ಭಾರತ-ಫ್ರಾನ್ಸ್‌ ರಕ್ಷಣಾ ಬಾಂಧವ್ಯ ಹೊಸ ಎತ್ತರಕ್ಕೆ

Published : Feb 18, 2026, 07:21 AM IST
PM Modi meets French President Emmanuel Macron india france rafale defence deal

ಸಾರಾಂಶ

ಬಹುಕಾಲದ ರಕ್ಷಣಾ ಪಾಲುದಾರರಾಗಿರುವ ಭಾರತ ಮತ್ತು ಫ್ರಾನ್ಸ್‌ ನಡುವಿನ ಬಾಂಧವ್ಯವು ಹೊಸ ಎತ್ತರಕ್ಕೇರುವ ಬೆಳವಣಿಗೆಯಾಗಿದೆ. ಉಭಯ ದೇಶಗಳ ನಡುವೆ ರಕ್ಷಣೆ, ವ್ಯಾಪಾರ, ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ, ಆರೋಗ್ಯ, ಅಮೂಲ್ಯ ಖನಿಜಗಳಂತಹ ಕ್ಷೇತ್ರಗಳಲ್ಲಿನ ಪಾಲುದಾರಿಕೆಗೆ ಬಲ ತುಂಬಲು 21 ಒಪ್ಪಂದ 

ನವದೆಹಲಿ/ಮುಂಬೈ: ಬಹುಕಾಲದ ರಕ್ಷಣಾ ಪಾಲುದಾರರಾಗಿರುವ ಭಾರತ ಮತ್ತು ಫ್ರಾನ್ಸ್‌ ನಡುವಿನ ಬಾಂಧವ್ಯವು ಹೊಸ ಎತ್ತರಕ್ಕೇರುವ ಬೆಳವಣಿಗೆಯಾಗಿದೆ. ಉಭಯ ದೇಶಗಳ ನಡುವೆ ರಕ್ಷಣೆ, ವ್ಯಾಪಾರ, ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ, ಆರೋಗ್ಯ, ಅಮೂಲ್ಯ ಖನಿಜಗಳಂತಹ ಕ್ಷೇತ್ರಗಳಲ್ಲಿನ ಪಾಲುದಾರಿಕೆಗೆ ಬಲ ತುಂಬಲು 21 ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.

ಮುಂಬೈಗೆ ಆಗಮಿಸಿರುವ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುವಲ್‌ ಮ್ಯಾಕ್ರಾನ್‌

ಅತ್ತ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಂಬೈಗೆ ಆಗಮಿಸಿರುವ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುವಲ್‌ ಮ್ಯಾಕ್ರಾನ್‌, ಈ ಸಂಬಂಧವನ್ನು ಜಾಗತಿಕ ಸ್ಥಿರತೆಗೆ ಅಗತ್ಯವಾದ ಶಕ್ತಿ ಎಂದು ಬಣ್ಣಿಸಿದ್ದಾರೆ.

ಭಾರತದಲ್ಲೇ ಹಮ್ಮರ್‌ ಕ್ಷಿಪಣಿಯನ್ನು ತಯಾರಿಸುವುದು

ಏರ್ಪಟ್ಟಿರುವ ಒಪ್ಪಂದಗಳ ಪೈಕಿ, ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿ. ಜತೆ ಫ್ರಾನ್ಸ್‌ನ ಸಾಫ್ರಾನ್ ಸೇರಿಕೊಂಡು ಭಾರತದಲ್ಲೇ ಹಮ್ಮರ್‌ ಕ್ಷಿಪಣಿಯನ್ನು ತಯಾರಿಸುವುದು ಪ್ರಮುಖವಾಗಿದೆ. ಜತೆಗೆ, ಉಭಯ ದೇಶದ ಸೈನಿಕರ ವಿನಿಮಯದ ಒಡಂಬಡಿಕೆಯೂ ಏರ್ಪಟ್ಟಿದೆ.

‘ಇಂದಿನ ಅನಿಶ್ಚಿತ ಜಗತ್ತಿನಲ್ಲಿ ಫ್ರಾನ್ಸ್‌ನ ಪರಿಣಿತಿ ಮತ್ತು ಭಾರತದ ಪ್ರಮಾಣ(ಬೃಹತ್‌ ಮಾರುಕಟ್ಟೆ, ಜನಸಂಖ್ಯೆ ಇತ್ಯಾದಿ) ಜಂಟಿಯಾಗಿ ಜಾಗತಿಕ ಸ್ಥಿರತೆ ಸ್ಥಾಪಿಸಿ ಪ್ರಗತಿಗೆ ಕಾರಣವಾಗಲಿದೆ’ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ಜತೆಗೆ, ‘ಎಲ್ಲಾ ವಿಧದ ಉಗ್ರವಾದವನ್ನು ನಿರ್ಮೂಲನೆ ಮಾಡುವುದು ಎರಡೂ ದೇಶಗಳ ಬದ್ಧತೆಯಾಗಿದೆ’ ಎಂದೂ ಹೇಳಿದರು. ಇದಕ್ಕೆ ಪ್ರತಿಯಾಗಿ ಮ್ಯಾಕ್ರಾನ್‌, ‘ಭಾರತವು ಫ್ರಾನ್ಸ್‌ನ ವಿಶ್ವಾಸಾರ್ಹ ಪಾಲುದಾರನಾಗಿದೆ. ರಫೇಲ್‌ನಿಂದ ಹಿಡಿದು ಜಲಾಂತರ್ಗಾಮಿ ನೌಕೆಗಳ ವರೆಗೆ ನಮ್ಮ ರಕ್ಷಣಾ ಸಹಕಾರ ವಿಸ್ತರಣೆಯಾಗಿದೆ’ ಎಂದು ಹರ್ಷಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪಾಕ್‌ಗೆ ಹರಿಯುವ ರಾವಿ ನದಿಗೆ ಅಡ್ಡಲಾಗಿ ಭಾರತ ಡ್ಯಾಂ ರೆಡಿ
ಕಾಂಗ್ರೆಸ್‌ ಮಾಜಿ ರಾಜ್ಯಾಧ್ಯಕ್ಷ ಫೆ.22ರಂದು ಬಿಜೆಪಿಗೆ ಸೇರ್ಪಡೆ