ಇರಾನ್‌ನ ವಿದ್ಯುತ್‌, ನೀರು ಶುದ್ಧೀಕರಣ ಘಟಕ ಧ್ವಂಸ

KannadaprabhaNewsNetwork |  
Published : Jul 19, 2026, 03:00 AM IST
Iran

ಸಾರಾಂಶ

ಇರಾನ್‌ನ ದಕ್ಷಿಣ ಹಾರ್ಮೋಜ್ಗಾನ್‌ ಪ್ರಾಂತ್ಯದ ವಿದ್ಯುತ್‌ ಮತ್ತು ನೀರು ಶುದ್ಧೀಕರಣ ಸ್ಥಾವರದ ಮೇಲೆ ಅಮೆರಿಕದ ದಾಳಿ ಮಾಡಿದರೆ, ಕುವೈತ್‌ನ ಇದೇ ಘಟಕಗಳ ಮೇಲೆ ದಾಳಿ ಮಾಡುವ ಮೂಲಕ ಇರಾನ್‌ ಪ್ರತೀಕಾರ ತೆಗೆದುಕೊಂಡಿದೆ.

 ಟೆಹ್ರಾನ್/ವಾಷಿಂಗ್ಟನ್‌/ದುಬೈ :  ಅಮೆರಿಕ ಮತ್ತು ಇರಾನ್‌ ನಡುವಿನ ಹೊಸ ಸುತ್ತಿನ ಸಮರ ಶನಿವಾರ 7 ದಿನಗಳನ್ನು ಪೂರೈಸಿದ್ದು, ಎರಡೂ ದೇಶಗಳು ದಾಳಿ ಪ್ರತಿದಾಳಿ ಮುಂದುವರಿಸಿವೆ. ಇರಾನ್‌ನ ದಕ್ಷಿಣ ಹಾರ್ಮೋಜ್ಗಾನ್‌ ಪ್ರಾಂತ್ಯದ ವಿದ್ಯುತ್‌ ಮತ್ತು ನೀರು ಶುದ್ಧೀಕರಣ ಸ್ಥಾವರದ ಮೇಲೆ ಅಮೆರಿಕದ ದಾಳಿ ಮಾಡಿದರೆ, ಕುವೈತ್‌ನ ಇದೇ ಘಟಕಗಳ ಮೇಲೆ ದಾಳಿ ಮಾಡುವ ಮೂಲಕ ಇರಾನ್‌ ಪ್ರತೀಕಾರ ತೆಗೆದುಕೊಂಡಿದೆ.  

ಅಮೆರಿಕ ದಾಳಿ:

ಅಮೆರಿಕವು ಇರಾನ್‌ನ ದಕ್ಷಿಣ ಹಾರ್ಮೋಜ್ಗಾನ್ ಪ್ರಾಂತ್ಯದಲ್ಲಿ ವಿದ್ಯುತ್ ಮತ್ತು ನೀರು ಶುದ್ಧೀಕರಣ ಸ್ಥಾವರವನ್ನು ಧ್ವಂಸ ಮಾಡಿದೆ. ಇರಾನ್‌ ಕರಾವಳಿಯ ಬೊಂಜಿ ಗ್ರಾಮ, ಸುರಂಗಗಳು, ಸೇತುವೆಗಳು, ಬಂದರ್ ಅಬ್ಬಾಸ್‌ಗೆ ಹೋಗುವ ಹೆದ್ದಾರಿಗಳು ಮತ್ತು ಕ್ವೆಷ್ಮ್ ದ್ವೀಪದ ಮೇಲೆ ದಾಳಿಗಳು ನಡೆದಿವೆ. ಇರಾನ್ ಪ್ರಕಾರ, ಅಮೆರಿಕದ ದಾಳಿಗೆ ಕನಿಷ್ಠ 46 ಜನ ಸಾವಿಗೀಡಾಗಿದ್ದು, 400ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.  

ಇರಾನ್‌ ಪ್ರತಿದಾಳಿ:

ಇರಾನ್ ಶನಿವಾರ ಕುವೈತ್‌ನ ನೀರು ಶುದ್ಧೀಕರಣ ಮತ್ತು ವಿದ್ಯುತ್ ಉತ್ಪಾದನಾ ಸ್ಥಾವರದ ಮೇಲೆ ದಾಳಿ ಮಾಡಿದೆ. ‘ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಅಂತರಿಕ್ಷದಲ್ಲೇ ನಾಶಪಡಿಸಲಾಗಿದೆ. ಆದರೂ ಕೆಲವು ಸ್ಥಾವರಗಳು ದಾಳಿಗೊಳಗಾಗಿ ಬೆಂಕಿ ಉಂಟಾಗಿದೆ. ಫೈರ್ ಫೈಟರ್‌ಗಳು ಮತ್ತು ಒಬ್ಬ ಕಾರ್ಮಿಕರು ಗಾಯಗೊಂಡಿದ್ದಾರೆ’ ಎಂದು ಕುವೈತ್‌ ಅಧಿಕಾರಿಗಳು ತಿಳಿಸಿದ್ದಾರೆ. ಇರಾನ್ ಇತರ ಗಲ್ಫ್ ದೇಶಗಳ ಮೇಲೂ ದಾಳಿ ನಡೆಸಿದೆ ಎಂದು ವರದಿಯಾಗಿದೆ.

ರಕ್ತಕ್ಕಾಗಿ ರಕ್ತ: ಟ್ರಂಪ್‌ ಕುಟಂಬದ ವಿರುದ್ಧ ಇರಾನ್‌ ಪೋಸ್ಟರ್‌

ರಕ್ತಕ್ಕಾಗಿ ರಕ್ತ ಎಂಬ ಪರ್ಷಿಯನ್ ಘೋಷಣೆಯುಳ್ಳ ಪೋಸ್ಟರ್‌ ಟೆಹ್ರಾನ್‌ನಲ್ಲಿ ಪ್ರತ್ಯಕ್ಷವಾಗಿದೆ. ಇದರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಕುಟುಂಬವು ಅಮೆರಿಕದ ಧ್ವಜವನ್ನು ಹೊದಿಸಿದ ಶವಪೆಟ್ಟಿಗೆಯ ಮೇಲೆ ಇದೆ. ಇದರಲ್ಲಿ ಟ್ರಂಪ್ ಜೊತೆಗೆ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಮತ್ತು ಇವಾಂಕಾ, ಡೊನಾಲ್ಡ್ ಜೂನಿಯರ್, ಎರಿಕ್, ಟಿಫಾನಿ ಮತ್ತು ಬ್ಯಾರನ್ ಟ್ರಂಪ್ ಸೇರಿದಂತೆ ಅವರ ಐದು ಮಕ್ಕಳಿದ್ದಾರೆ. ಉರಿಯುತ್ತಿರುವ ಶ್ವೇತಭವನವು ಹಿನ್ನೆಲೆಯಾಗಿ ಇದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮಮ್ಮುಟ್ಟಿ, ಕಾರ್ತಿಕ್ ಶ್ರೇಷ್ಠ ನಟರು, ಯಾಮಿ ಶ್ರೇಷ್ಠ ನಟಿ
ಅಹಮದಾಬಾದ್‌ ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ: 9 ಬಲಿ