ಭಾರತದ 1.25 ಕೋಟಿ ಮಕ್ಕಳಿಗೆ ಬೊಜ್ಜು ಸಮಸ್ಯೆ: ಲ್ಯಾನ್ಸೆಟ್‌ ವರದಿ

KannadaprabhaNewsNetwork |  
Published : Mar 02, 2024, 01:46 AM IST
ಬೊಜ್ಜು | Kannada Prabha

ಸಾರಾಂಶ

1990ಕ್ಕೆ ಹೋಲಿಸಿದರೆ ಬೊಜ್ಜು ಹೊಂದಿರುವ ಮಕ್ಕಳ ಪ್ರಮಾಣದಲ್ಲಿ 40 ಲಕ್ಷದಷ್ಟು ಏರಿಕೆಯಾಗಿರುವುದಾಗಿ ಲ್ಯಾನ್ಸೆಟ್ ವರದಿ ತಿಳಿಸಿದೆ.

ನವದೆಹಲಿ: ಭಾರತದಲ್ಲಿ 1.25 ಕೋಟಿ ಮಕ್ಕಳು ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ. 1990ಕ್ಕೆ ಹೋಲಿಸದಿರೆ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಪ್ರಮಾಣದಲ್ಲಿ 40 ಲಕ್ಷದಷ್ಟು ಭಾರೀ ಏರಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ.ಲ್ಯಾನ್ಸೆಟ್‌ ಜರ್ನಲ್‌ನಲ್ಲಿ ಪ್ರಕಟವಾಗಿರುವ ವರದಿ ಅನ್ವಯ 2022ರಲ್ಲಿ ಭಾರತದಲ್ಲಿ 5ರಿಂದ 19ರ ವಯೋಮಾನದ ನಡುವಿನ 1.25 ಕೋಟಿ ಮಕ್ಕಳು ಬೊಜ್ಜಿನ ಸಮಸ್ಯೆಗೆ ತುತ್ತಾಗಿದ್ದರು. ಈ ಪೈಕಿ 7.3 ಕೋಟಿ ಬಾಲಕರು ಮತ್ತು 5.2 ಕೋಟಿ ಬಾಲಕಿಯರು. ಜೊತೆಗೆ ಭಾರತದಲ್ಲಿ 4.4 ಕೋಟಿ ಮಹಿಳೆಯರು ಮತ್ತು 2.6 ಕೋಟಿ ಪುರುಷರ ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ.ಇನ್ನು ಇದೇ ರೀತಿಯ ಸಮಸ್ಯೆಯಿಂದ ಬಳಲುತ್ತಿರುವವರ ಮಕ್ಕಳು, ಯುವಕರು ಮತ್ತು ಹಿರಿಯರ ಪ್ರಮಾಣ ಜಾಗತಿಕ ಮಟ್ಟದಲ್ಲಿ 100 ಕೋಟಿ ದಾಟಿದೆ ಎಂದು ವರದಿ ಎಚ್ಚರಿಸಿದೆ.ಹವಾಮಾನ ಬದಲಾವಣೆ, ಕೋವಿಡ್‌ ಸಾಂಕ್ರಾಮಿಕ ಸೃಷ್ಟಿಸಿದ ಅವಾಂತರಗಳು ಉಕ್ರೇನ್‌-ರಷ್ಯಾ ಯುದ್ಧಗಳು ವಿಶ್ವದಾದ್ಯಂತ ವಿವಿಧ ವಯೋಮಾನದ ಜನರಲ್ಲಿ ಬೊಜ್ಜು ಮತ್ತು ಅಪೌಷ್ಠಿಕತೆಯ ಸಮಸ್ಯೆಯನ್ನು ಹೆಚ್ಚಿಸಿವೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗಲ್ವಾನ್‌ ಸಂಘರ್ಷದ ಸೇನಾ ಪುಸ್ತಕದಿಂದ‘ರಾಜಕೀಯ ಕದನ’!
ಬಂಗಾಳದಲ್ಲಿ ಬಾಬ್ರಿ ಶೈಲಿ ಮಸೀದಿ ನಿರ್‍ಮಾಣ ಶುರು