ಅಮೆರಿಕ ಪೊಲೀಸರ ಗುಂಡೇಟಿಗೆ ತೆಲಂಗಾಣದ ಟೆಕ್ಕಿ ಬಲಿ

KannadaprabhaNewsNetwork |  
Published : Sep 20, 2025, 01:00 AM IST
ತೆಲಂಗಾಣ ಟೆಕ್ಕಿ  | Kannada Prabha

ಸಾರಾಂಶ

ತನ್ನ ರೂಂಮೇಟ್‌ಗಳಿಗೆ ಚೂರಿ ಇರಿಯುತ್ತಿದ್ದ ಎಂಬ ಆರೋಪದ ಮೇಲೆ ತೆಲಂಗಾಣದ ಮೆಹಬೂಬ್‌ ನಗರದ ಮೂಲದ ಟೆಕ್ಕಿಯೊಬ್ಬನನ್ನು ಅಮೆರಿಕದ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ನಡುವೆ ಪುತ್ರನ ಹತ್ಯೆಯ ಘಟನೆಗೆ ಕಾರಣವಾದ ಅಂಶಗಳ ಕುರಿತು ಆತನ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು ತನಿಖೆಗೆ ಆಗ್ರಹಿಸಿದ್ದಾರೆ.

ವಾಷಿಂಗ್ಟನ್‌/ಹೈದರಾಬಾದ್‌: ತನ್ನ ರೂಂಮೇಟ್‌ಗಳಿಗೆ ಚೂರಿ ಇರಿಯುತ್ತಿದ್ದ ಎಂಬ ಆರೋಪದ ಮೇಲೆ ತೆಲಂಗಾಣದ ಮೆಹಬೂಬ್‌ ನಗರದ ಮೂಲದ ಟೆಕ್ಕಿಯೊಬ್ಬನನ್ನು ಅಮೆರಿಕದ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ನಡುವೆ ಪುತ್ರನ ಹತ್ಯೆಯ ಘಟನೆಗೆ ಕಾರಣವಾದ ಅಂಶಗಳ ಕುರಿತು ಆತನ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು ತನಿಖೆಗೆ ಆಗ್ರಹಿಸಿದ್ದಾರೆ.

ಆಗಿದ್ದೇನು?:

ಮೆಹಬೂಬ್‌ನಗರದ ನಿಜಾಮುದ್ದೀನ್‌ (30) ಅಮೆರಿಕದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಕಚೇರಿಯಲ್ಲಿ ಹಿರಿಯರಿಂದ ವರ್ಣಭೇದ ನಿಂದನೆ, ಮಾನಸಿಕ ಹಿಂಸೆ, ವೇತನ ಅಸಮಾನತೆ, ಕಿರುಕುಳ ನೀಡಲಾಗುತ್ತಿದೆ ಎಂಬ ಆಕ್ರೋಶ ಅವನಲ್ಲಿತ್ತು. ಜೊತೆಗೆ ತಮ್ಮ ಕೊಲೆಗೂ ಯತ್ನ ನಡೆದಿದೆ, ವಸತಿಯಿಂದ ಹೊರಹಾಕುವ ಹುನ್ನಾರ ನಡೆದಿದೆ ಎಂದು ಲಿಂಕ್ಡಿನ್‌ನಲ್ಲಿ ಆರೋಪಿಸಿದ್ದರು.

ಈ ನಡುವೆ ಸೆ.3ರಂದು ಮನೆಯಲ್ಲಿ ಯಾವುದೋ ವಿಷಯಕ್ಕೆ ಜಗಳವಾಗಿ ತಮ್ಮ ರೂಂಮೇಟ್‌ಗೆ ನಿಜಾಮುದ್ದೀನ್‌ ಚೂರಿ ಇರಿದಿದ್ದರು ಎನ್ನಲಾಗಿದೆ. ಈ ವೇಳೆ ಮನೆಯಲ್ಲಿದ್ದ ವ್ಯಕ್ತಿಗಳು ಪೊಲೀಸರಿಗೆ ಕರೆ ಮಾಡಿದ್ದರು. ತಕ್ಷಣವೇ ಮನೆಗೆ ಆಗಮಿಸಿ ಪೊಲೀಸರು ತಮಗೆ ಎದುರಾದ ನಿಜಾಮುದ್ದೀನ್‌ ವೇಳೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡಿ ನಿಜಾಮುದ್ದೀನ್‌ನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗಾಗಲೇ ಅವರು ಸಾವನ್ನಪ್ಪಿದ್ದರು.

ಪೊಲೀಸರು ಹೇಳಿದ್ದೇನು?:

ತುರ್ತು ಕರೆ ಆಧರಿಸಿ ನಾವು ಮನೆಯೊಂಕ್ಕೆ ತೆರಳಿದ್ದೆವು. ಈ ವೇಳೆ ಒಬ್ಬರಿಗೆ ಚೂರಿ ಇರಿದಿದ್ದ. ಜೊತೆಗೆ ಇನ್ನೊಬ್ಬರ ಮೇಲೆ ಚೂರಿ ಇರಿತದ ಪ್ರಯತ್ನದಲ್ಲಿದ್ದ. ಹೀಗಾಗಿ ಅವರ ಜೀವ ಉಳಿಸುವ ಸಲುವಾಗಿ ದಾಳಿಕೋರನ ಮೇಲೆ ಗುಂಡಿನ ದಾಳಿ ನಡೆಸಿದೆವು ಎಂದು ಹೇಳಿದ್ದಾರೆ.

ಪೋಷಕರ ಹೇಳಿಕೆ:

ನಿಜಾಮುದ್ದೀನ್‌ಗೆ ಕಚೇರಿಯಲ್ಲಿ ಹಿಂಸೆ ಕೊಡಲಾಗುತ್ತಿತ್ತು. ಹಿಂಸೆಯಿಂದ ಬೇಸತ್ತು ಆತನೇ ಪೊಲೀಸರಿಗೆ ಕರೆ ಮಾಡಿದ್ದ. ಆದರೆ ಪೊಲೀಸರು ಸರಿಯಾಗಿ ತನಿಖೆ ಮಾಡದೆ ನಿಜಾಮುದ್ದೀನ್‌ನನ್ನೇ ಕೊಲೆ ಮಾಡಿದ್ದಾರೆ ಎಂದು ನಿಜಾಮುದ್ದೀನ್‌ ಪೋಷಕರು ಆರೋಪಿಸಿದ್ದಾರೆ.

PREV
Read more Articles on

Recommended Stories

ಮಹಿಳೆಯರು ಬರೆದ ಪುಸ್ತಕ ಬೋಧನೆಗೆ ತಾಲಿಬಾನ್‌ ಬ್ಯಾನ್‌
ಬೆಂಗ್ಳೂರು, ದಿಲ್ಲಿಯಲ್ಲಿ ಐಫೋನ್‌ 17 ಖರೀದಿಗೆ ದುಂಬಾಲು : ಮುಂಬೈನಲ್ಲಿ ಹೊಡೆದಾಟ