ಆಳ ಸಮುದ್ರ ಸಂಶೋಧನೆಗೆ ಭಾರತ ಸಜ್ಜು

KannadaprabhaNewsNetwork |  
Published : Nov 21, 2025, 01:30 AM IST
Sea

ಸಾರಾಂಶ

ಭಾರತದ ಮಹತ್ವಾಕಾಂಕ್ಷಿ ಸಮುದ್ರಯಾನ ಮಿಷನ್‌ ಭಾಗವಾಗಿ, ಸಂಪೂರ್ಣ ಸ್ವದೇಶಿ ನಿರ್ಮಿತ 28 ಟನ್‌ ತೂಕದ ‘ಮತ್ಸ್ಯ-6000’ ಮಾನವಸಹಿತ ಕಡಲಾಳದ ನೌಕೆಯನ್ನು ಆಳಸಮುದ್ರಕ್ಕೆ ಕಳಿಸಲು ಭಾರತ ಸಜ್ಜಾಗಿದೆ. ಇದೇ ಮೊದಲ ಬಾರಿ 6,000 ಮೀ. ಆಳಕ್ಕೆ ಇಬ್ಬರು ಭಾರತೀಯ ಸಮುದ್ರಯಾನಿಗಳು ಸಮುದ್ರಕ್ಕೆ ಇಳಿಯಲಿದ್ದಾರೆ  

 ಚೆನ್ನೈ: ಭಾರತದ ಮಹತ್ವಾಕಾಂಕ್ಷಿ ಸಮುದ್ರಯಾನ ಮಿಷನ್‌ ಭಾಗವಾಗಿ, ಸಂಪೂರ್ಣ ಸ್ವದೇಶಿ ನಿರ್ಮಿತ 28 ಟನ್‌ ತೂಕದ ‘ಮತ್ಸ್ಯ-6000’ ಮಾನವಸಹಿತ ಕಡಲಾಳದ ನೌಕೆಯನ್ನು ಆಳಸಮುದ್ರಕ್ಕೆ ಕಳಿಸಲು ಭಾರತ ಸಜ್ಜಾಗಿದೆ. ಇದೇ ಮೊದಲ ಬಾರಿ 6,000 ಮೀ. ಆಳಕ್ಕೆ ಇಬ್ಬರು ಭಾರತೀಯ ಸಮುದ್ರಯಾನಿಗಳು ಸಮುದ್ರಕ್ಕೆ ಇಳಿಯಲಿದ್ದಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

2026ರ ಆರಂಭದಲ್ಲಿ ಚೆನ್ನೈ ಕಡಲತೀರದಿಂದ 500 ಮೀ. ಆಳಕ್ಕೆ

‘ಮತ್ಸ್ಯ-6000’ ಅನ್ನು 2026ರ ಆರಂಭದಲ್ಲಿ ಚೆನ್ನೈ ಕಡಲತೀರದಿಂದ 500 ಮೀ. ಆಳಕ್ಕೆ ಇಳಿಸಲಾಗುತ್ತದೆ. ನಂತರ 2027ರಲ್ಲಿ 6,000 ಮೀ. ಆಳಕ್ಕೆ ಕಳಿಸಲಾಗುತ್ತದೆ. ಚೆನ್ನೈ ಎನ್‌ಐಒಟಿ ವಿಜ್ಞಾನಿಗಳಾದ ರಮೇಶ್‌ ರಾಜು ಹಾಗೂ ಜತೀಂದರ್‌ ಪಾಲ್‌ ಸಿಂಗ್‌ ಇದರ ಸವಾರರಾಗಿ ತೆರಳಲಿದ್ದಾರೆ. ಭಾರತ 6,000 ಮೀ. ಆಳಕ್ಕೆ ಮಾನವರನ್ನು ಕಳಿಸುತ್ತಿರುವುದು ಇದೇ ಮೊದಲು.

ಪ್ರಯೋಜನವೇನು?:

ಇದು ವಿಶ್ವದ ಅತ್ಯಂತ ಸುರಕ್ಷಿತ ಮಾನವಸಹಿತ ನೌಕೆಗಳಲ್ಲಿ ಒಂದಾಗಿದ್ದು, ಆಳ ಸಮುದ್ರದ ಅಪರೂಪದ ಖನಿಜಗಳು, ಅನಿಲ ಸಂಗ್ರಹ, ಹೊಸ ಜೀವಿಗಳ ಅಧ್ಯಯನ ನಡೆಸಲಿದೆ. ಈ ಯೋಜನೆ ಯಶಸ್ವಿಯಾದರೆ ಭಾರತವು ಅಮೆರಿಕ, ರಷ್ಯಾ, ಚೀನಾ, ಜಪಾನ್, ಫ್ರಾನ್ಸ್ ನಂತರ 6,000 ಮೀ. ಆಳಕ್ಕೆ ಮನುಷ್ಯನನ್ನು ಕಳುಹಿಸಬಲ್ಲ 6ನೇ ದೇಶವಾಗಲಿದೆ. ಇದು ಭಾರತದ ಸಮುದ್ರ ಆರ್ಥಿಕತೆಗೆ (ಬ್ಲೂ ಇಕಾನಮಿ) ದೊಡ್ಡ ಶಕ್ತಿಯಾಗಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ