ಪಾಕ್‌ ದೂತಾವಾಸದ ಮತ್ತೊಬ್ಬ ಅಧಿಕಾರಿಗೆ ದೇಶ ಬಿಡಲು ಆದೇಶ

KannadaprabhaNewsNetwork |  
Published : May 22, 2025, 01:03 AM ISTUpdated : May 22, 2025, 11:34 AM IST
ಭಾರತ ಪಾಕ್  | Kannada Prabha

ಸಾರಾಂಶ

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಬೂದಿ ಮುಚ್ಚಿದ ಕೆಂಡದಂತಿರುವ ಹೊತ್ತಿನಲ್ಲಿ, ಭಾರತದಲ್ಲಿರುವ ಪಾಕ್‌ ದೂತಾವಾಸದ ಅಧಿಕಾರಿಯೊಬ್ಬರಿಗೆ ದೇಶ ತೊರೆಯುವಂತೆ ಸರ್ಕಾರ ಆದೇಶಿಸಿದೆ ಹಾಗೂ ಅದಕ್ಕೆ 1 ದಿನ ಕಾಲಾವಕಾಶ ನೀಡಿದೆ.

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಬೂದಿ ಮುಚ್ಚಿದ ಕೆಂಡದಂತಿರುವ ಹೊತ್ತಿನಲ್ಲಿ, ಭಾರತದಲ್ಲಿರುವ ಪಾಕ್‌ ದೂತಾವಾಸದ ಅಧಿಕಾರಿಯೊಬ್ಬರಿಗೆ ದೇಶ ತೊರೆಯುವಂತೆ ಸರ್ಕಾರ ಆದೇಶಿಸಿದೆ ಹಾಗೂ ಅದಕ್ಕೆ 1 ದಿನ ಕಾಲಾವಕಾಶ ನೀಡಿದೆ. 

ತಮ್ಮ ಅಧಿಕಾರ ವ್ಯಾಪ್ತಿಗೆ ಒಳಪಡದ ಚಟುವಟಿಕೆಗಳಲ್ಲಿ ತೊಡಗಿರುವ ಕಾರಣ, ಭಾರತ ಬಿಡುವಂತೆ ಆದೇಶಿಸಲಾಗಿದ್ದು, ಭಾರತದಲ್ಲಿರುವ ಯಾವೊಬ್ಬ ಪಾಕ್‌ ರಾಜತಾಂತ್ರಿಕನೂ ತನ್ನ ಅಧಿಕಾರದ ದುರ್ಬಳಕೆ ಮಾಡದಂತೆ ಎಚ್ಚರವಹಿಸಲು ಸೂಚಿಸಲಾಗಿದೆ. 8 ದಿನ ಹಿಂದಷ್ಟೇ ಪಾಕ್‌ ದೂತಾವಾಸದ ಅಧಿಕಾರಿಯೊಬ್ಬರಿಗೆ ದೇಶ ತೊರೆಯುವಂತೆ ಸೂಚಿಸಲಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕಾವಡ ಯಾತ್ರೆ : ಹರಿದ್ವಾರದಲ್ಲಿ ಮೂತ್ರ ಬಾಟಲಿ, 7000 ಟನ್‌ ಕಸದ ರಾಶಿ!
ಜೈಲಲ್ಲೇ ಇಮ್ರಾನ್‌ ಸಾವು ಎಂದ ಪತ್ರಕರ್ತ: ಪಾಕ್‌ನಲ್ಲಿ ಸಂಚಲನ