ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ, ಎಲ್ ಆ್ಯಂಡ್ ಟಿ ಕಂಪನಿ ಮುಖ್ಯಸ್ಥ ಸುಬ್ರಹ್ಮಣ್ಯನ್ ಬೆನ್ನಲ್ಲೇ ಇದೀಗ ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ಕೂಡ ಉದ್ಯೋಗಿಗಳು ಕಠಿಣ ಪರಿಶ್ರಮ ಪಡಬೇಕು, ವಾರಕ್ಕೆ 80 ಗಂಟೆ ಕೆಲಸ ಮಾಡಬೇಕೆಂದು ಪ್ರತಿಪಾದಿಸಿದ್ದಾರೆ.
ನವದೆಹಲಿ: ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ, ಎಲ್ ಆ್ಯಂಡ್ ಟಿ ಕಂಪನಿ ಮುಖ್ಯಸ್ಥ ಸುಬ್ರಹ್ಮಣ್ಯನ್ ಬೆನ್ನಲ್ಲೇ ಇದೀಗ ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ಕೂಡ ಉದ್ಯೋಗಿಗಳು ಕಠಿಣ ಪರಿಶ್ರಮ ಪಡಬೇಕು, ವಾರಕ್ಕೆ 80 ಗಂಟೆ ಕೆಲಸ ಮಾಡಬೇಕೆಂದು ಪ್ರತಿಪಾದಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಕಠಿಣ ಪರಿಶ್ರಮ ಬೇಕಿಲ್ಲ ಎನ್ನುವುದು ಇತ್ತೀಚೆಗೆ ಫ್ಯಾಷನ್ ಆಗಿದೆ. ಆದರೆ ಭಾರತೀಯರು ಕಠಿಣ ಪರಿಶ್ರಮಿಗಳಾಗಬೇಕು. ವಾರಕ್ಕೆ 80 ಗಂಟೆಯೋ, 90 ಗಂಟೆಯೋ ಒಂದು ವೇಳೆ ನಿಮ್ಮ ಗುರಿ 3 ಲಕ್ಷ ಕೋಟಿಯಿಂದ 26 ಲಕ್ಷ ಕೋಟಿಯ ಆರ್ಥಿಕತೆ ಆಗಿದ್ದರೆ ಕಠಿಣ ಪರಿಶ್ರಮ ಅತ್ಯಗತ್ಯ. ಕೆಲ ಸಿನಿಮಾ ತಾರೆಯರ ಅಭಿಪ್ರಾಯ ಅಥವಾ ಮನರಂಜನೆಯಿಂದ ಇದನ್ನೆಲ್ಲ ಸಾಧಿಸಲು ಅಸಾಧ್ಯ. ಗುಣಮಟ್ಟ, ವೆಚ್ಚದಲ್ಲಿ ಯಾವುದೇ ರಾಜಿಮಾಡಿಕೊಳ್ಳದೆ ನಮಗೆ ವಹಿಸಿದ ಕೆಲಸ ಅವಧಿಗೆ ಮೊದಲು ಪೂರೈಸಲು ಕಠಿಣ ಪರಿಶ್ರಮಪಡಲೇಬೇಕು ಎಂದರು.
ಭಾರತೀಯರು ವಾರಕ್ಕೆ 90 ಗಂಟೆ ಕಾಲ ಕೆಲಸ ಮಾಡಬೇಕು. ಇದಕ್ಕಾಗಿ ಭಾನುವಾರವೂ ಕೆಲಸ ಮಾಡಬೇಕು ಎಂದು ಎಲ್‌ಆ್ಯಂಡ್ ಟಿ ಮುಖ್ಯಸ್ಥ ಎಸ್.ಎನ್.ಸುಬ್ರಹ್ಮಣ್ಯನ್ ಹೇಳಿದ್ದರು. ಇದಕ್ಕೂ ಮೊದಲು ನಾರಾಯಣ ಮೂರ್ತಿ 70 ಗಂಟೆ ಕೆಲಸದ ಕುರಿತು ಮಾತನಾಡಿದ್ದರು.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.