;Resize=(412,232))
ನವದೆಹಲಿ: ಜಾಗತಿಕ ಅನಿಶ್ಚಿತತೆ, ಬಿಕ್ಕಟ್ಟಿನ ಹೊರತಾಗಿಯೂ 2026-27 ಮತ್ತು 2027-28ರ ಹಣಕಾಸು ವರ್ಷದಲ್ಲಿ ಭಾರತ ಶೇ.7ರ ದರದಲ್ಲಿ ಆರ್ಥಿಕ ಪ್ರಗತಿ ಸಾಧಿಸಲಿದೆ. ಈ ಮೂಲಕ ವಿಶ್ವದಲ್ಲೇ ಅತ್ಯಂತ ವೇಗದ ಆರ್ಥಿಕತೆ ಎಂಬ ಹಿರಿಮೆ ದಾಖಲಿಸಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ತನ್ನ ಹೊಸ ವರದಿಯಲ್ಲಿ ಹೇಳಿದೆ.
ಪ್ರಬಲವಾದ ದೇಶೀ ಬೇಡಿಕೆ, ಬಲಿಷ್ಠವಾದ ಸೇವಾವಲಯದ ಚಟುವಟಿಕೆ ಮತ್ತು ಹೆಚ್ಚಿನ ಯುವಜನತೆಯು ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲಿದೆ ಎಂದು ವರದಿ ಹೇಳಿದೆ.
2026-27ರ ವೇಳೆಗೆ ಭಾರತದ ಆರ್ಥಿಕ ಬೆಳವಣಿಗೆಯು ಶೇ.6.4, ಅದೇ ರೀತಿ 2027-28ನೇ ಸಾಲಿನಲ್ಲಿ ಶೇ.6.7ರಷ್ಟಿರಲಿದೆ ಎಂದು ಈ ಹಿಂದೆ ಬಿಡುಗಡೆ ಮಾಡಿದ ವರದಿಯಲ್ಲಿ ಐಎಂಎಫ್ ಅಂದಾಜಿಸಿತ್ತು. ಆದರೆ ಇದೀಗ ಬಿಡುಗಡೆ ಮಾಡಿರುವ ಹೊಸ ವರದಿಯು ಆರ್ಥಿಕತೆಯ ಬೆಳವಣಿಗೆ ವೇಗವನ್ನು ಮೇಲ್ದರ್ಜೆಗೇರಿಸಿದೆ. ಇಷ್ಟಾದರೂ ತೈಲದರ ಏರಿಕೆಯು ಭಾರತದ ಆರ್ಥಿಕತೆಯ ಬೆಳವಣಿಗೆ ಪಾಲಿಗೆ ತಲೆನೋವಾಗಿ ಪರಿಣಮಿಸಲಿದೆ ಎಂದು ಹೇಳಲಾಗಿದೆ.
ವಿಶ್ವದ ಬೃಹತ್ ಆರ್ಥಿಕತೆಗಳಾದ ಚೀನಾ, ಅಮೆರಿಕ, ಬ್ರಿಟನ್, ಜಪಾನ್, ಜರ್ಮನಿ, ಯುರೋಪ್ಗೆ ಹೋಲಿಸಿದರೆ ಭಾರತದ ಆರ್ಥಿಕ ಪ್ರಗತಿ ಅತ್ಯಂತ ಆಶಾದಾಯಕವಾಗಿದೆ.
ಭಾರತ ಶೇ.7 ಶೇ.7
ಚೀನಾ ಶೇ.4.5 ಶೇ.4
ಅಮೆರಿಕ ಶೇ.2.3 ಶೇ.2.3
ಯುರೋಪ್ ಶೇ.1.1 ಶೇ.1.2
ಬ್ರಿಟನ್ ಶೇ.1.3 ಶೇ.1.2
ಜಪಾನ್ ಶೇ.0.7 ಶೇ.0.7