ದಿಲ್ಲಿ ಜಲಮಂಡಳಿ ಹಗರಣ ಇ.ಡಿ. ಸಮನ್ಸ್‌ಗೂ ಕೇಜ್ರಿ ಚಕ್ಕರ್‌

KannadaprabhaNewsNetwork |  
Published : Mar 19, 2024, 12:47 AM IST
ಕೇಜ್ರಿವಾಲ್‌ | Kannada Prabha

ಸಾರಾಂಶ

ದಿಲ್ಲಿ ಮದ್ಯ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.) ನೀಡಿದ್ದ 8 ಸಮನ್ಸ್‌ಗಳಿಗೆ ಗೈರು ಹಾಜರಾಗಿದ್ದ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್‌ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು, ಸೋಮವಾರ ದಿಲ್ಲಿ ಜಲಮಂಡಳಿ ಹಗರಣದ ಇ.ಡಿ. ಸಮನ್ಸ್‌ಗೂ ಗೈರು ಹಾಜರಾಗಿದ್ದಾರೆ.

ನವದೆಹಲಿ: ದಿಲ್ಲಿ ಮದ್ಯ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.) ನೀಡಿದ್ದ 8 ಸಮನ್ಸ್‌ಗಳಿಗೆ ಗೈರು ಹಾಜರಾಗಿದ್ದ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್‌ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು, ಸೋಮವಾರ ದಿಲ್ಲಿ ಜಲಮಂಡಳಿ ಹಗರಣದ ಇ.ಡಿ. ಸಮನ್ಸ್‌ಗೂ ಗೈರು ಹಾಜರಾಗಿದ್ದಾರೆ.

ಈ ಸಮನ್ಸ್‌ ಅಕ್ರಮ ಎಂದು ಕರೆದಿರುವ ಆಪ್‌, ಕೇಜ್ರಿವಾಲ್‌ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಹೋಗುವುದನ್ನು ತಡೆಯಲು ಇಂಥ ಸಮನ್ಸ್‌ಗಳನ್ನು ಮೋದಿ ಸರ್ಕಾರವು ಇ.ಡಿ. ಮೂಲಕ ಕೊಡಿಸುತ್ತಿದೆ ಎಂದು ಕಿಡಿಕಾರಿದೆ. ಆದರೆ ಬಿಜೆಪಿ ಈ ಆರೋಪ ನಿರಾಕರಿಸಿದೆ.

ದಿಲ್ಲಿ ಜಲಮಂಡಳಿಯು, ನೀರು ಪೂರೈಕೆ ಉಪಕರಣ ಅಳವಡಿಕೆಯನ್ನು ಒಂದು ನಿರ್ದಿಷ್ಟ ಕಂಪನಿಗೆ ನೀಡಿತ್ತು. ಆ ಕಂಪನಿಯು ಗುತ್ತಿಗೆ ಪಡೆಯಲು ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಭಾರಿ ಲಂಚ ನೀಡಿತ್ತು ಎಂಬುದು ಆರೋಪವಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಶ್ಮಿಕಾ-ವಿಜಯ್‌ ಮದುವೆ ಪ್ರಸಾರಕ್ಕೆ ₹60 ಕೋಟಿ ಆಫರ್‌!
ಬ್ರಹ್ಮಪುತ್ರಾ ನದಿ ಮೇಲೆ ಅತ್ಯಾಧುನಿಕ 6 ಪಥದ ಸೇತುವೆ