ತಿರುವನಂತಪುರ: ಕೇರಳದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ.45ರಷ್ಟು ಜನರು ತಮ್ಮ ಜೀವನ ಶೈಲಿಯಿಂದಾಗಿ ಕಾಯಿಲೆಗೆ ಒಳಗಾಗಿದ್ದಾರೆ ಎಂದು ವರದಿಯೊಂದು ಹೇಳಿದೆ. ಈ ಪೈಕಿ ಹೆಚ್ಚಿನವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅದರಲ್ಲಿ ಕೆಲವರು ಮಾತ್ರ ಚಿಕಿತ್ಸೆಗೆ ಮುಂದಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.
ಯಾವ ಕಾಯಿಲೆ ಎಷ್ಟು ಪತ್ತೆ:
45 ಲಕ್ಷ ಜನರಲ್ಲಿ 2.03 ಲಕ್ಷ ಜನರಲ್ಲಿ ಕ್ಯಾನ್ಸರ್ ಪತ್ತೆಯಾಗಿದ್ದು, 1.26 ಲಕ್ಷ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, 45,000 ಸ್ತ್ರೀಯರಲ್ಲಿ ಗರ್ಭಾಶಯದ ಕ್ಯಾನ್ಸರ್ ಕಾಣಿಸಿಕೊಂಡಿದೆ. 2.42 ಲಕ್ಷ ಜನರಲ್ಲಿ ಕ್ಷಯರೋಗದ ಅಂಶ ಇರುವುದು ತಿಳಿದುಬಂದಿದೆ. 2.5 ಲಕ್ಷ ಜನರಲ್ಲಿ ಕುಷ್ಠ ರೋಗದ ಲಕ್ಷಣಗಳು ಕಾಣಿಸಿಕೊಂಡಿದೆ.11 ಲಕ್ಷ ಜನರಲ್ಲಿ ಕ್ಯಾನ್ಸರ್‌ನ ಲಕ್ಷಣಗಳು ಇದ್ದರೂ ಅವರಲ್ಲಿ ಕೇವಲ 1.9 ಲಕ್ಷ ಜನರು ವೈದ್ಯರನ್ನು ಸಂಪರ್ಕಿಸಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದೆ.