ದೇಶೀಯ ತಂತ್ರಜ್ಞಾನ ಬಳಿಸಿ ಭಾರತದಲ್ಲಿ ಬುಲೆಟ್‌ ರೈಲು ಅಭಿವೃದ್ಧಿ: ಅಶ್ವಿನಿ ವೈಷ್ಣವ್‌

KannadaprabhaNewsNetwork | Updated : Aug 01 2024, 08:10 AM IST

ಸಾರಾಂಶ

: ದೇಶೀಯ ತಂತ್ರಜ್ಞಾನವನ್ನು ಬಳಸಿ ದೇಶದಲ್ಲಿ ಬುಲೆಟ್ ರೈಲುಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಕಾರ್ಯನಿರತವಾಗಿದೆ ಎಂದು ಬುಧವಾರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ತಿಳಿಸಿದರು.

ನವದೆಹಲಿ: ದೇಶೀಯ ತಂತ್ರಜ್ಞಾನವನ್ನು ಬಳಸಿ ದೇಶದಲ್ಲಿ ಬುಲೆಟ್ ರೈಲುಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಕಾರ್ಯನಿರತವಾಗಿದೆ ಎಂದು ಬುಧವಾರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ತಿಳಿಸಿದರು.

ಅಹಮದಾಬಾದ್ ಮತ್ತು ಮುಂಬೈ ನಡುವೆ ನಿರ್ಮಾಣವಾಗುತ್ತಿರುವ ಮೊದಲ ಬುಲೆಟ್ ರೈಲು ಯೋಜನೆಯು ತಾಂತ್ರಿಕವಾಗಿ ಬಹಳ ಸಂಕೀರ್ಣವಾಗಿದೆ. ಜಪಾನ್ ನೆರವಿನೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.

ಆರಂಭದಲ್ಲಿ ಬುಲೆಟ್ ರೈಲು ತಂತ್ರಜ್ಞಾನವನ್ನು ವಿದೇಶಗಳಿಂದ ಪಡೆದುಕೊಳ್ಳುತ್ತಿದ್ದೆವು. ಆದರೆ ಈಗ ಭಾರತದಲ್ಲಿಯೇ ಅನೇಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದ್ದರಿಂದ ನಾವು ಬುಲೆಟ್‌ ರೈಲುಗಳನ್ನು ನಮ್ಮ ದೇಶೀಯ

ಬಂಗಾಳದಲ್ಲಿ ಹಳಿ ತಪ್ಪಿದ ಗೂಡ್ಸ್‌ ರೈಲು: 2 ತಿಂಗಳಲ್ಲಿ 4ನೇ ದುರಂತದ ಘಟನೆ

ಕೋಲ್ಕತಾ: ಸರಕು ಸಾಗಣೆ ರೈಲೊಂದು ಹಳಿ ತಪ್ಪಿದ ಘಟನೆ ಬುಧವಾರ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದೆ. ಇಲ್ಲಿನ ಹೊಸ ಜಲಪೈಗುರಿ ರೈಲು ವಿಭಾಗದ ರಂಗಪಾಣಿ ನಿಲ್ದಾಣದ ಬಳಿ ಗೂಡ್ಸ್ ರೈಲಿನ ಖಾಲಿ ಪೆಟ್ರೋಲಿಯಂ ವ್ಯಾಗನ್ ಹಳಿತಪ್ಪಿದೆ. ಇದರಿಂದ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಇದರಿಂದ ರೈಲ್ವೆ ಸಂಚಾರದಲ್ಲೂ ಯಾವುದೇ ವ್ಯತ್ಯಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರವಷ್ಟೇ ಹೌರಾ-ಮುಂಬೈ ಎಕ್ಸ್‌ಪ್ರೆಸ್‌ ರೈಲಿನ 18 ಬೋಗಿಗಳು ಹಳಿ ತಪ್ಪಿದ ಘಟನೆ ನಡೆದಿತ್ತು. ಅದರ ಬೆನ್ನಲ್ಲೇ ಬಂಗಾಳದ ಪ್ರಕರಣ ನಡೆದಿದೆ. ಇದು ಕಳೆದ 2 ತಿಂಗಳಲ್ಲಿ ಸಂಭವಿಸಿದ 4ನೇ ರೈಲು ದುರಂತದ ಘಟನೆಯಾಗಿದೆ.

300 ಸಹ​ಕಾರ ಬ್ಯಾಂಕ್‌​ಗಳ ಮೇಲೆ ಸೈಬರ್‌ ದಾಳಿ

ನವದೆಹಲಿ: ದೇಶದ 300 ಸಹ​ಕಾರ ಹಾಗೂ ಗ್ರಾಮೀಣ ಬ್ಯಾಂಕ್‌​ಗಳ ಕಂಪ್ಯೂಟರ್‌ ವ್ಯವಸ್ಥೆ ನಿರ್ವ​ಹಿ​ಸುವ ಇ- ಎಡ್ಜ್‌ ಟೆಕ್ನಾ​ಲ​ಜೀಸ್‌ ಮೇಲೆ ಹ್ಯಾಕ​ರ್‌​ಗಳು ಸೈಬರ್‌ ದಾಳಿ ನಡೆಸಿದ್ದಾರೆ. ಇದ​ರಿಂದ ಸೇವೆ​ ಬಾಧಿ​ತ​ವಾ​ಗಿ​ವೆ ಎಂದು ನ್ಯಾಷ​ನಲ್‌ ಪೇಮೆಂಟ್ಸ್‌ ಸಂಸ್ಥೆ ‘ಎನ್‌​ಪಿ​ಸಿಐ’ ಹೇಳಿ​ದೆ. ಇದರ ಬೆನ್ನಲ್ಲೇ ಇ-ಎಡ್ಜ್‌ ಅನ್ನು ತಾತ್ಕಾ​ಲಿ​ಕ​ವಾಗಿ ಪೇಮೆಂಟ್‌ ಸಿಸ್ಟಂ ಸಂಪ​ರ್ಕ​ದಿಂದ ಎನ್‌​ಪಿ​ಸಿಐ ಹೊರ​ಗಿ​ರಿಸಿ ಜನರ ಹಣ ಸುರ​ಕ್ಷಿತವಾಗಿ​ರು​ವಂತೆ ನೋಡಿ​ಕೊಂಡಿ​ದೆ.

Share this article