ಸೌರ ಅಧ್ಯಯನದ ‘ಪ್ರೋಬಾ- 3’ ಯೋಜನೆಯ 2 ಉಪಗ್ರಹಗಳನ್ನು ಹೊತ್ತ ಇಸ್ರೋದ ಪಿಎಸ್‌ಎಲ್‌ವಿ ರಾಕೆಟ್‌ ಯಶಸ್ವಿ ಉಡಾವಣೆ

KannadaprabhaNewsNetwork |  
Published : Dec 06, 2024, 09:00 AM ISTUpdated : Dec 06, 2024, 09:50 AM IST
ಇಸ್ರೋ | Kannada Prabha

ಸಾರಾಂಶ

ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ‘ಪ್ರೋಬಾ- 3’ ಯೋಜನೆಯು 2 ಉಪಗ್ರಹಗಳನ್ನು ಹೊತ್ತ ಇಸ್ರೋದ ಪಿಎಸ್‌ಎಲ್‌ವಿ ರಾಕೆಟ್‌, ಶ್ರೀಹರಿಕೋಟದ ಸತೀಶ್‌ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡು, ಯಶಸ್ವಿಯಾಗಿ ಕಕ್ಷೆ ಸೇರಿದೆ.

ಶ್ರೀಹರಿಕೋಟ: ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ‘ಪ್ರೋಬಾ- 3’ ಯೋಜನೆಯು 2 ಉಪಗ್ರಹಗಳನ್ನು ಹೊತ್ತ ಇಸ್ರೋದ ಪಿಎಸ್‌ಎಲ್‌ವಿ ರಾಕೆಟ್‌, ಶ್ರೀಹರಿಕೋಟದ ಸತೀಶ್‌ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡು, ಯಶಸ್ವಿಯಾಗಿ ಕಕ್ಷೆ ಸೇರಿದೆ.ಇಸ್ರೋ ಈ ಮೊದಲು ಪ್ರೋಬಾ- 3 ಉಡಾವಣೆಗೆ ಬುಧವಾರ ಯೋಜನೆ ಹಾಕಿಕೊಂಡಿತ್ತು. 

ಆದರೆ ತಾಂತ್ರಿಕ ದೋಷ ಕಂಡು ಬಂದ ಕಾರಣ ಗುರುವಾರಕ್ಕೆ ಮರುನಿಗದಿ ಪಡಿಸಿತ್ತು. 2 ಉಪಗ್ರಹವನ್ನು ಹೊತ್ತ ರಾಕೆಟ್‌, ಡಿ.5ರ ಸಂಜೆ 4.04ಕ್ಕೆ ಯಶಸ್ವಿಯಾಗಿ ಉಡಾವಣೆಯಾಗಿದೆ. ನಭಕ್ಕೆ ಉಡಾವಣೆಗೊಂಡ 18 ನಿಮಿಷಗಳಲ್ಲಿ ಇಸ್ರೋ ಎರಡೂ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್‌ ಹೇಳಿದ್ದಾರೆ. ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಫೇಸ್ ಇಂಡಿಯಾ ಲಿಮಿಟೆಡ್ ‘ಪ್ರೋಬಾ-3’ ನಿರ್ವಹಣೆ ಮಾಡಲಿದೆ.

ವೈಶಿಷ್ಟ್ಯವೇನು?:

''''''''ಪ್ರೋಬಾ-3'''''''' ಮಿಷನ್‌ನಲ್ಲಿ ಕರೋನಾಗ್ರಾಫ್‌ (310 ಕೇಜಿ) ಮತ್ತು ಆಕಲ್ಟರ್‌ (204 ಕೇಜಿ) ಎಂಬ 2 ಉಪಗ್ರಹಗಳನ್ನು ಒಟ್ಟಿಗೆ ಉಡಾವಣೆ ಮಾಡಿದೆ. ಕಕ್ಷೆ ತಲುಪಿದ ನಂತರ ಉಪಗ್ರಹಗಳು 150 ಮೀ. ಅಂತರದಲ್ಲಿ ಒಟ್ಟಿಗೆ ಹಾರುತ್ತವೆ. ಇವು ಸೂರ್ಯನ ಬೆಳಕಿನ ವಾತಾವರಣದ ಅಧ್ಯಯನವನ್ನು ಮಾಡಲಿವೆ. ಇವು ಸೂರ್ಯನಿಗಿಂತ ಬಿಸಿಯಾಗಿರುತ್ತವೆ ಮತ್ತು ಬಾಹ್ಯಾಕಾಶ ಹವಾಮಾನವನ್ನು ನಿರ್ಧರಿಸುತ್ತವೆ.

ಎರಡೂ ಉಪಗ್ರಹಗಳಲ್ಲಿನ ಉಪಕರಣಗಳು ಸೌರ ರಿಮ್‌ ತಲುಪಲು ಒಂದು ಸಮಯದಲ್ಲಿ ಸುಮಾರು 6 ಗಂಟೆಗಳನ್ನು ತೆಗೆದುಕೊಳ್ಳುತ್ತವೆ. ಭೂಮಿಯ ಸುತ್ತ 19 ಗಂಟೆಗಳ ಕಕ್ಷೆಯನ್ನು ಪ್ರಾರಂಭಿಸುತ್ತವೆ. 44.5 ಮೀ. ಎತ್ತರದ ರಾಕೆಟ್‌ ತನ್ನ ಅಪೇಕ್ಷಿತ ಕಕ್ಷೆಯನ್ನು ತಲುಪಲು 18 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

2 ವರ್ಷ 50 ಕೃತಕ ಸೂರ್ಯಗ್ರಹಣ ಸೃಷ್ಟಿ

ಪ್ರೋಬಾ-3 ಉಪಗ್ರಹಗಳು ಇದು 2 ವರ್ಷಗಳ ಕಾಲ ಕಾರ್ಯಾಚರಿಸುವ ನಿರೀಕ್ಷೆ ಇದೆ. ಈ ಅವಧಿಯಲ್ಲಿ ವಿಜ್ಞಾನಿಗಳು ಪ್ರತಿ ವರ್ಷವೂ ತಲಾ 6 ಗಂಟೆಗಳ 50 ಕೃತಕ ಸೂರ್ಯ ಗ್ರಹಣಗಳನ್ನು ಸೃಷ್ಟಿಸಲಿದ್ದಾರೆ. ಇದು ಸೂರ್ಯನ ಕುರಿತಾದ ಅಧ್ಯಯನ ನಡೆಸಲು ಬಾಹ್ಯಾಕಾಶ ವಿಜ್ಞಾನಿಗಳಿಗೆ ಸಹಾಯವಾಗಲಿದೆ. ಸೂರ್ಯನ ಹೊರಗಿನ ವಾತಾವರಣ ಅಧ್ಯಯನ ಮಾಡುವುದು ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ