ಲ್ಯಾಂಡ್‌ಲೈನ್‌ ಸಂಖ್ಯೆಯಲ್ಲಿ ಬದಲಾವಣೆ ತರಲು ಮುಂದಾಗಿರುವ ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ

KannadaprabhaNewsNetwork |  
Published : Feb 08, 2025, 12:32 AM ISTUpdated : Feb 08, 2025, 07:00 AM IST
ಎಸ್‌ಟಿಡಿ | Kannada Prabha

ಸಾರಾಂಶ

  ಲ್ಯಾಂಡ್‌ಲೈನ್‌ ಸಂಖ್ಯೆಯಲ್ಲಿ ಬಹುದೊಡ್ಡ ಬದಲಾವಣೆ ತರಲು ಮುಂದಾಗಿರುವ ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಎಸ್‌ಟಿಡಿಗೆ ವಿದಾಯ ಹೇಳುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದೆ.

ನವದೆಹಲಿ: ಲ್ಯಾಂಡ್‌ಲೈನ್‌ ಸಂಖ್ಯೆಯಲ್ಲಿ ಬಹುದೊಡ್ಡ ಬದಲಾವಣೆ ತರಲು ಮುಂದಾಗಿರುವ ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಎಸ್‌ಟಿಡಿಗೆ ವಿದಾಯ ಹೇಳುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದೆ. ಇದು ಕೇಂದ್ರದಿಂದ ಅನುಮೋದಿಸಲ್ಪಟ್ಟಲ್ಲಿ, ಇನ್ನುಮುಂದೆ ಟೆಲಿಫೋನ್‌ ಬಳಕೆದಾರರು ಸ್ಥಳೀಯ ಕರೆಗಳನ್ನು ಮಾಡಲು ಎಲ್ಲಾ 10 ಅಂಕಿಗಳನ್ನು ಡಯಲ್‌ ಮಾಡುವುದು ಕಡ್ಡಾಯವಾಗಲಿದೆ.

ಏನು ಬದಲಾವಣೆ?:

ಈವರೆಗೆ ಬಳಕೆಯಲ್ಲಿರುವ ಎಸ್‌ಟಿಡಿ ವ್ಯವಸ್ಥೆಯ ಬದಲು ಇನ್ನುಮುಂದೆ 10 ಅಂಕಿಗಳ ಪರವಾನಗಿ ಪಡೆದ ಸೇವಾ ಪ್ರದೇಶ (ಎಲ್‌ಎಸ್‌ಎ) ಬಳಸಲಾಗುವುದು. ಇದನ್ನು ಬೃಹತ್‌ ನಗರಗಳಿಗೆ ಅಥವಾ ರಾಜ್ಯಗಳಿಗೆ ನೀಡಲಾಗುವುದು. ಆದರೆ ಈಗಿರುವ ಚಂದಾದಾರ ದೂರವಾಣಿಸಂಖ್ಯೆಗಳಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.

ಈ ಬದಲಾವಣೆಯೇಕೆ?:

ಈಗಾಗಲೇ ಹಲವರು ಟೆಲೆಫೋನ್‌ ಬಳಕೆಯನ್ನು ಬಿಟ್ಟಿದ್ದರೂ ಅವರ ಸಂಖ್ಯೆಗಳನ್ನು ಬೇರೆಯವರಿಗೆ ಕೊಡಲಾಗಿಲ್ಲ. ಇದರಿಂದಾಗಿ ಸಂಖ್ಯೆಗಳ ಕೊರತೆ ಎದುರಾಗಿದೆ. ಇದಕ್ಕೆ ಪರಿಹಾರವಾಗಿ, ಬಳಕೆಯಲ್ಲಿಲ್ಲದ ಸಂಖ್ಯೆಗಳನ್ನು ಬೇರೆ ಜಿಲ್ಲೆಗೆ ನೀಡಲಾಗುವುದು.

ಇನ್ನು ಡಯಲ್‌ ಮಾಡೋದು ಹೇಗೆ?:

ಇನ್ನುಮುಂದೆ ಟೆಲಿಫೋನ್‌ ಬಳಕೆದಾರರು ಮೊದಲು 0 ಯನ್ನು ಒತ್ತಿ, ಬಳಿಕ 4 ಅಂಕಿಯ ಎಸ್‌ಡಿಸಿಎ ಹಾಗೂ 6 ಅಂಕಿಯ ಚಂದಾದಾರರ ಸಂಖ್ಯೆಯನ್ನು ಡಯಲ್‌ ಮಾಡಬೇಕು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಾಂಗ್ಲಾ ಹಿಂದು ಯುವಕನ ನರಮೇಧಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ । ಇಸ್ಲಾಮಿಕ್‌ ನಾಯಕನ ಹತ್ಯೆ ಬೆನ್ನಲ್ಲೇ ಹಿಂಸೆಟಾಪ್‌- ಬಾಂಗ್ಲಾ ಶೇಕ್‌- ಭಾರತೀಯ ರಾಯಭಾರಿಗಳ ಮನೆಗೆ ಕಲ್ಲೆಸೆತ । ಭಾರತ, ಹಿಂದು ವಿರೋಧಿ ಘೋಷಣೆ
ಹೂಡಿಕೆಗೆ ಕರೆ ನೀಡುವ ಸುಧಾಮೂರ್ತಿ ಡೀಪ್‌ಫೇಕ್‌ ವಿಡಿಯೋ ವೈರಲ್‌