ಮೋದಿ ಮಹದಾಯಿ ಗ್ಯಾರಂಟಿ ಕೊಡಲಿ: ಕಾಂಗ್ರೆಸ್‌

KannadaprabhaNewsNetwork |  
Published : Mar 22, 2024, 01:00 AM ISTUpdated : Mar 22, 2024, 01:30 PM IST
ಮಹದಾಯಿ | Kannada Prabha

ಸಾರಾಂಶ

ನೆರೆಯ ಕರ್ನಾಟಕವು ಮಹದಾಯಿ ನದಿ ನೀರನ್ನು ತಿರುಗಿಸುವಲ್ಲಿ ಯಶ ಕಂಡಿದ್ದು, ಅದನ್ನು ತಡೆಯಲು ಗೋವಾದ ಆಡಳಿತಾರೂಢ ಬಿಜೆಪಿ ವಿಫಲವಾಗಿದೆ

ಪಿಟಿಐ ನವದೆಹಲಿ: ನೆರೆಯ ಕರ್ನಾಟಕವು ಮಹದಾಯಿ ನದಿ ನೀರನ್ನು ತಿರುಗಿಸುವಲ್ಲಿ ಯಶ ಕಂಡಿದ್ದು, ಅದನ್ನು ತಡೆಯಲು ಗೋವಾದ ಆಡಳಿತಾರೂಢ ಬಿಜೆಪಿ ವಿಫಲವಾಗಿದೆ ಎಂದು ಗೋವಾ ವಿಪಕ್ಷಗಳು ಆರೋಪಿಸಿವೆ. 

‘ಹೀಗಾಗಿ ಮಹದಾಯಿ ನೀರು ಕರ್ನಾಟಕಕ್ಕೆ ಹೋಗಲ್ಲ ಎಂಬ ಗ್ಯಾರಂಟಿಯನ್ನು ಪ್ರಧಾನಿ ನರೇಂದ್ರ ಮೋದಿ ಈ ಲೋಕಸಭೆ ಚುನಾವಣಾ ಪ್ರಚಾರದ ವೇಳೆ ಘೋಷಿಸಬೇಕು’ ಎಂದು ಒತ್ತಾಯಿಸಿವೆ.

ಗುರುವಾರ ಮಾತನಾಡಿದ ಕ್ರಾಂತಿಕಾರಿ ಗೋವಾಸ್ ಪಕ್ಷದ ಮುಖ್ಯಸ್ಥ ಮನೋಜ್ ಪರಬ್, ‘ಗೋವಾ ಮತ್ತು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರಗಳು ಮಹದಾಯಿ ಜಲಮೂಲ ಉಳಿಸುವಲ್ಲಿ ಯಶಸ್ವಿಯಾಗಲಿಲ್ಲ. 

ಮಹದಾಯಿ ನೀರನ್ನು ಕಳಸಾ ಉಪನದಿಯಿಂದ ಮಲಪ್ರಭಾ ಜಲಾನಯನ ಪ್ರದೇಶಕ್ಕೆ ನೀರು ಹರಿಸಲು ಕರ್ನಾಟಕ ಕಾಲುವೆಗಳನ್ನು ಅಗೆದಿದೆ’ ಎಂದರು.

‘ಹೀಗಾಗಿ ಮಹಾದಾಯಿ ನೀರನ್ನು ಬೇರೆಡೆಗೆ ಹರಿಸಲ್ಲ ಎಂಬುದು ‘ಮೋದಿ ಕಿ ಗ್ಯಾರಂಟಿ’ ಆಗಲಿ. ಗೋವಾದಲ್ಲಿ ಬಿಜೆಪಿ ಚುನಾವಣಾ ಸಮಾವೇಶದಲ್ಲಿ ಮೋದಿ ಅವರು ‘ಮಹದಾಯಿ ನದಿ ನೀರನ್ನು ನಾವು ತಿರುಗಿಸುವುದಿಲ್ಲ’ ಎಂದು ಕರಾವಳಿ ರಾಜ್ಯದ ಜನರಿಗೆ ಭರವಸೆ ನೀಡಬೇಕು’ ಎಂದು ಆಗ್ರಹಿಸಿದರು.

ಗೋವಾ ಫಾರ್ವರ್ಡ್ ಪಾರ್ಟಿ ನಾಯಕ ವಿಜಯ್ ಸರ್ದೇಸಾಯಿ ಮಾತನಾಡಿ, ಕರ್ನಾಟಕದ ಎಲ್ಲಾ 28 ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆಲ್ಲಬೇಕು ಎಂಬ ಉದ್ದೇಶದಿಂದ ಗೋವಾ ಸರ್ಕಾರ ಕರ್ನಾಟಕಕ್ಕೆ ಶರಣಾಗಿದೆ ಎಂದು ಆರೋಪಿಸಿದರು

.ಬಿಜೆಪಿ ತಿರುಗೇಟು: ಬಿಜೆಪಿ ಗೋವಾ ಅಧ್ಯಕ್ಷ ಸದಾನಂದ ಶೇಟ್ ತನವಡೆ ಈ ಆರೋಪಗಳನ್ನು ರಾಜಕೀಯ ಸ್ಟಂಟ್ ಎಂದು ಬಣ್ಣಿಸಿದ್ದಾರೆ. ‘ವಿಷಯ ನ್ಯಾಯಾಲಯದಲ್ಲಿದೆ. ಮಹದಾಯಿ ಉಳಿಸಲು ಬಿಜೆಪಿ ಬದ್ಧವಾಗಿದೆ’ ಎಂದಿದ್ದಾರೆ.

PREV

Recommended Stories

ಗುಂಡಿ ಬಿದ್ದ ಹೆದ್ದಾರಿಯಲ್ಲಿ ಸುಂಕ ವಸೂಲಾತಿ ಇಲ್ಲ: ಸುಪ್ರೀಂ ತೀರ್ಪು
ಆರೋಗ್ಯ, ಜೀವ ವಿಮೆಗೆ ಶೂನ್ಯ ಜಿಎಸ್‌ಟಿಗೆ ಸರ್ಕಾರದ ಒಲವು