2028ಕ್ಕೆ ಇಸ್ರೋದಿಂದ ಚಂದ್ರಯಾನ-4

KannadaprabhaNewsNetwork |  
Published : Feb 29, 2024, 02:02 AM ISTUpdated : Feb 29, 2024, 11:10 AM IST
ಇಸ್ರೊ | Kannada Prabha

ಸಾರಾಂಶ

ಚಂದ್ರಯಾನ-3 ಯೋಜನೆ ಯಶಸ್ವಿಯಾದ ಬೆನ್ನಲ್ಲೇ ಚಂದ್ರಯಾನ-4 ಯೋಜನೆಯನ್ನು ಇಸ್ರೋ ರೂಪಿಸಿದ್ದು, ಇದು 2028ರಲ್ಲಿ ಸಾಕಾರಗೊಳ್ಳಲಿದೆ ಎಂದು ಇಸ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನವದೆಹಲಿ: ಚಂದ್ರಯಾನ-3 ಯೋಜನೆ ಯಶಸ್ವಿಯಾದ ಬೆನ್ನಲ್ಲೇ ಚಂದ್ರಯಾನ-4 ಯೋಜನೆಯನ್ನು ಇಸ್ರೋ ರೂಪಿಸಿದ್ದು, ಇದು 2028ರಲ್ಲಿ ಸಾಕಾರಗೊಳ್ಳಲಿದೆ ಎಂದು ಇಸ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಇದಕ್ಕೆ ಲುಪೆಕ್ಸ್‌ ಎಂದು ಹೆಸರಿಡಲಾಗಿದ್ದು, ಚಂದ್ರನಿಂದ ಅಧ್ಯಯನಕ್ಕಾಗಿ ಕಲ್ಲುಗಳನ್ನು ಭೂಮಿಗೆ ತರುವ ಯೋಜನೆ ಇದಾಗಿದೆ.

ಈ ಬಗ್ಗೆ ಮಾತನಾಡಿರುವ ಇಸ್ರೋ ಸ್ಪೇಸ್‌ ಅಪ್ಲಿಕೇಶನ್‌ ಸೆಂಟರ್‌ನ ಡಾ.ನಿಲೇಶ್‌ ದೇಸಾಯಿ, ಇದುವರೆಗೆ ಇಸ್ರೋ ಕೈಗೊಂಡಿರುವ ಚಂದ್ರಯಾನ ಯೋಜನೆಗಳು ಆರ್ಬಿಟರ್‌ ಮತ್ತು ಲ್ಯಾಂಡರ್‌ಗಳನ್ನು ಒಳಗೊಂಡಿದ್ದವು. 

ಈ ಯೋಜನೆಯಲ್ಲಿ ಚಂದ್ರನ ಮೇಲಿಳಿದ ಲ್ಯಾಂಡರ್‌ ಮಾದರಿಯ ಜೊತೆಗೆ ಭೂಮಿಗೆ ಮರಳಲಿದೆ. ಅಲ್ಲದೇ 2040ರ ವೇಳೆಗೆ ಮನುಷ್ಯರನ್ನು ಸಹ ಚಂದ್ರನ ಮೇಲೆ ಕಳುಹಿಸಲು ಇಸ್ರೋ ಯೋಜನೆ ರೂಪಿಸುತ್ತಿದೆ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ