2028ರ ವೇಳೆಗೆ ಭಾರತವು ಜಗತ್ತಿನ 3ನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ದೇಶ : ಜಿಡಿಪಿ ಏರಿಕೆ

KannadaprabhaNewsNetwork |  
Published : Mar 15, 2025, 01:03 AM ISTUpdated : Mar 15, 2025, 05:10 AM IST
Indian Economy Growth

ಸಾರಾಂಶ

2028ರ ವೇಳೆಗೆ ಭಾರತವು ಜಗತ್ತಿನ 3ನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಲಿದೆ ಎಂದು ಮಾರ್ಗನ್ ಸ್ಟಾನ್ಲಿ ವರದಿ ಹೇಳಿದೆ.

ನವದೆಹಲಿ: 2028ರ ವೇಳೆಗೆ ಭಾರತವು ಜಗತ್ತಿನ 3ನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಲಿದೆ ಎಂದು ಮಾರ್ಗನ್ ಸ್ಟಾನ್ಲಿ ವರದಿ ಹೇಳಿದೆ. ‘2023ರಲ್ಲಿ 297 ಲಕ್ಷ ಕೋಟಿ ರು. ಆರ್ಥಿಕತೆ ಹೊಂದಿದ್ದ ದೇಶದ ಆರ್ಥಿಕತೆಯು 2026ರಲ್ಲಿ 400 ಲಕ್ಷ ಕೋಟಿ ರು.ಗೆ ತಲುಪಲಿದ್ದು, 4ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿಲಿದೆ.  

ಈಗ ಅಮೆರಿಕ, ಚೀನಾ, ಜರ್ಮನಿಯ ನಂತರ ಭಾರತ ಸ್ಥಾನದಲ್ಲಿದೆ. 2028ರ ವೇಳೆಗೆ 484 ಲಕ್ಷ ಕೋಟಿ ರು. ಆರ್ಥಿಕತೆಯನ್ನು ಹೊಂದಲಿದ್ದು, ಈ ಮೂಲಕ ಜರ್ಮನಿಯನ್ನು ಹಿಂದಿಕ್ಕಲಿದೆ’ ಎಂದಿದೆ. ಅಲ್ಲದೇ 2029ರ ವೇಳೆಗೆ ಜಾಗತಿಕ ಜಿಡಿಪಿಗೆ ಭಾರತ ನೀಡುವ ಪಾಲು ಶೇ.3.5ರಿಂದ ಶೇ.4.5ಕ್ಕೆ ಏರಿಕೆಯಾಗಬಹುದು ಎಂದೂದೆ.

ಜನಸಂಖ್ಯಾ ಬೆಳವಣಿಗೆ, ಉತ್ತಮ ಮೂಲಸೌಕರ್ಯ, ಹೆಚ್ಚುತ್ತಿರುವ ಉದ್ಯಮ ವರ್ಗ ಸೇರಿದಂತೆ ಹಲವು ನೀತಿಗಳು ಮುಂಬರುವ ದಶಕಗಳಲ್ಲಿ ಭಾರತವು ಜಾಗತಿಕ ಉತ್ಪಾದನೆಯಲ್ಲಿ ತನ್ನ ಪಾಲು ಪಡೆಯಲು ಕಾರಣ. ಗ್ರಾಹಕ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಜಾಗತಿಕ ಉತ್ಪಾದನೆಯಲ್ಲಿ ಭಾರತವು ದೊಡ್ಡ ಪಾಲು ಪಡೆಯಲಿದೆ ಎಂದು ವರದಿ ಹೇಳಿದೆ.

ಫೆಬ್ರವರಿ ಹಣದುಬ್ಬರ: ಕರ್ನಾಟಕ ನಂ.3

ನವದೆಹಲಿ: ಕಳೆದ ಫೆಬ್ರವರಿಯಲ್ಲಿ ಚಿಲ್ಲರೆ ಹಣದುಬ್ಬರವು 7 ತಿಂಗಳಲ್ಲಿಯೇ ಅತಿ ಕನಿಷ್ಠ ಶೇ.3.6ರಷ್ಟು ದಾಖಲಾಗಿದ್ದು, ಆದರೆ, ಇದರ ರಾಜ್ಯವಾರು ಅಂಕಿ ಅಂಶ ಬಿಡುಗಡೆಯಾಗಿದ್ದು ಕರ್ನಾಟಕ 3ನೇ ಸ್ಥಾನದಲ್ಲಿದೆ. ಕೇರಳವು ಮೊದಲ ಸ್ಥಾನದಲ್ಲಿದ್ದರೆ, ತೆಲಂಗಾಣವು ಕೊನೆಯ ಸ್ಥಾನದಲ್ಲಿದೆ.ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ ಅಂಕಿ ಅಂಶ ಬಿಡುಗಡೆ ಮಾಡಿದ್ದು, ರಜ್ಯವಾರು ಚಿಲ್ಲರೆ ಹಣದುಬ್ಬರದ ಮಾಹಿತಿ ನೀಡಿದೆ. ಅದರ ಪ್ರಕಾರ ಕೇರಳದಲ್ಲಿ ಚಿಲ್ಲರೆ ಹಣದುಬ್ಬರವು ಅತಿ ಹೆಚ್ಚು ಶೇ.7.3 ದಾಖಲಾಗಿದ್ದರೆ, ಛತ್ತೀಸಗಢ ಶೇ. 4.9, ಕರ್ನಾಟಕ ಶೇ. 4.5, ಬಿಹಾರ ಶೇ.4.5 ಹಣದುಬ್ಬರ ದಾಖಲಾಗಿದೆ. ಇನ್ನು ತೆಲಂಗಾಣ ಕೊನೆಯ ಸ್ಥಾನದಲ್ಲಿದ್ದು, ಇಲ್ಲಿ ಹಣದುಬ್ಬರ ಶೇ.1.3ರಷ್ಟು ದಾಖಲಾಗಿದೆ.

22 ರಾಜ್ಯಗಳ ಪೈಕಿ 13 ರಾಜ್ಯಗಳಲ್ಲಿ ಹಣದುಬ್ಬರವು ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ಶೇ.4ರಷ್ಟಕ್ಕಿಂತ ಕಡಿಮೆಯಾಗಿದೆ ಎಂದು ಅಂಕಿ ಅಂಶ ಹೇಳಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ