4 ದಶಕದ ಬಳಿಕ ತೆರೆಯಲಿದೆ ಪುರಿ ಜಗನ್ನಾಥ ದೇಗುಲದ ರತ್ನಭಂಡಾರ!

KannadaprabhaNewsNetwork |  
Published : Jul 11, 2024, 01:36 AM ISTUpdated : Jul 11, 2024, 04:57 AM IST
ಪುರಿ | Kannada Prabha

ಸಾರಾಂಶ

ಶತಮಾನಗಳಿಂದ ತೆರೆಯದೇ ಇಟ್ಟಿದ್ದ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ಜು.14ರಂದು ತೆರೆಯಲು ಒಡಿಶಾ ಸರ್ಕಾರ ನಿರ್ಧರಿಸಿದೆ.

ಪುರಿ: ಶತಮಾನಗಳಿಂದ ತೆರೆಯದೇ ಇಟ್ಟಿದ್ದ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ಜು.14ರಂದು ತೆರೆಯಲು ಒಡಿಶಾ ಸರ್ಕಾರ ನಿರ್ಧರಿಸಿದೆ. ಆಭರಣ ಹಾಗೂ ಬೆಲೆಬಾಳುವ ಲೋಹಗಳಿರುವ ಈ ತಿಜೋರಿಯನ್ನು ಕೊನೆಯ ಬಾರಿಗೆ 1985ರಲ್ಲಿ ತೆರೆಯಲಾಗಿತ್ತು. ಮುಖ್ಯಮಂತ್ರಿ ಮೋಹನ್ ಮಾಝಿ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿ ರತ್ನಭಂಡಾರದಲ್ಲಿರುವ ಅಮೂಲ್ಯ ವಸ್ತುಗಳನ್ನು ದಾಸ್ತಾನು ಮಾಡಲಿದೆ.

ಈ ರತ್ನಭಂಡಾರದಲ್ಲಿರುವ ಸಂಪತ್ತಿನಿಂದ ಇಡೀ ದೇಶಕ್ಕೆ ಎರಡು ವರ್ಷಗಳ ಕಾಲ ಉಚಿತ ಊಟ ಒದಗಿಸಬಹುದು ಎಂದು ಹೇಳಲಾಗಿದ್ದು, ಹಲವು ದೇಶಗಳ ಆರ್ಥಿಕತೆಯನ್ನು ವರ್ಷಗಳ ಕಾಲ ಸುಸ್ಥಿರಗೊಳಿಸಲೂ ಇದು ಸಮರ್ಥವಾಗಿದೆ ಎನ್ನಲಾಗಿದೆ.

ಕಳೆದ ಬಾರಿ ತೆರೆಯಲಾದಾಗ ಭಂಡಾರದಲ್ಲಿ 12,500 ರತ್ನಖಚಿತ ಚಿನ್ನದ ಆಭರಣ ಹಾಗೂ 22,000 ತುಂಡು ಬೆಳ್ಳಿ ಇತ್ತು.

2018ರಲ್ಲಿ ಇದರ ತನಿಖೆ ನಡೆಸುವಂತೆ ನ್ಯಾಯಾಲಯ ಭಾರತದ ಪುರಾತತ್ವ ಇಲಾಖೆಗೆ ಆದೇಶಿಸಿದ್ದಾಗ ಭಂಡಾರದ ಬೀಗದಕೈ ಕಾಣೆಯಾಗಿತ್ತು.

2011ರಲ್ಲಿ ಕೇರಳದ ಅನಂತಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಇದೇ ಮಾದರಿಯಲ್ಲಿ 5 ಅಡಿ ಆಳದ ನೆಲಮಾಳಿಗೆಯಲ್ಲಿ ಹುದುಗಿಸಲಾಗಿದ್ದ 1 ಲಕ್ಷ ಕೋಟಿ ಮೌಲ್ಯದ ಚಿನ್ನಾಭರಣ ಇರುವ ಖಜಾನೆ ಪತ್ತೆಯಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

2025 ಸುಧಾರಣೆಗಳ ಸಾರ್ಥಕ ವರ್ಷ: ಮೋದಿ ಹರ್ಷ
ಪತ್ರಕರ್ತರ ಹಿತರಕ್ಷಣೆಗೆ ಐಎಫ್‌ಡಬ್ಲ್ಯುಜೆ ಆಗ್ರಹ