ದೇಶದ ಶೇ.1ರಷ್ಟು ಸಿರಿವಂತರ ಬಳಿ ಶೇ.40ರಷ್ಟು ಸಂಪತ್ತು

KannadaprabhaNewsNetwork |  
Published : Mar 21, 2024, 01:03 AM ISTUpdated : Mar 21, 2024, 08:53 AM IST
ಸಂಪತ್ತು | Kannada Prabha

ಸಾರಾಂಶ

ಭಾರತದಲ್ಲಿ ಆರ್ಥಿಕ ಅಸಮಾನತೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

ನವದೆಹಲಿ: ಭಾರತದಲ್ಲಿ ಆರ್ಥಿಕ ಅಸಮಾನತೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ದೇಶದ ಶೇ.1ರಷ್ಟು ಟಾಪ್‌ ಶ್ರೀಮಂತ ದೇಶದ ಒಟ್ಟು ಆದಾಯದಲ್ಲಿ ಶೇ.22.6ರಷ್ಟು ಪಾಲು ಮತ್ತು ಸಂಪತ್ತಿನಲ್ಲಿ ಶೇ.40.1ರಷ್ಟು ಪಾಲು ಹೊಂದಿದ್ದಾರೆ ಎಂದು ವರದಿಯೊಂದು ಹೇಳಿದೆ.

ಪ್ಯಾರಿಸ್‌ ಸ್ಕೂಲ್ ಆಫ್‌ ಎಕನಾಮಿಕ್ಸ್‌ನ ಥೋಮಸ್‌ ಪಿಕೆಟ್ಟಿ, ಹಾರ್ವರ್ಡ್‌ ಕೆನಡಿ ಸ್ಕೂಲ್‌ನ ಲೂಕಸ್‌ ಚಾನ್ಸೆಲ್‌ ಮತ್ತು ನ್ಯೂಯಾರ್ಕ್‌ ವಿವಿಯ ನಿತಿನ್‌ ಕುಮಾರ್‌ ಭಾರ್ತಿ ಸಿದ್ಧಪಡಿಸಿರುವ ‘ಇನ್ಕಂ ಆ್ಯಂಡ್ ವೆಲ್ತ್‌ ಇನ್‌ಈಕ್ವಾಲಿಟಿ ಇನ್‌ ಇಂಡಿಯಾ,1922 - 2023: ದಿ ರೈಸ್‌ ಆಫ್‌ ದಿ ಬಿಲಿಯನೇರ್‌ ರಾಜ್‌’ ಎಂಬ ಶೀರ್ಷಿಕಾ ವರದಿ ಈ ಅಂಕಿ ಅಂಶಗಳನ್ನು ನೀಡಿದೆ.

2022-23ರಲ್ಲಿ ಭಾರತದಲ್ಲಿ ಭಾರತದ ಶೇ.1ರಷ್ಟು ಟಾಪ್‌ ಶ್ರೀಮಂತ ದೇಶದ ಒಟ್ಟು ಆದಾಯದಲ್ಲಿ ಶೇ.22.6ರಷ್ಟು ಪಾಲು ಮತ್ತು ಸಂಪತ್ತಿನಲ್ಲಿ ಶೇ.40.1ರಷ್ಟು ಪಾಲು ಹೊಂದಿದ್ದರು. 

ಇದು ಸಾರ್ವಕಾಲಿಕ ದಾಖಲೆ. ಜೊತೆಗೆ ಶೇ.1ರಷ್ಟು ಜನರೇ ಇಷ್ಟೊಂದು ಆದಾಯ ಮತ್ತು ಸಂಪತ್ತು ಹೊಂದಿರುವುದು ಜಾಗತಿಕ ಮಟ್ಟದಲ್ಲಿ ಕೂಡಾ ಹೆಚ್ಚಿನ ಪ್ರಮಾಣದ್ದು. 

ದಕ್ಷಿಣ, ಆಫ್ರಿಕಾ, ಬ್ರೆಜಿಲ್‌, ಅಮೆರಿಕ ದೇಶಗಳಲ್ಲೂ ಈ ಪ್ರಮಾಣದಲ್ಲಿ ಟಾಪ್‌ ಶೇ.1ರಷ್ಟು ಸಿರಿವಂತರು ಆದಾಯ, ಸಂಪತ್ತು ಹೊಂದಿಲ್ಲ ಎಂದು ವರದಿ ಹೇಳಿದೆ.

ಕಠಿಣ ತೆರಿಗೆ ಅಗತ್ಯ: ಸಿರಿವಂತರ ಒಟ್ಟಾರೆ ಸಂಪತ್ತಿನ ದೃಷ್ಟಿಕೋನದಿಂದ ನೋಡಿದಾಗ ಭಾರತದ ಆದಾಯ ತೆರಿಗೆ ಪದ್ಧತಿ ಅಷ್ಟು ಸೂಕ್ತವಾಗಿಲ್ಲ.

ತೆರಿಗೆ ಪದ್ಧತಿಯಲ್ಲಿ ಬದಲಾವಣೆ ಮೂಲಕ ಆದಾಯ ಮತ್ತು ಸಂಪತ್ತಿನ ನಿಗಾ ವಹಿಸಿದರೆ ಆರೋಗ್ಯ, ಶಿಕ್ಷಣ, ಪೌಷ್ಠಿಕ ಆಹಾರ ಕ್ಷೇತ್ರಕ್ಕೆ ಅಗತ್ಯವಾದ ಸಂಪತ್ತನ್ನು ಸರ್ಕಾರ ಸೃಷ್ಟಿಸಬಹುದು. 

ಭಾರತದ 167 ಶ್ರೀಮಂತ ಕುಟುಂಬಗಳ ಮೇಲೆ ಶೇ.2ರಷ್ಟು ಸೂಪರ್‌ ತೆರಿಗೆ ಹೇರಿದರೆ ಅದು ರಾಷ್ಟ್ರೀಯ ಆದಾಯಕ್ಕೆ ಶೇ.0.5ರಷ್ಟು ಕಾಣಿಕೆ ನೀಡಲಿದೆ ಎಂದು ವರದಿ ಹೇಳಿದೆ.

PREV

Recommended Stories

ಕೃಷಿ ತ್ಯಾಜ್ಯ ಸುಡುವ ರೈತರನ್ನುಬಂಧಿಸಿ ಪಾಠ ಕಲಿಸಿ: ಸುಪ್ರೀಂ
ಸಂಸತ್‌, ತಾಜ್‌ ದಾಳಿ ಹಿಂದೆ ಅಜರ್‌: ಜೈಷ್‌ ಕಮಾಂಡರ್‌