ನವದೆಹಲಿ: ಭಾರತ ತನ್ನ ಅಭಿವೃದ್ಧಿಯ ವೇಗಕ್ಕೆ ಹೋಲಿಸಿದರೆ ಉದ್ಯೋಗ ಸೃಷ್ಟಿಯಲ್ಲಿ ಹಿಂದುಳಿದಿದೆ. ಹೀಗಾಗಿ ಅರ್ಹರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ 2030ರ ವೇಳೆಗೆ 14.8 ಕೋಟಿ ಹೊಸ ಉದ್ಯೋಗ ಸೃಷ್ಟಿಸುವ ಅಗತ್ಯವಿದೆ ಎಂದು ಐಎಂಎಫ್ ಉಪಾಧ್ಯಕ್ಷೆ ಗೀತಾ ಗೋಪಿನಾಥ್ ಹೇಳಿದ್ದಾರೆ.
ಭಾರತದ ಜನಸಂಖ್ಯೆ ಬೆಳವಣಿಗೆ ಅಂದಾಜಿಗೆ ಹೋಲಿಸಿದರೆ, 2030ರ ಒಳಗೆ ಅಂದರೆ ಇನ್ನು ಕೇವಲ 6 ವರ್ಷದಲ್ಲಿ 6-14 ಕೋಟಿ ಉದ್ಯೋಗವನ್ನು ಭಾರತ ಸೃಷ್ಟಿಸಬೇಕಿದೆ. ಇದಕ್ಕೆ ಪೂರಕವಾಗಿ ಭಾರತ ಸರ್ಕಾರವು ಯುವಕರಲ್ಲಿ ಹೆಚ್ಚು ಕೌಶಲ್ಯಾಧಾರಿತ ಶಿಕ್ಷಣವನ್ನು ನೀಡಬೇಕು ಅದಕ್ಕಾಗಿ ತನ್ನ ಶಿಕ್ಷಣ ನೀತಿಯನ್ನು ಬದಲಾಯಿಸಿಕೊಳ್ಳಬೇಕು. ದೇಶದಲ್ಲಿ ಖಾಸಗಿ ಬಂಡವಾಳ ಹೂಡಿಕೆ ಹೆಚ್ಚಿಸಬೇಕು, ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ ಜೊತೆಗೆ ತೆರಿಗೆ ನೀತಿಯನ್ನು ಪರಿಷ್ಕರಿಸಿಕೊಳ್ಳಬೇಕು ಎಂದು ಹೇಳಿದರು.