ಜಪಾನ್‌ನಲ್ಲಿ ಭಾರತದ ಮೊದಲ ಬುಲೆಟ್ ರೈಲು ಪ್ರಾಯೋಗಿಕ ಸಂಚಾರ

KannadaprabhaNewsNetwork |  
Published : Jun 01, 2025, 01:49 AM ISTUpdated : Jun 01, 2025, 06:22 AM IST
ಜಪಾನ್  | Kannada Prabha

ಸಾರಾಂಶ

ಅಹಮದಾಬಾದ್‌ ಮತ್ತು ಮುಂಬೈ ನಡುವೆ ಸಂಚರಿಸಲಿರುವ ದೇಶದ ಮೊದಲ ಬುಲೆಟ್‌ ರೈಲು ಜಪಾನ್‌ನಲ್ಲಿ ತನ್ನ ಪ್ರಾಯೋಗಿಕ ಸಂಚಾರವನ್ನು ಆರಂಭಿಸಿವೆ.  

 ನವದೆಹಲಿ: ಅಹಮದಾಬಾದ್‌ ಮತ್ತು ಮುಂಬೈ ನಡುವೆ ಸಂಚರಿಸಲಿರುವ ದೇಶದ ಮೊದಲ ಬುಲೆಟ್‌ ರೈಲು ಜಪಾನ್‌ನಲ್ಲಿ ತನ್ನ ಪ್ರಾಯೋಗಿಕ ಸಂಚಾರವನ್ನು ಆರಂಭಿಸಿವೆ. ಇವು 2026ಕ್ಕೆ ಭಾರತಕ್ಕೆ ಬರುವ ನಿರೀಕ್ಷೆ ಇದೆ. ಉಭಯ ದೇಶಗಳ ನಡುವಿನ ಸಂಬಂಧ ವೃದ್ಧಿ ಕಾರಣಕ್ಕೆ ಜಪಾನ್ ಭಾರತಕ್ಕೆ ಎರಡು ಶಿಂಕನ್ಸೆನ್ ರೈಲುಗಳನ್ನು ಕೊಡುಗೆಯಾಗಿ ಘೋಷಿಸಿದೆ.

ಮುಂಬೈ- ಅಹಮದಾಬಾದ್‌ ಮಾರ್ಗದಲ್ಲಿ ಮೊದಲ ಶಿಂಕಾನ್ಸೆನ್‌ ಬುಲೆಟ್‌ ರೈಲುಗಳು ಓಡಾಡಲಿದ್ದು, ಜಪಾನ್‌ನಲ್ಲಿ ಸದ್ಯ ಪ್ರಾಯೋಗಿಕ ಪರೀಕ್ಷೆ ನಡೆದಿದೆ. ಭಾರತದೊಂದಿಗಿನ ಒಪ್ಪಂದದ ಬಾಗವಾಗಿ ಜಪಾನ್ ಇ5 ಮತ್ತು ಇ3 ಸರಣಿಯ ಎರಡು ಶಿಂಕನ್ಸೆನ್ ರೈಲುಗಳನ್ನು ಆರಂಭಿಕ ಪರೀಕ್ಷೆಗಾಗಿ ಉಡುಗೊರೆಯಾಗಿ ನೀಡಲಿದೆ. ಗಂಟೆಗೆ 320 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯದಲ್ಲಿ ಸಿದ್ಧಗೊಂಡಿರುವ ಈ ರೈಲುಗಳು ಭಾರತದಲ್ಲೂ ಕಠಿಣ ಪರೀಕ್ಷೆಗೆ ಒಳಪಡಲಿದೆ.

2016ರಲ್ಲಿ ಭಾರತ ಮತ್ತು ಜಪಾನ್ ನಡುವೆ ಈ ಹೈಸ್ಪೀಡ್‌ ಬುಲೆಟ್‌ ರೈಲಿಗೆ ಸಂಬಂಧಪಟ್ಟ ಒಪ್ಪಂದ ನಡೆದಿತ್ತು. ಈ ಹೈಸ್ಪೀಡ್‌ ರೈಲಿನ ಕಾರಿಡಾರ್‌ 508 ಕಿ.ಮೀ ಉದ್ದದಲ್ಲಿ ನಿರ್ಮಾಣವಾಗಲಿದ್ದು, ಇದು ಮುಂಬೈ ಮತ್ತು ಅಹಮದಾಬಾದ್‌ ನ್ನು ಕೇವಲ 2 ಗಂಟೆ 7 ನಿಮಿಷದಲ್ಲಿ ಸಂಚರಿಸಲಿದೆ. ಈ ರೈಲು ಥಾಣೆ, ವಾಪಿ, ಸೂರತ್‌, ವಡೋದರಾ ಸೇರಿದಂತೆ ಒಟ್ಟು 12 ಮಾರ್ಗಗಳ ಮೂಲಕ ಹಾದು ಹೋಗಲಿದೆ.

2030ರ ವೇಳೆಗೆ ಮುಂಬೈ- ಅಹಮದಾಬಾದ್ ನಡುವೆ ಬುಲೆಟ್‌ ರೈಲಿನ ಮೊದಲ ಸಂಚಾರ ನಡೆಯುವ ಸಾಧ್ಯತೆ ಇದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ : ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ