ಬೆಂಗಳೂರು : ಹಾಕಿ ದಂತಕತೆ ಮೇಜರ್ ಧ್ಯಾನ್‌ಚಂದ್‌ರ ಹುಟ್ಟುಹಬ್ಬ (ಆ.29)ದ ಅಂಗವಾಗಿ ಶುಕ್ರವಾರ ಕರ್ನಾಟಕ ರಾಜ್ಯ ಒಲಿಂಪಿಕ್ಸ್ ಸಮಿತಿ (ಕೆಒಎ) ಕಂಠೀರವ ಕ್ರೀಡಾಂಗಣದ ಆವರಣದಲ್ಲಿರುವ ಒಲಿಂಪಿಕ್ಸ್ ಭವನದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಿತು.
ಈ ವೇಳೆ ಕೆಒಎ ಅಧ್ಯಕ್ಷ ಡಾ.ಕೆ.ಗೋವಿಂದರಾಜು, ಧ್ಯಾನ್‌ಚಂದ್‌ರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ರಾಜ್ಯದ ಮಾಜಿ ಅಥ್ಲೀಟ್‌ಗಳಾದ ಧ್ಯಾನ್‌ಚಂದ್ ಪ್ರಶಸ್ತಿ ವಿಜೇತ ಉದಯ್ ಕೆ ಪ್ರಭು, ಅರ್ಜುನ ಪ್ರಶಸ್ತಿ ವಿಜೇತೆ ರೀತ್ ಅಬ್ರಹಾಂ, ಎಚ್.ಎಂ.ಜ್ಯೋತಿ, ಮಾಜಿ ಅಂ.ರಾ. ಬಾಸ್ಕೆಟ್‌ಬಾಲ್ ಆಟಗಾರರಾದ ಆರ್.ರಾಜನ್‌ಗೆ ವಿಶೇಷ ಸ್ಮರಣಿಕೆ ನೀಡಿಮ ಗೌರವಿಸಿದರು.