ಶಾಂತಿಯತ್ತ ಮಣಿಪುರ ಹೆಜ್ಜೆ - ಕೇಂದ್ರ, ರಾಜ್ಯ, ಕುಕಿಝೋಗಳ ನಡುವೆ ಮಹತ್ವದ ಒಪ್ಪಂದ

KannadaprabhaNewsNetwork |  
Published : Sep 05, 2025, 01:00 AM IST
ಮಣಿಪುರ  | Kannada Prabha

ಸಾರಾಂಶ

  ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೂ ಮುನ್ನ, ಜನಾಂಗೀಯ ಹಿಂಸಾಚಾರದಲ್ಲಿ ನಲುಗಿರುವ ಮಣಿಪುರದಲ್ಲಿ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಕೇಂದ್ರ ಗೃಹ ಸಚಿವಾಲಯ, ಮಣಿಪುರ ಸರ್ಕಾರ ಮತ್ತು ಎರಡು ಪ್ರಮುಖ ಕುಕಿ-ಝೋ ಗುಂಪುಗಳು ಮಹತ್ವದ ತ್ರಿಪಕ್ಷೀಯ ಒಪ್ಪಂದವೊಂದಕ್ಕೆ ಸಹಿಹಾಕಿವೆ.

 ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೂ ಮುನ್ನ, ಜನಾಂಗೀಯ ಹಿಂಸಾಚಾರದಲ್ಲಿ ನಲುಗಿರುವ ಮಣಿಪುರದಲ್ಲಿ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಕೇಂದ್ರ ಗೃಹ ಸಚಿವಾಲಯ, ಮಣಿಪುರ ಸರ್ಕಾರ ಮತ್ತು ಎರಡು ಪ್ರಮುಖ ಕುಕಿ-ಝೋ ಗುಂಪುಗಳು ಮಹತ್ವದ ತ್ರಿಪಕ್ಷೀಯ ಒಪ್ಪಂದವೊಂದಕ್ಕೆ ಸಹಿಹಾಕಿವೆ.

ಅದರಂತೆ ಮಣಿಪುರದ ಕ್ಷೇತ್ರೀಯ ಸಮಗ್ರತೆ ಕಾಯ್ದುಕೊಳ್ಳುವ, ಸೂಕ್ಷ್ಮ ಪ್ರದೇಶಗಳಿಂದ ಉಗ್ರ ಶಿಬಿರಗಳನ್ನು ಬೇರೆಡೆ ಸ್ಥಳಾಂತರಿಸುವ, ರಾಷ್ಟ್ರೀಯ ಹೆದ್ದಾರಿ-2 ಅನ್ನು ಜನಸಂಚಾರಕ್ಕೆ ಮುಕ್ತಗೊಳಿಸುವ ಹಾಗೂ ರಾಜ್ಯದಲ್ಲಿ ಶಾಂತಿ, ಸ್ಥಿರತೆ ಸ್ಥಾಪನೆಗೆ ಪರಿಹಾರೋಪಾಯ ಕಂಡುಹಿಡಿಯಲು ನಿರ್ಧರಿಸಲಾಗಿದೆ.

ಜನಾಂಗೀಯ ಹಿಂಸಾಚಾರ ಹಿನ್ನೆಲೆಯಲ್ಲಿ ಮಣಿಪುರದಲ್ಲಿ ಫೆ.13ರಿಂದ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಗಿದೆ. ಜನಾಂಗೀಯ ಹಿಂಸಾಚಾರ ಹಿನ್ನೆಲೆಯಲ್ಲಿ ಆಗಿನ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ಅವರು ಫೆ.9ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಳೆದ ಒಂದು ವರ್ಷಗಳಿಂದ ರಾಜ್ಯದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ನಡೆಯುತ್ತಿರುವ ಈ ಹಿಂಸಾಚಾರಕ್ಕೆ ಕಳೆದ ಎರಡೂವರೆ ವರ್ಷಗಳಲ್ಲಲಿ 200ಕ್ಕ ಹೆಚ್ಚು ಜನ ಬಲಿಯಾಗಿದ್ದು, ಸಾವಿರಾರು ಜನರು ನಿರ್ವಸಿತರಾಗಿದ್ದಾರೆ. ನೂರಾರು ಮಂದಿ ನೆಲೆ ಕಳೆದುಕೊಂಡಿದ್ದಾರೆ. ಹಿಂಸಾಚಾರ ಆರಂಭವಾದ ಬಳಿಕ ಎನ್‌ಎಚ್‌-2 ಮೇಲೆ ಕುಕಿಗಳು ನಿಯಂತ್ರಣ ಸಾಧಿಸಿದ್ದು, ಇದರಿಂದ ಈ ಭಾಗದಲ್ಲಿ ವಾಹನಗಳ ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ಎನ್‌ಚ್‌-2 ಮಣಿಪುರ ಮತ್ತು ನಾಗಾಲ್ಯಾಂಡ್‌ ಹಾಗೂ ಈಶಾನ್ಯ ರಾಜ್ಯಗಳ ಇತರೆ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಮಹತ್ವದ ಹೆದ್ದಾರಿಯಾಗಿದೆ.

ರಾಷ್ಟ್ರೀಯ ಹೆದ್ದಾರಿಯನ್ನು ಮತ್ತೆ ತೆರೆಯುವುದು ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಅಗತ್ಯ ವಸ್ತುಗಳ ಸಾಗಣೆಗೆ ಅವಕಾಶ ನೀಡುವುದರಿಂದ ಸಂತ್ರಸ್ತರ ಶಿಬಿರಗಳಲ್ಲಿರುವ ಕುಟುಂಬಗಳು ಹಾಗೂ ಜನರಿಗೆ ನೆಮ್ಮದಿಯಾದಂತಾಗಿದೆ.

PREV
Read more Articles on

Recommended Stories

ನ್ಯಾ। ವರ್ಮಾ ವಿರುದ್ಧದ ತನಿಖೆಗೆ ಕನ್ನಡಿಗ ಭಟ್
ಗುಟ್ಟಾಗಿ ನಟಿ ರಶ್ಮಿಕಾ, ವಿಜಯ್‌ ನಿಶ್ಚಿತಾರ್ಥ?