ಇನ್ನು 3 ವರ್ಷದಲ್ಲಿ ಭಾರತ ವಿಶ್ವದ ನಂ. 3 ಆರ್ಥಿಕ ಶಕ್ತಿ

KannadaprabhaNewsNetwork |  
Published : Jan 30, 2024, 02:00 AM ISTUpdated : Jan 30, 2024, 08:50 AM IST
ಭಾರತದ ಆರ್ಥಿಕತೆ | Kannada Prabha

ಸಾರಾಂಶ

ಮುಂದಿನ ಮೂರು ವರ್ಷಗಳಲ್ಲಿ ಭಾರತದ ಜಿಡಿಪಿ 5 ಲಕ್ಷ ಕೋಟಿ ಡಾಲರ್‌ (415 ಲಕ್ಷ ಕೋಟಿ ರು.) ತಲುಪುವ ಮೂಲಕ ದೇಶವು ವಿಶ್ವದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ.

ನವದೆಹಲಿ: ಮುಂದಿನ ಮೂರು ವರ್ಷಗಳಲ್ಲಿ ಭಾರತದ ಜಿಡಿಪಿ 5 ಲಕ್ಷ ಕೋಟಿ ಡಾಲರ್‌ (415 ಲಕ್ಷ ಕೋಟಿ ರು.) ತಲುಪುವ ಮೂಲಕ ದೇಶವು ವಿಶ್ವದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. 

ಅದೇ ರೀತಿ 2030ರ ವೇಳೆಗೆ ಜಿಡಿಪಿ ಪ್ರಮಾಣವು 7 ಲಕ್ಷ ಕೋಟಿ ಡಾಲರ್‌ (581 ಲಕ್ಷ ಕೋಟಿ ರು.) ತಲುಪಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ವಿಶ್ವಾಸ ವ್ಯಕ್ತಪಡಿಸಿದೆ. 

ಇದು ಸಾಧ್ಯವಾದಲ್ಲಿ 3ನೇ ಸ್ಥಾನದಲ್ಲಿರುವ ಜರ್ಮನಿ ಹಾಗೂ 4ನೇ ಸ್ಥಾನದಲ್ಲಿರುವ ಜಪಾನ್‌ ದೇಶಗಳನ್ನು ಭಾರತ ಹಿಂದಿಕ್ಕಿದಂತಾಗಲಿದೆ.

ಸೋಮವಾರ ದೇಶದ ಆರ್ಥಿಕತೆ ಕುರಿತು ವರದಿ ಪ್ರಕಟಿಸಿರುವ ವಿತ್ತ ಸಚಿವಾಲಯ, ‘10 ವರ್ಷಗಳ ಹಿಂದೆ 1.9 ಲಕ್ಷ ಕೋಟಿ ಡಾಲರ್ (157 ಲಕ್ಷ ಕೋಟಿ ರು.) ಜಿಡಿಪಿಯೊಂದಿಗೆ ನಾವು ವಿಶ್ವದ 10ನೇ ಅತಿದೊಡ್ಡ ಆರ್ಥಿಕತೆಯಾಗಿದ್ದೆವು. 

ನಂತರದ ವರ್ಷಗಳಲ್ಲಿ ಕೋವಿಡ್‌ ಸಾಂಕ್ರಾಮಿಕ ಮತ್ತು ಹಿಂದಿನ ಸರ್ಕಾರಗಳು ತಂದಿಟ್ಟ ಆರ್ಥಿಕ ಸಂಕಷ್ಟದ ಹೊರತಾಗಿಯೂ ಸರ್ಕಾರ ಕೈಗೊಂಡ ವಿವಿಧ ಕ್ರಮಗಳಿಂದಾಗಿ ನಾವು 3.7 ಲಕ್ಷ ಕೋಟಿ ಡಾಲರ್‌ (307 ಲಕ್ಷ ಕೋಟಿ ರು.)ನೊಂದಿಗೆ 5ನೇ ಸ್ಥಾನದಲ್ಲಿದ್ದೇವೆ’ ಎಂದಿದೆ.

‘ಕಳೆದ 10 ವರ್ಷಗಳಲ್ಲಿ ಕೈಗೊಂಡ ವಿವಿಧ ಸುಧಾರಣಾ ಕ್ರಮಗಳು ದೇಶದ ಆರ್ಥಿಕ ಪ್ರಗತಿಗೆ ಕಾರಣವಾಗಿದೆ. ಜೊತೆಗೆ ಈ ಸುಧಾರಣಾ ಕ್ರಮಗಳು ಜಾಗತಿಕ ಆರ್ಥಿಕ ದುಷ್ಪರಿಣಾಮಗಳನ್ನು ಎದುರಿಸಲು ಕೂಡಾ ನೆರವಾಗಿದೆ. 

ಇದೆಲ್ಲದರ ಪರಿಣಾಮ ಮುಂದಿನ 3 ವರ್ಷಗಳಲ್ಲಿ ನಮ್ಮ ಆರ್ಥಿಕತೆ 5 ಲಕ್ಷ ಕೋಟಿ ಡಾಲರ್‌ ತಲುಪಲಿದೆ’ ಎಂದು ಹಣಕಾಸು ಸಚಿವಾಲಯ ಹೇಳಿದೆ.

PREV

Recommended Stories

ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ವಿರುದ್ಧ ಕೇಂದ್ರಕ್ಕೆ ಮಹಾ ದೂರು
ಸನಾತನ ಧರ್ಮದ ಕೊಂಡಿ ಕಳಚಲು ಶಿಕ್ಷಣದಿಂದ ಮಾತ್ರ ಸಾಧ್ಯ : ಕಮಲ್‌