ಖಮೇನಿ ಅಂತ್ಯಕ್ರಿಯೆಗೆ ಪ್ರಧಾನಿ ಮೋದಿಗೆ ಆಹ್ವಾನ

KannadaprabhaNewsNetwork |  
Published : Jun 25, 2026, 04:00 AM IST
Khameni

ಸಾರಾಂಶ

ಅಮೆರಿಕ - ಇರಾನ್‌ ಯುದ್ಧದಲ್ಲಿ ಹತರಾದ ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಅಂತ್ಯಕ್ರಿಯೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರಾನ್‌ ಅಧ್ಯಕ್ಷ ಮಸೌದ್‌ ಪೆಜೆಶ್ಕಿಯಾನ್‌ ಆಹ್ವಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ.

 ನವದೆಹಲಿ: ಅಮೆರಿಕ - ಇರಾನ್‌ ಯುದ್ಧದಲ್ಲಿ ಹತರಾದ ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಅಂತ್ಯಕ್ರಿಯೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರಾನ್‌ ಅಧ್ಯಕ್ಷ ಮಸೌದ್‌ ಪೆಜೆಶ್ಕಿಯಾನ್‌ ಆಹ್ವಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಫೆ.28ರಂದು ಅಮೆರಿಕ ದಾಳಿಗೆ ಬಲಿಯಾಗಿದ್ದ ಖಮೇನಿ

ಫೆ.28ರಂದು ಅಮೆರಿಕ ದಾಳಿಗೆ ಬಲಿಯಾಗಿದ್ದ ಖಮೇನಿ ಅಂತ್ಯಕ್ರಿಯೆ ಜು.4ರಿಂದ ಜು.9ರ ತನಕ ಮಶಾದ್‌ನಲ್ಲಿ ನಡೆಯಲಿದೆ. ಕೋಟಿಗೂ ಅಧಿಕ ಮಂದಿ ಭಾಗಿಯಾಗುವ ನಿರೀಕ್ಷೆಯಿದೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್‌ ಇತ್ತೀಚೆಗೆ ತಾವು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದರು.

ಖಮೇನಿ ಅಂತ್ಯಕ್ರಿಯೆ ವಿಳಂಬ

ಇಸ್ಲಾಮಿಕ್ ಕಾನೂನು ಮೃತರನ್ನು ಸಾಧ್ಯವಾದಷ್ಟು ಬೇಗ ಮತ್ತು ಆದರ್ಶಪ್ರಾಯವಾಗಿ ಮರಣದ 1 ದಿನದೊಳಗೆ ಸಮಾಧಿ ಮಾಡಬೇಕೆಂದು ಆದೇಶಿಸುತ್ತದೆ. ಆದರೆ ಯುದ್ಧದ ಸಮಯದಲ್ಲಿ ವಿನಾಯಿತಿಗಳನ್ನು ಅನುಮತಿಸಲಾಗಿದೆ. ಹೀಗಾಗಿ ಖಮೇನಿ ಅಂತ್ಯಕ್ರಿಯೆ ವಿಳಂಬವಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ತ.ನಾಡಲ್ಲಿ ಹುಟ್ಟುವ ಮಕ್ಕಳಿಗೆ 1 ಗ್ರಾಂ ಬಂಗಾರದ ಉಂಗುರ!
6 ಬಂಡಾಯ ಸಂಸದರ ಅನರ್ಹತೆಗೆ ಠಾಕ್ರೆ ಶಿವಸೇನೆ ಮನವಿ