ಥಾಯ್ಲೆಂಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚೀನಾ ಹೆಸರು ಹೇಳದೆಯೇ ಚಾಟಿ

KannadaprabhaNewsNetwork |  
Published : Apr 04, 2025, 12:51 AM ISTUpdated : Apr 04, 2025, 04:18 AM IST
ಮೋದಿ  | Kannada Prabha

ಸಾರಾಂಶ

‘ಭಾರತ ಮತ್ತು ಥಾಯ್ಲೆಂಡ್‌ ದೇಶಗಳು ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಮುಕ್ತ, ಎಲ್ಲರನ್ನೂ ಒಳಗೊಂಡ ಮತ್ತು ನಿಯಮಾಧಾರಿತ ಕ್ರಮವನ್ನು ಬೆಂಬಲಿಸುತ್ತವೆಯೇ ಹೊರತು ವಿಸ್ತರಣಾವಾದವನ್ನಲ್ಲ’ ಎಂದು ಚೀನಾ ಹೆಸರು ಹೇಳದೆಯೇ ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಚಾಟಿ ಬೀಸಿದ್ದಾರೆ.

ಬ್ಯಾಂಕಾಕ್‌: ‘ಭಾರತ ಮತ್ತು ಥಾಯ್ಲೆಂಡ್‌ ದೇಶಗಳು ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಮುಕ್ತ, ಎಲ್ಲರನ್ನೂ ಒಳಗೊಂಡ ಮತ್ತು ನಿಯಮಾಧಾರಿತ ಕ್ರಮವನ್ನು ಬೆಂಬಲಿಸುತ್ತವೆಯೇ ಹೊರತು ವಿಸ್ತರಣಾವಾದವನ್ನಲ್ಲ’ ಎಂದು ಚೀನಾ ಹೆಸರು ಹೇಳದೆಯೇ ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಚಾಟಿ ಬೀಸಿದ್ದಾರೆ.

ಗುರುವಾರ ಇಲ್ಲಿ ಥಾಯ್ಲೆಂಡ್‌ ಪ್ರಧಾನಿ ಪೆಟೋಂಗ್ಟರ್ನ್‌ ಶಿನಾವಾತ್ರಾ ಅವರೊಂದಿಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ, ‘ಭಾರತದ ಈಶಾನ್ಯ ರಾಜ್ಯಗಳು ಮತ್ತು ಥಾಯ್ಲೆಂಡ್‌ ನಡುವಿನ ಪ್ರವಾಸೋದ್ಯಮ, ಸಂಸ್ಕೃತಿ, ಶಿಕ್ಷಣ, ಎಂಎಸ್‌ಎಂಇ, ಕೈಮಗ್ಗ ಮತ್ತು ಕರಕುಶಲ ಕ್ಷೇತ್ರಗಳಲ್ಲಿನ ಸಹಕಾರಕ್ಕೆ ನಾವು ಒತ್ತು ನೀಡುತ್ತೇವೆ. ಪರಸ್ಪರ ವ್ಯಾಪಾರ, ಹೂಡಿಕೆ ಮತ್ತು ವಿನಿಮಯವನ್ನು ಹೆಚ್ಚಿಸುವ ಬಗ್ಗೆಯೂ ಚರ್ಚಿಸಿದೆವು’ ಎಂದರು.

ಇದೇ ವೇಳೆ ಎರಡೂ ದೇಶಗಳು ಡಿಜಿಟಲ್ ತಂತ್ರಜ್ಞಾನದಿಂದ ಹಿಡಿದು ಸಂಸ್ಕೃತಿಯ ವರೆಗಿನ ಸಹಕಾರಕ್ಕೆ ಸಂಬಂಧಿಸಿದಂತೆ ಜಂಟಿ ಘೋಷಣೆ ಮತ್ತು ಒಪ್ಪಂದಗಳಿಗೆ ಸಹಿ ಮಾಡಿದರು.ಬಳಿಕ ಪ್ರಧಾನಿ ಮೋದಿ ಬಿಮ್‌ಸ್ಟೆಕ್‌ ಶೃಂಗಸಭೆಯಲ್ಲಿ ಭಾಗಿಯಾದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ