ಕುನೋ: ನಮೀಬಿಯಾ ಚೀತಾ ಜ್ವಾಲಾಗೆ 3 ಮರಿಗಳ ಜನನ

KannadaprabhaNewsNetwork |  
Published : Jan 24, 2024, 02:00 AM IST
ಚೀತಾ ಮರಿಗಳು | Kannada Prabha

ಸಾರಾಂಶ

ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಜ್ವಾಲಾ ಎಂಬ ಚೀತಾಗೆ ಮೂರು ಮರಿಗಳು ಜನಿಸಿವೆ ಎಂದು ಕೇಂದ್ರ ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್‌ ತಿಳಿಸಿದ್ದಾರೆ.

ಭೋಪಾಲ್‌: ಕುನೋ ರಾಷ್ಟ್ರೀಯ ಉದ್ಯಾನದಲ್ಲಿರುವ ನಮೀಬಿಯನ್‌ ಚೀತಾ ‘ಜ್ವಾಲಾ’ಗೆ ಜ.20ರಂದು ಮೂರು ಮುದ್ದಾದ ಮರಿಗಳು ಜನಿಸಿವೆ ಎಂದು ಕೇಂದ್ರ ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್‌ ತಿಳಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ‘ ಒಂದೇ ತಿಂಗಳಲ್ಲಿ ಕುನೋಗೆ 6 ಅತಿಥಿಗಳ ಆಗಮನವಾಗಿದೆ. ಕಳೆದೆರಡು ವಾರದ ಮುಂಚೆ ಆಶಾ ಮೂರು ಮುದ್ದಾದ ಚೀತಾ ಮರಿಗಳಿಗೆ ಜನ್ಮ ನೀಡಿದಂತೆ ಇಂದು ಜ್ವಾಲಾ ಸಹ ಮೂರು ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ.

ಈ ಸಮಯದಲ್ಲಿ ನಾನು ಪ್ರಾಜೆಕ್ಟ್‌ ಚೀತಾದ ಎಲ್ಲ ಸಿಬ್ಬಂದಿಗಳು ಮತ್ತು ವನ್ಯಪ್ರೇಮಿಗಳಿಗೆ ಅಭಿನಂದಿಸುತ್ತೇನೆ ಮತ್ತು ಭಾರತದಲ್ಲಿ ವನ್ಯಜೀವಿಗಳ ಸಂತತಿ ಬೆಳೆಯಲಿ ಎಂದು ಆಶಿಸುತ್ತೇನೆ’ ಎಂದು ತಿಳಿಸಿದ್ದಾರೆ.

ಮೂರು ಮರಿಗಳ ಜನನದೊಂದಿಗೆ ಭಾರತದಲ್ಲಿ ಚಿರತೆಗಳ ಸಂಖ್ಯೆ 20ಕ್ಕೇರಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಿಜೆಪಿಯ ರಿತು ಮುಂಬೈಗೆಮೊದಲ ಬಿಜೆಪಿ ಮೇಯರ್‌
ಬಾಂಗ್ಲಾ ಜೈಲಲ್ಲಿ ಹಿಂದೂ ಸಂಸದಸೇನ್‌ ನಿಗೂಢ ಸಾವು: ಅನುಮಾನ