ನವದೆಹಲಿ: ಆಂಧ್ರಪ್ರದೇಶದಲ್ಲಿ ಭಾನುವಾರ ಸಂಭವಿಸಿದ ರೈಲು ಅಪಘಾತಕ್ಕೆ ರಾಯಗಢ ಪ್ಯಾಸೆಂಜರ್ ರೈಲಿನ ಲೋಕಪೈಲಟ್‌ಗಳೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. 2 ಸಿಗ್ನಲ್‌ಗಳನ್ನು ಜಂಪ್ ಮಾಡಿ ಈ ರೈಲು ಮತ್ತೊಂದು ಪ್ಯಾಸೆಂಜರ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಪಘಾತದ ಸ್ಥಳ ಶೋಧನೆ, ಲಭ್ಯವಿರುವ ಸಾಕ್ಷ್ಯಗಳ ಪರಿಶೀಲನೆ, ಸಂಬಂಧಪಟ್ಟ ಅಧಿಕಾರಿಗಳ ಹೇಳಿಕೆಗಳನ್ನು ಆಧರಿಸಿ 7 ಮಂದಿಯ ತಂಡ ಪ್ರಾಥಮಿಕ ವರದಿಯನ್ನು ಸಲ್ಲಿಕೆ ಮಾಡಿದೆ. ರಾಯಗಢ ಪ್ಯಾಸೆಂಜರ್ ರೈಲು 2 ದೋಷಪೂರಿತ ಆಟೋ ಸಿಗ್ನಲ್‌ಗಳನ್ನು ದಾಟಿದೆ. ನಿಯಮಗಳ ಪ್ರಕಾರ ಆಟೋ ಸಿಗ್ನಲ್‌ಗಳು ದೋಷಪೂರಿತವಾಗಿದ್ದರೆ ಪ್ರತಿ ಸಿಗ್ನಲ್ ಬಳಿಯೂ 10 ನಿಮಿಷಗಳ ಕಾಲ ರೈಲನ್ನು ನಿಲ್ಲಿಸಿ, ಬಳಿಕ ಗಂಟೆಗೆ 10 ಕಿ.ಮೀ. ವೇಗದಲ್ಲಿ ಮುಂದುವರೆಯಬೇಕು. ಆದರೆ ರಾಯಗಢ ರೈಲಿನ ಲೋಕೋ ಪೈಲಟ್‌ಗಳು ಈ ನಿಯಮವನ್ನು ಪಾಲಿಸದ ಕಾರಣ ಅಪಘಾತ ಸಂಭವಿಸಿದೆ ಎಂದು ವರದಿ ತಿಳಿಸಿದೆ. ಈ ದುರಂತದಲ್ಲಿ ಇಬ್ಬರು ಲೋಕೋಪೈಲಟ್‌ಗಳು ಸಹ ಮೃತ ಪಟ್ಟಿದ್ದಾರೆ.