ವಿವಿಧ ಕ್ಷೇತ್ರಗಳಲ್ಲಿ ಕೆರಿಬಿಯನ್‌ ಜತೆ ಸಹಕಾರ ವೃದ್ಧಿಗೆ ಭಾರತ ಉತ್ಸುಕ : ಪ್ರಧಾನಿ ಮೋದಿ

KannadaprabhaNewsNetwork | Updated : Nov 21 2024, 04:32 AM IST

ಸಾರಾಂಶ

‘ವಿವಿಧ ಕ್ಷೇತ್ರಗಳಲ್ಲಿ ಕೆರಿಬಿಯನ್‌ ದೇಶಗಳೊಂದಿಗಿನ ಸಹಕಾರವನ್ನು ಇನ್ನಷ್ಟು ವೃದ್ಧಿಸಲು ಭಾರತ ಉತ್ಸುಕವಾಗಿದೆ ಎಂದು ವೆಸ್ಟ್‌ ಇಂಡೀಸ್‌ ದ್ವೀಪ ಸಮೂಗದ ಗಯಾನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗಯಾನಾ: ಮೂರು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ತಮ್ಮ ಪ್ರವಾಸದ ಕೊನೆಯ ಭಾಗವಾಗಿ ಗಯಾನಗೆ ಭೇಟಿ ನೀಡಿದರು. ಈ ವೇಳೆ ಅನಿವಾಸಿ ಭಾರತೀಯರ ಜೊತೆ ಸಂವಾದ ನಡೆಸಿದರು.ಸುಮಾರು 50 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಗಯಾನಾಗೆ ಭೇಟಿ ನೀಡಿದ್ದಾರೆ. 

ನೈಜಿರಿಯಾ, ಬ್ರೆಜಿಲ್‌ ಬಳಿಕ ಗಯಾನಾಗೆ ಆಗಮಿಸಿದ ಮೋದಿಯವರನ್ನು ಅನಿವಾಸಿ ಭಾರತೀಯರು ಅದ್ಧೂರಿಯಾಗಿ ಸ್ವಾಗತಿಸಿದರು. ಸಾಂಪ್ರಾದಾಯಿಕ ದಿರಿಸುಗಳನ್ನು ಧರಿಸಿ , ಕೈಯಲ್ಲಿ ತ್ರಿ ವರ್ಣ ಧ್ವಜವನ್ನು ಹಿಡಿದು, ಘೋಷಣೆಗಳನ್ನು ಕೂಗಿ ಸ್ವಾಗತಿಸಿದರು. ಬಳಿಕ ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಿದರು.

ಈ ಕುರಿತು ಮೋದಿ ತಮ್ಮ ಎಕ್ಸ್‌ನಲ್ಲಿ ವಿವರ ನೀಡಿದ್ದು, ‘ಗಯಾನಾದಲ್ಲಿರುವ ಭಾರತೀಯ ಸಮುದಾಯದವರ ಆತ್ಮೀಯ ಮತ್ತು ಉತ್ಸಾಭರಿತ ಸ್ವಾಗತಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಒಬ್ಬರ ಬೇರುಗಳೊಂದಿಗೆ ಸಂಪರ್ಕದಲ್ಲಿರುವ ದೂರವು ಎಂದಿಗೂ ಅಡ್ಡಿಯಾಗುವುದಿಲ್ಲ. ಸಮುದಾಯವು ವಿವಿಧ ಕ್ಷೇತ್ರಗಳಲ್ಲಿ ಗುರುತಿಕೊಳ್ಳುವುದನ್ನು ನೋಡಲು ಸಂತೋಷವಾಗಿದೆ’ ಎಂದು ಬರೆದಿದ್ದಾರೆ. 

ಗಯಾನಾದಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಭಾರತೀಯರಿದ್ದಾರೆ. ಇದಕ್ಕೂ ಮುನ್ನ ಮೋದಿಯವರನ್ನು ವಿಮಾನ ನಿಲ್ದಾಣದಲ್ಲಿ ಗಯಾನಾ ಅಧ್ಯಕ್ಷ ಇರ್ಫಾನ್‌ ಅಲಿ ಬರಮಾಡಿಕೊಂಡರು. ಭಾರತ ಮತ್ತು ಗಯಾನಾ ನಡುವಿನ ನಿಕಟ ಸಂಬಂಧಕ್ಕೆ ಸಾಕ್ಷಿಯಾಗಿ ‘ಜಾರ್ಜ್‌ಟೌನ್ ನಗರ ಕೀ’ ಹಸ್ತಾಂತರಿಸಲಾಯಿತು.

- ಇಂಧನ ಸಹಕಾರ, ಔಷಧ, ಯುಪಿಐ ಸೇರಿ 10 ಒಪ್ಪಂದಗಳಿಗೆ ಸಹಿ

- ವೆಸ್ಟ್ ಇಂಡೀಸ್‌ನಲ್ಲೂ ಇನ್ನು ಯುಪಿಐ ಸೇವೆಜಾಜ್‌ರ್ಟೌನ್‌ (ಗಯಾನಾ): ‘ವಿವಿಧ ಕ್ಷೇತ್ರಗಳಲ್ಲಿ ಕೆರಿಬಿಯನ್‌ (ವೆಸ್ಟ್‌ ಇಂಡೀ​ಸ್‌) ದೇಶಗಳೊಂದಿಗಿನ ಸಹಕಾರ ವೃದ್ಧಿಸಲು ಭಾರತ ಉತ್ಸುಕವಾಗಿದೆ ’ ಎಂದು ವಿಂಡೀ​ಸ್‌ ದ್ವೀಪ ಸಮೂಹದ ಗಯಾನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗಯಾನಾಗೆ ಭೇಟಿ ನೀಡಿ ಅಲ್ಲಿನ ಅಧ್ಯ​ಕ್ಷ ಇರ್ಫಾನ್‌ ಅಲಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಮೋದಿ, ಉಭಯ ದೇಶಗಳ ನಡುವೆ ಔಷಧ, ಇಂಧನ, ಕೆರಿ​ಬಿ​ಯ​ನ್‌​ನಲ್ಲಿ ಯುಪಿಐ ಡಿಜಿ​ಟಲ್‌ ಪೇಮೆಂಟ್‌ ಸೇವೆ ಆರಂಭ ಸೇರಿ​ದಂತೆ 10 ಒಪ್ಪಂದಕ್ಕೆ ಸಹಿ ಹಾಕಿದರು. ಅಲ್ಲದೆ, 2ನೇ ಭಾರತ- ಕ್ಯಾರಿಕೋಮ್‌ ಶೃಂಗಸಭೆಯಲ್ಲಿ ಮಾತನಾಡಿದರು.

‘ಗಯಾನಾಗೆ 56 ವರ್ಷ ನಂತರ ಭಾರತದ ಪ್ರಧಾನಿ ಭೇಟಿ ನೀಡುತ್ತಿ ದ್ದಾರೆ. ಈ ವೇಳೆ ಏರ್ಪಟ್ಟಸಹಕಾರವು ಆರ್ಥಿಕ ಸಹಕಾರ, ಕೃಷಿ ಹಾಗೂ ಆಹಾರ ಭದ್ರತೆ, ಆರೋಗ್ಯ ಹಾಗೂ ಔಷಧ, ವಿಜ್ಞಾನ. ಯುಪಿ​ಐ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿನ ಸಂಬಂಧ ಮತ್ತಷ್ಟುಬಲಪಡಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ, ವಿಂಡೀ​ಸ್‌​ನಲ್ಲಿ ಯುಪಿಐ ಸೇವೆ ಆರಂಭ​ವಾ​ಗ​ಲಿದ್ದು, ಈ ಸೇವೆ ಆರಂಭಿ​ಸಿ​ರುವ 7ನೇ ದೇಶ ವೆಸ್ಟ್‌ ಇಂಡೀಸ್‌ ಆಗ​ಲಿದೆ ಎಂದು ಹರ್ಷಿ​ಸಿ​ದ​ರು.

ಕಳೆದ ಬಾರಿ 2019ರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಮಯದಲ್ಲಿ ಕ್ಯಾರಿಕೋಮ್‌ ದೇಶಗಳ ನಾಯಕರನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದರು.

Share this article