ತಿರುವನಂತಪುರಂ : ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸಲು ಕೇರಳ ಆರೋಗ್ಯ ಸಚಿವರ ಸಲಹೆ

KannadaprabhaNewsNetwork |  
Published : Jan 05, 2025, 01:32 AM ISTUpdated : Jan 05, 2025, 06:07 AM IST
Veena George

ಸಾರಾಂಶ

ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ವೈರಲ್‌ ಜ್ವರ ಮತ್ತು ಉಸಿರಾಟದ ಸೋಂಕಿನ ಕುರಿತು ರಾಜ್ಯ ಸರ್ಕಾರ ನಿಗಾ ಇಟ್ಟಿದೆ.

ತಿರುವನಂತಪುರಂ: ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ವೈರಲ್‌ ಜ್ವರ ಮತ್ತು ಉಸಿರಾಟದ ಸೋಂಕಿನ ಕುರಿತು ರಾಜ್ಯ ಸರ್ಕಾರ ನಿಗಾ ಇಟ್ಟಿದೆ. ಈಗಲೇ ಚೀನಾ ವೈರಸ್‌ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ತಿಳಿಸಿದ್ದಾರೆ. ಇದೇ ವೇಳೆ ಮಕ್ಕಳು, ವಯಸ್ಕರು, ಗರ್ಭಿಣಿಯರು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವ ವೇಳೆ ಮಾಸ್ಕ್‌ ತೊಡುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

ಚೀನಾದಲ್ಲಿ ಸಾಂಕ್ರಾಮಿಕ ರೂಪದಲ್ಲಿ ಅಥವಾ ತೀವ್ರವಾಗಿ ಇತರೆ ಪ್ರದೇಶಗಳಿಗೆ ಹರಡುವ ವೈರಸ್‌ ಪತ್ತೆಯಾಗಿದೆ ಎಂಬ ಕುರಿತು ಈವರೆಗೆ ಯಾವುದೇ ವರದಿ ಬಂದಿಲ್ಲ. ಮಲಯಾಳಿಗಳು ಜಗತ್ತಿನಾದ್ಯಂತ ಹರಡಿರುವುದು ಹಾಗೂ ವಲಸಿಗರು ಆಗಾಗ ಚೀನಾ ಸೇರಿ ವಿವಿಧೆಡೆಯಿಂದ ರಾಜ್ಯಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಈ ಸೋಂಕಿನ ಕುರಿತು ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಫೇಸ್‌ಬುಕ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಜಾರ್ಜ್‌ ತಿಳಿಸಿದ್ದಾರೆ.

ನಾವು ಚೀನಾದ ಪರಿಸ್ಥಿತಿ ಮೇಲೆ ಕಣ್ಣಿಟ್ಟಿದ್ದೇವೆ. ಇತರೆ ಪ್ರದೇಶಗಳಿಗೆ ವ್ಯಾಪಕವಾಗಿ ಹರಡುವ ಸಾಂಕ್ರಾಮಿಕ ರೋಗ ಪತ್ತೆಯಾದರೆ ನಾವು ಅದನ್ನು ತೀವ್ರಗತಿಯಲ್ಲಿ ಹರಡುವುದನ್ನು ತಡೆಯಲು ಮುಂದಾಗಬೇಕಾಗುತ್ತದೆ. ಇದೇ ವೇಳೆ ಸಚಿವರು ಗರ್ಭಿಣಿಯರು, ಮಕ್ಕಳು ಮತ್ತು ಹಿರಿಯರಿಗೆ ಇಂಥ ಪರಿಸ್ಥಿತಿಯಲ್ಲಿ ಹೆಚ್ಚಿನ ಜಾಗೃತೆವಹಿಸುವಂತೆ ಕಿವಿಮಾತು ಹೇಳಿದ ಅವರು, ಮಾಸ್ಕ್‌ ಹಾಕುವಂತೆ ಸಲಹೆ ನೀಡಿದ್ದಾರೆ.

ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ(ಎನ್‌ಸಿಡಿಸಿ)ವು ದೇಶದಲ್ಲಿ ಉಸಿರಾಟದ ಮತ್ತು ಚಳಿಗಾಲದ ಸಮಯದಲ್ಲಿ ಹರಡುವ ಶೀತಜ್ಞರ ಕುರಿತು ನಿಗಾ ಇಟ್ಟಿದೆ. ಚೀನಾದಲ್ಲಿ ಎಚ್‌ಎಂಪಿವಿ ಸೋಂಕು ಉಲ್ಬಣಗೊಂಡ ಬಳಿಕ ಅಂತಾರಾಷ್ಟ್ರೀಯ ಏಜೆನ್ಸಿಗಳ ಜತೆಗೂ ನಿರಂತರ ಸಂಪರ್ಕದಲ್ಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!