ಲೋಕಸಭೆಗೆ ಇಂದು ಕೊನೆ ಹಂತದ ಮತ

KannadaprabhaNewsNetwork |  
Published : Jun 01, 2024, 12:47 AM ISTUpdated : Jun 01, 2024, 05:12 AM IST
ಮತದಾನ | Kannada Prabha

ಸಾರಾಂಶ

ಮೋದಿ ಸೇರಿ ಘಟಾನುಘಟಿಗಳ ಸ್ಪರ್ಧೆ ಮಾಡುತ್ತಿರುವ ಕೊನೆಯ ಹಂತದ ಚುನಾವಣೆಯಲ್ಲಿ 8 ರಾಜ್ಯದ 57 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ನವದೆಹಲಿ: ಪ್ರಸಕ್ತ ಲೋಕಸಭಾ ಚುನಾವಣೆಯ 7 ಮತ್ತು ಅಂತಿಮ ಹಂತದ ಚುನಾವಣೆ ಜೂ.1ರ ಶನಿವಾರ ನಡೆಯಲಿದೆ. ಇದರೊಂದಿಗೆ 2 ತಿಂಗಳಿಂದ ನಡೆಯುತ್ತಿದ್ದ ಮತದಾನ ಸುದೀರ್ಘ ಪ್ರಕ್ರಿಯೆಗೆ ತೆರೆ ಬೀಳಲಿದೆ.ಈ ಸುತ್ತಿನಲ್ಲಿ 8 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 57 ಲೋಕಸಭಾ ಕ್ಷೇತ್ರದಲ್ಲಿ 904 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಲೋಕಸಭೆಯ ಜೊತೆಗೆ ಒಡಿಶಾ ವಿಧಾನಸಭೆಯ 42 ಕ್ಷೇತ್ರಗಳಿಗೂ ಚುನಾವಣೆ ನಡೆಯಲಿದೆ.

ಈ ಬಾರಿ ಚುನಾವಣೆಯಲ್ಲಿ 751 ನೋಂದಾಯಿತ ರಾಜಕೀಯ ಪಕ್ಷಗಳು ಸ್ಪರ್ಧೆ ಮಾಡಿದ್ದಾರೆ. ಜೊತೆಗೆ 543 ಕ್ಷೇತ್ರಗಳಿಗೆ ಒಟ್ಟು 8,360 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. 1.09 ಲಕ್ಷ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಒಟ್ಟು 10.06 ಕೋಟಿ ಮತದಾರರಿದ್ದಾರೆ. 5.24 ಕೋಟಿ ಪುರುಷ ಮತದಾರರು, 4.82 ಕೋಟಿ ಮಹಿಳಾ ಮತದಾರರು ಹಾಗೂ 3,574 ಮಂದಿ ತೃತೀಯ ಲಿಂಗಿ ಮತದಾರರಿದ್ದಾರೆ.

ಈ ಸುತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಭ್ಯರ್ಥಿ ಎಂಬುದು ವಿಶೇಷ. ಅವರು ವಾರಾಣಸಿ ಕ್ಷೇತ್ರದಿಂದ ಸತತ 3ನೇ ಬಾರಿ ಗೆಲ್ಲುವ ತವಕದಲ್ಲಿದ್ದಾರೆ. ಜೂ.4ರಂದು ಕೊನೆಯ ಹಂತದ ಕ್ಷೇತ್ರಗಳು ಸೇರಿದಂತೆ ಎಲ್ಲ 543 ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.

ಎಲ್ಲೆಲ್ಲಿ ಚುನಾವಣೆ:ಉತ್ತರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಪಂಜಾಬ್, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಚಂಡೀಗಢ ಇವು ಚುನಾವಣೆ ನಡೆವ ರಾಜ್ಯ/ಕೇಂದ್ರಾಡಳಿತ ಪ್ರದೇಶ.ಪ್ರಮುಖ ಅಭ್ಯರ್ಥಿಗಳು:ಪ್ರಧಾನಿ ನರೇಂದ್ರ ಮೋದಿ, ರವಿ ಕಿಶನ್, ಕಂಗನಾ ರಾಣಾವತ್, ಅನುರಾಗ್ ಠಾಕೂರ್ (ಎಲ್ಲರೂ ಬಿಜೆಪಿ), ಮಿಸಾ ಭಾರತಿ (ಆರ್‌ಜಡಿ), ಅಭಿಷೇಕ್ ಬ್ಯಾನರ್ಜಿ (ಟಿಎಂಸಿ), ಚರಂಜಿತ್ ಸಿಂಗ್ ಚನ್ನಿ, ಅಜಯ್ ರಾಯ್ (ಇಬ್ಬರೂ ಕಾಂಗ್ರೆಸ್), ಹರ್‌ಸಿಮ್ರತ್‌ ಕೌರ್‌ ಬಾದಲ್‌ (ಅಕಾಲಿದಳ)

ಇಂದು ಸಂಜೆ ಎಕ್ಸಿಟ್‌ಪೋಲ್‌ನವದೆಹಲಿ: 7ನೇ ಹಾಗೂ ಕೊನೆಯ ಹಂತದ ಚುನಾವಣೆ ಜೂ.1ರ ಶನಿವಾರ ಮುಕ್ತಾಯವಾಗಲಿದೆ. ಸಂಜೆ 6.30ಕ್ಕೆ ಚುನಾವಣೋತ್ತರ ಟೀವಿ ಸಮೀಕ್ಷೆಗಳು ಪ್ರಕಟವಾಗಲಿವೆ. ಈ ಸಮೀಕ್ಷೆಗಳಲ್ಲಿ ಜೂ.4ರ ಫಲಿತಾಂಶ ಹೇಗಿರಬಹುದು ಎಂಬುದರ ಚಿತ್ರಣ ಸಿಗಲಿದೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ