ಪೂರ್ವ ಲಡಾಖ್‌ ಡೆಮ್ಚೊಕ್ ಹಾಗೂ ಡೆಪ್ಸಾಂಗ್‌ನಲ್ಲಿ ಸೇನಾ ಹಿಂತೆಗೆತ ಪೂರ್ಣ ಬೆನ್ನಲ್ಲೇ ಭಾರತೀಯ ಸೇನೆಯ ಗಸ್ತು ಆರಂಭ

KannadaprabhaNewsNetwork |  
Published : Nov 02, 2024, 01:26 AM ISTUpdated : Nov 02, 2024, 04:49 AM IST
ಗಡಿ | Kannada Prabha

ಸಾರಾಂಶ

ಭಾರತ- ಚೀನಾ ನಡುವೆ ನಾಲ್ಕೂವರೆ ವರ್ಷಗಳ ಹಿಂದೆ ಸಂಘರ್ಷಕ್ಕೆ ಸಾಕ್ಷಿಯಾದ ಪೂರ್ವ ಲಡಾಖ್‌ ಡೆಮ್ಚೊಕ್ ಹಾಗೂ ಡೆಪ್ಸಾಂಗ್‌ನಲ್ಲಿ ಉಭಯ ದೇಶಗಳ ಸೇನಾ ಹಿಂತೆಗೆತ ಪೂರ್ಣಗೊಂಡ ಬೆನ್ನಲ್ಲೇ ಭಾರತೀಯ ಸೇನೆಯ ಗಸ್ತು ಆರಂಭವಾಗಿದೆ.

 ನವದೆಹಲಿ  : ಭಾರತ- ಚೀನಾ ನಡುವೆ ನಾಲ್ಕೂವರೆ ವರ್ಷಗಳ ಹಿಂದೆ ಸಂಘರ್ಷಕ್ಕೆ ಸಾಕ್ಷಿಯಾದ ಪೂರ್ವ ಲಡಾಖ್‌ ಡೆಮ್ಚೊಕ್ ಹಾಗೂ ಡೆಪ್ಸಾಂಗ್‌ನಲ್ಲಿ ಉಭಯ ದೇಶಗಳ ಸೇನಾ ಹಿಂತೆಗೆತ ಪೂರ್ಣಗೊಂಡ ಬೆನ್ನಲ್ಲೇ ಭಾರತೀಯ ಸೇನೆಯ ಗಸ್ತು ಆರಂಭವಾಗಿದೆ. ಶುಕ್ರವಾರದಿಂದ ಡೆಮ್ಚೊಕ್‌ನಲ್ಲಿ ಭಾರತೀಯ ಯೋಧರು ಗಸ್ತು ತಿರುಗಲು ಆರಂಭಿಸಿದ್ದು, ಡೆಪ್ಸಾಂಗ್‌ನಲ್ಲಿ ಶೀಘ್ರದಲ್ಲೇ ಆ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.

2020ರಲ್ಲಿ ಭಾರತ- ಚೀನಾ ನಡುವೆ ಪೂರ್ವ ಲಡಾಕ್‌ ಗಡಿಯಲ್ಲಿ ಸಂಘರ್ಷ ಏರ್ಪಟ್ಟಿತ್ತು. ಉಭಯ ದೇಶಗಳು ಭಾರಿ ಪ್ರಮಾಣದಲ್ಲಿ ಸೇನಾ ಪಡೆಗಳನ್ನು ಜಮಾವಣೆ ಮಾಡಿದ್ದವು. ನಾಲ್ಕೂವರೆ ವರ್ಷಗಳ ಸತತ ಮಾತುಕತೆಯ ಬಳಿಕ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿದ್ದವು. ಅದರಂತೆ ಸೈನಿಕರ ವಾಪಸಾತಿ ಪೂರ್ಣಗೊಂಡಿದ್ದು, ಇದೀಗ 2020ರ ಪೂರ್ವದಲ್ಲಿದ್ದಂತೆ ಗಸ್ತು ಪ್ರಾರಂಭ ಪ್ರಕ್ರಿಯೆ ಪ್ರಾರಂಭವಾಗಿದೆ.

ಎರಡೂ ದೇಶಗಳ ಸಂಬಂಧ ಸುಧಾರಣೆಯಾಗಿರುವ ದ್ಯೋತಕವಾಗಿ ದೀಪಾವಳಿ ಪ್ರಯುಕ್ತ ಗುರುವಾರ ಭಾರತ- ಚೀನಾ ಯೋಧರು ಗಡಿಯ ಹಲವು ಪ್ರದೇಶಗಳಲ್ಲಿ ಸಿಹಿ ವಿನಿಮಯ ಮಾಡಿಕೊಂಡಿದ್ದರು.

2020ರ ಜೂನ್‌ನಲ್ಲಿ ಎರಡೂ ದೇಶಗಳ ಸಂಘರ್ಷ ತಾರಕಕ್ಕೇರಿ ಉಭಯ ಕಡೆಯ ಸೈನಿಕರು ಪರಸ್ಪರ ಹೊಡೆದಾಡಿಕೊಂಡಿದ್ದರು. ತನ್ಮೂಲಕ ಅದು ಎರಡು ದೇಶಗಳ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಂಘರ್ಷವಾಗಿ, ಗಡಿಯಲ್ಲಿ ತ್ವೇಷಮಯ ಪರಿಸ್ಥಿತಿ ಸೃಷ್ಟಿಯಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಆಸ್ಟ್ರೇಲಿಯಾದಲ್ಲಿ 426 ಕೆಜಿಯ ಗಾಂಧಿ ಕಂಚಿನ ಪ್ರತಿಮೆ ಧ್ವಂಸ, ಕಳವು
6 ಕ್ಷೇತ್ರದ ಚುನಾವಣಾ ಉಸ್ತುವಾರಿ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ