ಅಮೆರಿಕಕ್ಕೆ ತಲೆನೋವಾದ ಇರಾನ್‌ ಅಗ್ಗದ ಅಸ್ತ್ರಗಳು

KannadaprabhaNewsNetwork |  
Published : Mar 04, 2026, 03:15 AM IST
SHAHED_MISSILE

ಸಾರಾಂಶ

ಅಮೆರಿಕ ಹಾಗೂ ಇಸ್ರೇಲ್‌ಗೆ ಹೋಲಿಸಿದರೆ ಇರಾನ್‌ ಬಳಿಯಿರುವ ಶಸ್ತ್ರಾಸ್ತ್ರಗಳು ಅಷ್ಟೇನೂ ಆಧುನಿಕ ಅಥವಾ ಪರಿಣಾಮಕಾರಿ ಅಲ್ಲ. ಆದರೂ ಅವುಗಳ ದಾಳಿಯಿಂದ ಆಗುತ್ತಿರುವ ಹಾನಿಯನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ.  

ವಾಷಿಂಗ್ಟನ್‌: ಅಮೆರಿಕ ಹಾಗೂ ಇಸ್ರೇಲ್‌ಗೆ ಹೋಲಿಸಿದರೆ ಇರಾನ್‌ ಬಳಿಯಿರುವ ಶಸ್ತ್ರಾಸ್ತ್ರಗಳು ಅಷ್ಟೇನೂ ಆಧುನಿಕ ಅಥವಾ ಪರಿಣಾಮಕಾರಿ ಅಲ್ಲ. ಆದರೂ ಅವುಗಳ ದಾಳಿಯಿಂದ ಆಗುತ್ತಿರುವ ಹಾನಿಯನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಒಂದೊಮ್ಮೆ ಅವುಗಳನ್ನು ಧ್ವಂಸ ಮಾಡುವಲ್ಲಿ ಶೇ.90ರಷ್ಟು ಯಶಸ್ವಿಯಾದರೂ, ಆ ಕಾರ್ಯಾಚರಣೆ ಅಮೆರಿಕದ ಪಾಲಿಗೆ ದುಬಾರಿಯಾಗುತ್ತಿದೆ.

ಮಧ್ಯಪ್ರಾಚ್ಯದಾದ್ಯಂತ ಇರುವ ಅಮೆರಿಕದ ನೆಲೆಗಳು, ತೈಲಾಗಾರಗಳು, ರಾಯಭಾರ ಕಚೇರಿ, ಕಟ್ಟಡಗಳ ಮೇಲೆ ದಾಳಿ ಮಾಡಲು ಇರಾನ್‌ ಬಳಸುತ್ತಿರುವುದು ತನ್ನ ಶಾಹೇದ್‌-136 ಕ್ಷಿಪಣಿಗಳನ್ನು. ಇದರ ಬೆಲೆ ಅಂದಾಜು 2 ಲಕ್ಷ ರು. ಆದರೆ ಇವುಗಳನ್ನು ತಡೆಯಲು ಅಮೆರಿಕ ಬಳಸುತ್ತಿರುವ ಪ್ಯಾಕ್‌-3 ಪ್ರತಿಬಂಧಕದ ಬೆಲೆ ಬರೋಬ್ಬರಿ 36 ಕೋಟಿ ರು. ಆಗಿದೆ. ಥಾಡ್‌ ಕೂಡ ಬಲು ದುಬಾರಿ. ಹೀಗಿರುವಾಗ, ಇರಾನ್‌ ಹಾರಿಸುವ ಕ್ಷಿಪಣಿಗಳ ದಂಡನ್ನು ತಡೆಯುವುದು ಅಮೆರಿಕದ ಪಾಲಿಗೆ ಕಷ್ಟಕರ ಹಾಗೂ ಅತಿ ದುಬಾರಿ. ಜತೆಗೆ, ಒಂದರಹಿಂದೊಂದರಂತೆ ನುಗ್ಗಿಬರುವ ಎಲ್ಲಾ ಕ್ಷಿಪಣಿಗಳನ್ನು ಗುರುತಿಸಿ ಹೊಡೆಯುವುದು ಯಾವ ರಕ್ಷಣಾ ವ್ಯವಸ್ಥೆಗೂ ಸಾಧ್ಯವಿಲ್ಲವಾದ ಕಾರಣ, ಇವುಗಳಲ್ಲಿ ಕೆಲವಾದರೂ ತಮ್ಮ ಗುರಿಗಳನ್ನು ಧ್ವಂಸಗೊಳಿಸುವ ಸಾಧ್ಯತೆ ಇದ್ದೇಇದೆ.  

ಉಕ್ರೇನ್‌-ರಷ್ಯಾ ಯುದ್ಧದಲ್ಲೂ ಇದೇ ಕತೆ:

ಕಳೆದ 4 ವರ್ಷಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್‌ ಯುದ್ಧದ ವೇಳೆಯೂ, ಇರಾನ್‌ ನೀಡಿದ್ದ ಇದೇ ಶಾಹೇದ್‌ ಕ್ಷಿಪಣಿಗಳನ್ನು ರಷ್ಯಾ ಬಳಸಿತ್ತು. ಇತ್ತ ಅಮೆರಿಕದ ರಕ್ಷಣಾ ವ್ಯವಸ್ಥೆಯನ್ನು ನಂಬಿಕೊಂಡು ಕುಳಿತಿದ್ದ ಉಕ್ರೇನ್‌ಗೆ ಭಾರೀ ಹಾನಿಯಾಗಿತ್ತು.

ಇರಾನ್‌ನ ಭೂಗರ್ಭ ಡ್ರೋನ್‌ ಶಸ್ತ್ರಾಗಾರದ ವಿಡಿಯೋ ಬಿಡುಗಡೆ

ಟೆಹ್ರಾನ್‌: ಖಮೇನಿಯನ್ನು ಹತ್ಯೆಗೈದ ಅಮೆರಿಕ-ಇಸ್ರೇಲ್‌ ವಿರುದ್ಧ ಸೇಡಿನ ಜ್ವಾಲೆಯಿಂದ ಕುದಿಯುತ್ತಿರುವ ಇರಾನ್‌, ತನ್ನ ಭೂಗರ್ಭ ಡ್ರೋನ್‌ ಶಸ್ತ್ರಾಗಾರದ ವಿಡಿಯೋ ಬಿಡುಗಡೆ ಮಾಡುವ ಮೂಲಕ ಶತ್ರುಗಳಿಗೆ ಎಚ್ಚರಿಕೆ ನೀಡಿದೆ.ಇರಾನ್‌ನ ಸರ್ಕಾರಿ ಸುದ್ದಿಸಂಸ್ಥೆ ಫಾರ್ಸ್ ನ್ಯೂಸ್ ಇತ್ತೀಚೆಗೆ ಒಂದು ಪ್ರಚಾರಾತ್ಮಕ ವೀಡಿಯೊ ಬಿಡುಗಡೆ ಮಾಡಿದೆ. ವಿಚಿತ್ರವಾದ ಸಂಗೀತದ ಹಿನ್ನೆಲೆ ಹೊಂದಿರುವ ವಿಡಿಯೋದಲ್ಲಿ, ಆಳವಾದ ಸುರಂಗಗಳು, ಸಾಲಾಗಿ ಇರಿಸಲಾದ ಡ್ರೋನ್‌ಗಳು, ಡಜನ್‌ಗಟ್ಟಲೆ ರಾಕೆಟ್ ಲಾಂಚರ್‌ಗಳು, ಸುರಂಗಗಳ ಗೋಡೆಗಳ ಮೇಲೆ ಇರಾನ್ ಧ್ವಜ ಮತ್ತು ಖಮೇನಿಯ ದೊಡ್ಡ ಭಾವಚಿತ್ರಗಳನ್ನು ಕಾಣಬಹುದು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ನಾಯಕನಿಲ್ಲದ ಇರಾನ್‌ಗೆ ನೇತೃತ್ವ ಯಾರದ್ದು?
ಖಮೇನಿ ಹತ್ಯೆ ಬಗ್ಗೆ ಮೋದಿ ಸರ್ಕಾರ ಮೌನ ಮುರಿಯಲಿ : ಸೋನಿಯಾ, ರಾಗಾ ಆಗ್ರಹ