ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟ ಸೇರಿದ್ದ ಕರ್ನಾಟಕದ ಐವರಿಗೆ ಸೋಮವಾರ ಖಾತೆ ಹಂಚಿಕೆ ಮಾಡಿದ್ದು, ಎಲ್ಲ ಸಚಿವರೂ ಉತ್ತಮ ಖಾತೆಗಳನ್ನೇ ಪಡೆದಿದ್ದಾರೆ.
ಸೋಮವಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಮೋದಿ-2 ಸರ್ಕಾರದಲ್ಲಿ ಹೊಂದಿದ್ದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆಯನ್ನೇ ಮತ್ತೆ ನೀಡಲಾಗಿದೆ. ಆದರೆ ಈ ಹಿಂದೆ ಸಂಸದೀಯ ಹಾಗೂ ಕಲ್ಲಿದ್ದಲು ಖಾತೆ ಹೊಂದಿದ್ದ ಧಾರವಾಡ ಸಂಸದ ಪ್ರಹ್ಲಾದ ಜೋಶಿ ಅವರಿಗೆ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ (ಪಡಿತರ) ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ನೀಡಲಾಗಿದೆ.
ಇದೇ ಮೊದಲ ಬಾರಿ ಕೇಂದ್ರ ಮಂತ್ರಿ ಆದ ಮಂಡ್ಯ ಜೆಡಿಎಸ್ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ನೀಡಲಾಗಿದೆ.ರಾಜ್ಯ ಸಚಿವರು:
ಮೊದಲ ಬಾರಿ ಕೇಂದ್ರ ಮಂತ್ರಿ ಆಗಿರುವ ತುಮಕೂರು ಸಂಸದ ವಿ. ಸೋಮಣ್ಣ ಅವರಿಗೆ ಜಲಶಕ್ತಿ ಸಚಿವಾಲಯ ಮತ್ತು ರೈಲ್ವೇ ಸಚಿವಾಲಯದ ರಾಜ್ಯ ಸಚಿವ ಹುದ್ದೆ ನೀಡಲಾಗಿದೆ
1. ನಿರ್ಮಲಾ ಸೀತಾರಾಮನ್....ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರ
2. ಎಚ್.ಡಿ.ಕುಮಾರಸ್ವಾಮಿ...ಭಾರೀ ಕೈಗಾರಿಕೆ ಮತ್ತು ಉಕ್ಕು3. ಪ್ರಹ್ಲಾದ ಜೋಶಿ...ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ; ಹೊಸ ಮತ್ತು ನವೀಕರಿಸಬಹುದಾದ ಇಂಧನರಾಜ್ಯ ದರ್ಜೆ