ಅಹಮದಾಬಾದ್‌ ಮತ್ತು ಕಛ್‌ ಜಿಲ್ಲೆಯ ಭುಜ್‌ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ಮೊದಲ ವಂದೇ ಮೆಟ್ರೋಗೆ ನಾಡಿದ್ದು ಚಾಲನೆ

KannadaprabhaNewsNetwork |  
Published : Sep 14, 2024, 01:51 AM ISTUpdated : Sep 14, 2024, 08:14 AM IST
ವಂದೇ ಮೆಟ್ರೋ ರೈಲು  | Kannada Prabha

ಸಾರಾಂಶ

  ಗುಜರಾತ್‌ನ ಅಹಮದಾಬಾದ್‌ ಮತ್ತು ಕಛ್‌ ಜಿಲ್ಲೆಯ ಭುಜ್‌ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ದೇಶದ ಮೊತ್ತಮೊದಲ ವಂದೇ ಮೆಟ್ರೋ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

ಅಹಮದಾಬಾದ್‌: ಹೆಚ್ಚಿನ ಜನಸಂದಣಿಯ 2 ನಗರಗಳ ನಡುವೆ ಸಂಪರ್ಕದ ಉದ್ದೇಶ ಹೊಂದಿರುವ ವಂದೇ ಮೆಟ್ರೋ ರೈಲು ಸೇವೆಗೆ ಸೋಮವಾರ ಇಲ್ಲಿ ಚಾಲನೆ ಸಿಗಲಿದೆ. ಗುಜರಾತ್‌ನ ಅಹಮದಾಬಾದ್‌ ಮತ್ತು ಕಛ್‌ ಜಿಲ್ಲೆಯ ಭುಜ್‌ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ದೇಶದ ಮೊತ್ತಮೊದಲ ವಂದೇ ಮೆಟ್ರೋ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

ಸಾಮಾನ್ಯ ಮೆಟ್ರೋ ರೈಲುಗಳು ನಗರ ವ್ಯಾಪ್ತಿಯೊಳಗೆ ಮತ್ತು ನಗರದ ಹೊರವಲಯದ ಪ್ರದೇಶಗಳನ್ನು ಕೇಂದ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿವೆ. ಆದರೆ 100-250 ಕಿ.ಮೀ ವ್ಯಾಪ್ತಿಯ ನಗರಗಳ ನಡುವೆ ಸಂಪರ್ಕಕ್ಕಾಗಿ ವಂದೇ ಮೆಟ್ರೋ ರೈಲು ಸೇವೆ ಆರಂಭಿಸಲಾಗುತ್ತಿದೆ.

ಗಂಟೆಗೆ 110 ಕಿ.ಮೀ ವೇಗದಲ್ಲಿ ಸಂಚರಿಸಬಲ್ಲ ಈ ರೈಲು, ಮೆಟ್ರೋ ರೈಲಿನ ರೀತಿಯಲ್ಲೇ ಎಲ್ಲಾ ಸೌಕರ್ಯ ಹೊಂದಿರಲಿದೆ. ರೈಲು ಒಮ್ಮೆಗೆ 2058 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲದು. ಕನಿಷ್ಠ ದರ 30 ರುಪಾಯಿ.

ಅಹಮದಾಬಾದ್-ಭುಜ್‌ ರೈಲು: ಉದ್ಯಮಗಳ ನಗರವಾಗಿರುವ ಅಹಮದಾಬಾದ್‌ ಮತ್ತು ಭೌಗೋಳಿವಾಗಿ ದೇಶದ ಅತಿದೊಡ್ಡ ಜಿಲ್ಲೆ ಮತ್ತು ಔದ್ಯಮಿಕ ಕೇಂದ್ರವಾಗಿರುವ ಭುಜ್‌ ನಡುವಿನ 360 ಕಿ.ಮೀ ದೂರವನ್ನು ರೈಲು 6 ಗಂಟೆ 45 ನಿಮಿಷದಲ್ಲಿ ಕ್ರಮಿಸಲಿದೆ. ಬೆಳಗ್ಗೆ 5.05ಕ್ಕೆ ಭುಜ್‌ನಿಂದ ಹೊರಡುವ ರೈಲು 10.50ಕ್ಕೆ ಅಹಮದಾಬಾದ್‌ ತಲುಪಲಿದೆ. ಅದೇ ರೀತಿ ಸಂಜೆ 5.30ಕ್ಕೆ ಅಹಮದಾಬಾದ್‌ನಿಂದ ಹೊರಟು ರಾತ್ರಿ 11.20ಕ್ಕೆ ಭುಜ್‌ ತಲುಪಲಿದೆ.

ರೈಲು ಒಟ್ಟು 5 ಜಿಲ್ಲೆಗಳನ್ನು ಹಾದು ಹೋಗಲಿದ್ದು, 10 ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ. ಇದರಲ್ಲಿ ಕನಿಷ್ಠ ದರ 30ರು. ಇರಲಿದೆ. ಅಹಮದಾಬಾದ್‌- ಭುಜ್‌ ನಡುವಿನ ಸಂಚಾರಕ್ಕೆ 430 ರು. ಶುಲ್ಕ ಇರಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ