರಿಕ, ಚೀನಾ ಮತ್ತು ಜರ್ಮನಿ ದೇಶಗಳ ಮಾತ್ರ ಮುಂದಿವೆ. ನಾವು ಇದೀಗ ಏನು ಗುರಿ ಹಾಕಿಕೊಂಡಿದ್ದೇವೋ ಮತ್ತು ಯಾವ ಗತಿಯಲ್ಲ ಸಾಗುತ್ತಿದ್ದೇವೋ ಅದೇ ಪಥದಲ್ಲಿ ಸಾಗಿದರೆ ಮುಂದಿನ 2.5- 3 ವರ್ಷಗಳಲ್ಲಿ ನಾವು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದ್ದೇವೆ’ಎಂದು ಸುಬ್ರಹ್ಮಣ್ಯಂ ವಿಶ್ವಾಸ ವ್ಯಕ್ತಪಡಿಸಿದರು.

ದಶಕದ ಪ್ರಗತಿ ಪಥ:

2014ಲ್ಲಿ ಭಾರತ 2.39 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಯೊಂದಿಗೆ ವಿಶ್ವದಲ್ಲಿ 10ನೇ ಸ್ಥಾನದಲ್ಲಿತ್ತು. ಆದರೆ ಕಳೆದ 10 ವರ್ಷಗಳಲ್ಲಿ ಆರ್ಥಿಕ ಸುಧಾರಣೆ, ಬಂಡವಾಳ ಆಕರ್ಷಣೆ, ಹೂಡಿಕೆ ಉತ್ತೇಜನಕ್ಕೆ ಕೈಗೊಂಡ ಕ್ರಮಗಳು, ಉದ್ಯಮ ಸ್ನೇಹಿ ನೀತಿಗಳು ದೇಶದ ಆರ್ಥಿಕತೆಗೆ ಭಾರೀ ಬಲ ತುಂಬಿದ್ದು ಇದೀಗ ದೇಶದ ಆರ್ಥಿಕ 4 ಲಕ್ಷ ಕೋಟಿ ಡಾಲರ್‌ ದಾಟುವ ಮೂಲಕ ವಿಶ್ವದಲ್ಲೇ ದೇಶವನ್ನು 4ನೇ ಸ್ಥಾನಕ್ಕೆ ತಂದು ನಿಲ್ಲಿಸಿದೆ.

ಟಾಪ್‌ 5 ಆರ್ಥಿಕತೆ

ದೇಶಜಿಡಿಪಿ

ಅಮೆರಿಕ30.51 ಲಕ್ಷ ಕೋಟಿ ಡಾಲರ್‌

ಚೀನಾ19.23 ಲಕ್ಷ ಕೋಟಿ ಡಾಲರ್‌

ಜರ್ಮನಿ4.74 ಲಕ್ಷ ಕೋಟಿ ಡಾಲರ್‌

ಭಾರತ4.19 ಲಕ್ಷ ಕೋಟಿ ಡಾಲರ್‌

ಜಪಾನ್‌4.18 ಲಕ್ಷ ಕೋಟಿ ಡಾಲರ್‌

ಬ್ರಿಟನ್‌3.84 ಲಕ್ಷ ಕೋಟಿ ಡಾಲರ್‌

PREV
Read more Articles on

Recommended Stories

ಉಪರಾಷ್ಟ್ರಪತಿ ಹುದ್ದೆಗೆ ಸಂಬಳವಿಲ್ಲ!
ಮೋದಿ ಜನ್ಮದಿನಕ್ಕೆ‘ನಮೋ ಯುವ ರನ್‌’ ಅಭಿಯಾನ