ಚೆನ್ನೈ: ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಿರ್ಮಿಸಿರುವ ದೇಶದ ಮೊದಲ ಗಾಜಿನ ಸೇತುವೆ ಲೋಕಾರ್ಪಣೆಯಾಗಿದೆ. ವಿವೇಕಾನಂದ ರಾಕ್ ಸ್ಮಾರಕ ಮತ್ತು ತಿರುವಳ್ಳುವರ್ ಪ್ರತಿಮೆಯನ್ನು ಸಂಪರ್ಕಿಸುವ 77 ಮೀ. ಉದ್ದದ ಸೇತುವೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೋಮವಾರ ಉದ್ಘಾಟಿಸಿದರು.

37 ಕೋಟಿ ರು. ವೆಚ್ಚದಲ್ಲಿ ಈ ಗಾಜಿನ ಸೇತುವೆ ನಿರ್ಮಾಣವಾಗಿದ್ದು, ಪಾರದರ್ಶಕ ಗಾಜಿನ ಮೇಲ್ಮೈ ಹೊಂದಿದೆ. ತಿರುವಳ್ಳುವರ್ ಪ್ರತಿಮೆ ಅನಾವರಣದ ಬೆಳ್ಳಿ ಮಹೋತ್ಸವದಂದು ಸೇತುವೆ ಉದ್ಘಾಟನೆಯಾಗಿದೆ. ಇದು 77 ಮೀ (252 ಅಡಿ) ಉದ್ದ ಮತ್ತು 10 ಮೀಟರ್ ಅಗಲವನ್ನು ಹೊಂದಿದ್ದು, ಇಬ್ಬರು ಮಹಾನ್ ವ್ಯಕ್ತಿಗಳ ಸ್ಮಾರಕವಾದ ವಿವೇಕಾನಂದ ರಾಕ್ ಸ್ಮಾರಕ ಮತ್ತು ತಿರುವಳ್ಳುವರ್ ಪ್ರತಿಮೆಗೆ ಸಂಪರ್ಕ ಸಾಧಿಸಲಿದ್ದು, ದೇಶದ ಮೊದಲ ಗಾಜಿನ ಸೇತುವೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದುವರೆಗೆ ಈ ಎರಡು ಸ್ಮಾರಕಗಳಿಗೆ ಭೇಟಿ ನೀಡಲು ಸಮುದ್ರದ ಮೂಲಕವೇ ತೆರಳಬೇಕಿತ್ತು. ಆದರೆ ಗಾಜಿನ ಸೇತುವೆ ಪ್ರವಾಸಿಗರಿಗೆ ಎರಡೂ ಸ್ಮಾರಕ ತಲುಪಲು ಹೊಸ ಮಾರ್ಗ ಕಲ್ಪಿಸಿದೆ. ಜೊತೆಗೆ ಪ್ರವಾಸದ ಹೊಸ ಅನುಭೂತಿ ನೀಡಲಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.