ರಾಮಮಂದಿರದ ಉಪಗ್ರಹ ಚಿತ್ರ ಇಸ್ರೊದಿಂದ ಬಿಡುಗಡೆ

KannadaprabhaNewsNetwork |  
Published : Jan 22, 2024, 02:17 AM ISTUpdated : Jan 22, 2024, 11:59 AM IST
ಇಸ್ರೊ ಚಿತ್ರ | Kannada Prabha

ಸಾರಾಂಶ

ಡಿ.16ರಂದು ಉಪಗ್ರಹದಿಂದ ತೆಗೆಯಲಾಗಿದ್ದ ರಾಮಮಂದಿರದ ಚಿತ್ರವನ್ನು ಇಸ್ರೋ ಹಂಚಿಕೊಂಡಿದೆ.

ಬೆಂಗಳೂರು: ರಾಮಮಂದಿರ ಉದ್ಘಾಟನೆಯಾಗುತ್ತಿರುವ ಹೊತ್ತಿನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಪಗ್ರಹದಿಂದ ತೆಗೆಯಲಾಗಿದ್ದ ಅಯೋಧ್ಯೆ ರಾಮಮಂದಿರದ ಚಿತ್ರವನ್ನು ಹಂಚಿಕೊಂಡಿದೆ.

ಇಸ್ರೋದ ಅಂಗಸಂಸ್ಥೆಯಾಗಿರುವ ಹೈದರಾಬಾದ್‌ನಲ್ಲಿರುವ ನ್ಯಾಷನಲ್‌ ರಿಮೋಟ್‌ ಸೆನ್ಸಿಂಗ್‌ ಸೆಂಟರ್‌ ಈ ಚಿತ್ರವನ್ನು ಹಂಚಿಕೊಂಡಿದ್ದು, ಇದರಲ್ಲಿ ಭವ್ಯ ರಾಮಮಂದಿರವನ್ನು ಬಾಹ್ಯಾಕಾಶದಿಂದ ಉಪಗ್ರಹವೊಂದು ಚಿತ್ರ ತೆಗೆದಿದೆ.

ಡಿ.16ರಂದು ಈ ಚಿತ್ರವನ್ನು ತೆಗೆಯಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಈ ಚಿತ್ರದಲ್ಲಿ ಅಯೋಧ್ಯೆ ರಾಮಮಂದಿರದ ಜೊತೆಗೆ ಅದರ ಆಸುಪಾಸಿನಲ್ಲಿರುವ ದಶರಥ ಮಹಲ್‌, ನಿರ್ಮಾಣ ಹಂತದಲ್ಲಿದ್ದ ಅಯೋಧ್ಯಾ ರೈಲು ನಿಲ್ದಾಣ ಮತ್ತು ಪವಿತ್ರ ಸರಯೂ ನದಿಯ ವಿಹಂಗಮ ನೋಟವಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ತಿರುಪತಿ ತುಪ್ಪ ಕಲಬೆರಕೆ ಗೊತ್ತಿದ್ದೂ ಟಿಟಿಡಿ ಖರೀದಿ ಮುಂದುವರಿಕೆ: ಸಿಬಿಐ
ಸಾವರ್ಕರ್‌ಗೆ ಭಾರತ ರತ್ನ ಕೊಟ್ರೆ ಪ್ರಶಸ್ತಿ ಘನತೆ ಹೆಚ್ಚಳ: ಭಾಗವತ್