ಕೋಲ್ಕತಾ: ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನವು, ನಿಂತಿದ್ದ ಏರ್ ಇಂಡಿಯಾ ವಿಮಾನದ ರೆಕ್ಕೆಕ್ಕೆ ಡಿಕ್ಕಿ ಹೊಡೆದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಇದರಿಂದಾಗಿ ಇಂಡಿಗೋ ವಿಮಾನದ ರೆಕ್ಕೆಗೆ ಹಾನಿ ಆಗಿದ್ದರೆ, ಏರ್ ಇಂಡಿಯಾ ವಿಮಾನದ ರೆಕ್ಕೆ ತುಂಡಾಗಿ ಕೆಳಗೆ ಬಿದ್ದಿದೆ. ಸುದೈವವಶಾತ್ ಎಲ್ಲ 135 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
‘ಬೆಳಗ್ಗೆ 11:15ಕ್ಕೆ ದರ್ಭಾಂಗಕ್ಕೆ ಹೊರಟಿದ್ದ ಇಂಡಿಗೋ ವಿಮಾನವು ರನ್‌ವೇ ಕ್ಲಿಯರೆನ್ಸ್‌ಗಾಗಿ ನಿಂತಿದ್ದ ಏರ್ ಇಂಡಿಯಾ ವಿಮಾನಕ್ಕೆ ಡಿಕ್ಕಿ ಹೊಡೆದಿದ. ಪರಿಣಾಮ ಏರ್ ಇಂಡಿಯಾ ವಿಮಾನದ ರೆಕ್ಕೆ ಮುರಿದಿದೆ.
ಇಂಡಿಗೋ ವಿಮಾನದ ರೆಕ್ಕೆ ತೀವ್ರ ಹಾನಿಯಾಗಿದೆ’ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಹೇಳಿದೆ. ಇಂಡಿಗೋ ವಿಮಾನದಲ್ಲಿದ್ದ ಎಲ್ಲ 135 ಪ್ರಯಾಣಿಕರು ಸುರಕ್ಷಿತವಾಗಿದ್ದು, ಅವರಿಗೆ ಮತ್ತೊಂದು ವಿಮಾನ ವ್ಯವಸ್ಥೆ ಮಾಡಿ ಮುಂದೆ ಕಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಡಿಜಿಸಿಎ ಇಂಡಿಗೋ ವಿಮಾನದ ಪೈಲಟ್‌ಗಳಿಗೆ ಸಂಬಳ ರಹಿತ ಕಡ್ಡಾಯ ರಜೆ ಮೇಲೆ ಕಳುಹಿಸಿ ವಿಸ್ತೃತ ತನಿಖೆಗೆ ಆದೇಶಿಸಿದೆ.