ರೈಲ್ವೆಯಿಂದ ‘ರೈಲ್‌ಒನ್’ ಹೊಸ ಆ್ಯಪ್ ಬಿಡುಗಡೆ
ಕಾಯ್ದಿರಿಸಿದ, ಕಾಯ್ದಿರಿಸದ ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್ ಬುಕಿಂಗ್, ಮಾಸಿಕ ಟಿಕೆಟ್ ಪಾಸ್, ರೈಲಿನ ರಿಯಲ್-ಟೈಂ ಟ್ರ್ಯಾಕಿಂಗ್, ಪಿಎನ್‌ಆರ್ ಮತ್ತು ರೈಲು ಸ್ಥಿತಿ ಪರಿಶೀಲನೆ, ಆನ್‌ಲೈನ್‌ನಲ್ಲಿ ಆಹಾರ ಆರ್ಡರ್, ದೂರಿಗಾಗಿ ರೈಲ್ವೆ ಸಹಾಯ, ಕಾಯ್ದಿರಿಸಿದ ಟಿಕೆಟ್‌ಗಳಿಗೆ ಟಿಆರ್‌ಡಿ ಫೈಲಿಂಗ್ ಸೌಲಭ್ಯ ಇತ್ಯಾದಿ ಸೇವೆಗಳನ್ನು ಈ ಅಪ್ಲಿಕೇಶನ್ ಒದಗಿಸಲಿದೆ. ಇದರಿಂದಾಗಿ ಎಲ್ಲ ಸೇವೆಗಳಿಗೆ ಪ್ರತ್ಯೇಕ ಆ್ಯಪ್ ಬಳಸುವುದು ತಪ್ಪಲಿದೆ.ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರ ರಚಿಸಿಸಿರುವ ಈ ಆ್ಯಪ್ ಅನ್ನು ಆಂಡ್ರಾಯ್ಡ್ ಪ್ಲೇಸ್ಟೋರ್ ಮತ್ತು ಐಒಎಸ್ ಆ್ಯಪ್ ಸ್ಟೋರ್ ಎರಡರಿಂದಲೂ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.