ಚಾಬಹಾರ್‌ ಬಂದರು ನಿರ್ವಹಣೆಗೆ ಭಾರತ- ಇರಾನ್‌ ಒಪ್ಪಂದಕ್ಕೆ ಸಹಿ

KannadaprabhaNewsNetwork |  
Published : May 14, 2024, 01:04 AM ISTUpdated : May 14, 2024, 04:48 AM IST
ಚಾಬಹಾರ್‌ | Kannada Prabha

ಸಾರಾಂಶ

ವ್ಯೂಹಾತ್ಮಕವಾಗಿ ಅತ್ಯಂತ ಆಯಕಟ್ಟಿನ ಸ್ಥಳದಲ್ಲಿರುವ ಇರಾನ್‌ನ ಚಾಬಹಾರ್‌ ಬಂದರಿನ ಒಂದು ಟರ್ಮಿನಲ್‌ ಅನ್ನು 10 ವರ್ಷ ನಿರ್ವಹಣೆ ಮಾಡುವ ಕುರಿತು ಭಾರತ ಮತ್ತು ಇರಾನ್‌ ಐತಿಹಾಸಿಕ ಒಪ್ಪಂದಕ್ಕೆ ಸಹಿಹಾಕಿವೆ.

ನವದೆಹಲಿ: ವ್ಯೂಹಾತ್ಮಕವಾಗಿ ಅತ್ಯಂತ ಆಯಕಟ್ಟಿನ ಸ್ಥಳದಲ್ಲಿರುವ ಇರಾನ್‌ನ ಚಾಬಹಾರ್‌ ಬಂದರಿನ ಒಂದು ಟರ್ಮಿನಲ್‌ ಅನ್ನು 10 ವರ್ಷ ನಿರ್ವಹಣೆ ಮಾಡುವ ಕುರಿತು ಭಾರತ ಮತ್ತು ಇರಾನ್‌ ಐತಿಹಾಸಿಕ ಒಪ್ಪಂದಕ್ಕೆ ಸಹಿಹಾಕಿವೆ. ವಿದೇಶದಲ್ಲಿರುವ ಬಂದರಿನ ನಿರ್ವಹಣೆಗೆ ಭಾರತ ಮುಂದಾದ ಮೊದಲ ಘಟನೆ ಇದಾಗಿದೆ.

ಈ ಒಪ್ಪಂದವು ಪ್ರಾಂತೀಯ ಸಂಪರ್ಕ ಮತ್ತು ವ್ಯಾಪಾರಕ್ಕೆ ಬಹುದೊಡ್ಡ ಕಾಣಿಕೆ ನೀಡಲಿದೆ ಎಂದು ವಿಶ್ಲೇಷಿಸಲಾಗಿದೆ. ಜೊತೆಗೆ ಪಾಕಿಸ್ತಾನವನ್ನು ಸಂಪರ್ಕಿಸದೆಯೇ ಭಾರತ-ಇರಾನ್‌- ಆಫ್ಘಾನಿಸ್ತಾನ ನಡುವಣ ವ್ಯಾಪಾರ ವಹಿವಾಟಿಗೆ ಹೊಸ ಮಾರ್ಗವನ್ನೂ ತೆರೆಯಲಿದೆ.

ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್‌ ಸಮ್ಮುಖದಲ್ಲಿ ಶಹೀದ್‌- ಬೆಹೆಷ್ತಿ ಬಂದರು ನಿರ್ವಹಣೆಗಾಗಿ ಭಾರತದ ಇಂಡಿಯನ್‌ ಪೋರ್ಟ್ಸ್‌ ಗ್ಲೋಬಲ್‌ ಲಿ ಹಾಗೂ ಇರಾನ್‌ನ ಪೋರ್ಟ್‌ ಆ್ಯಂಡ್‌ ಮಾರಿಟೈಮ್ ಆರ್ಗನೈಸೇಷನ್‌ ಒಪ್ಪಂದಕ್ಕೆ ಸಹಿ ಹಾಕಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮಲೆ ಮಹದೇಶ್ವರ ಬೆಟ್ಟದ ಮಹದೇಶ್ವರ ಸನ್ನಿಧಾನದಲ್ಲಿ ನವೆಂಬರ್‌ 6ರಿಂದ ದೀಪಾವಳಿ ಜಾತ್ರೆ
ಎಸ್‌ಡಿಎ ಶ್ರೀಧರ್ ಮಹಿಳೆಗೆ ಮಾನಸಿಕ ಕಿರುಕುಳ: ಗೌಡೇಗೌಡ