ಶ್ರೀನಗರ: ಮದುವೆಯ ಪ್ರಸ್ತಾಪ ತಿರಸ್ಕರಿಸಿದ ಸೇಡು ತೀರಿಸಿಕೊಳ್ಳಲು ಬಾಲಕಿಯೊಬ್ಬಳ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ಪ್ರಕರಣದ ದೋಷಿಗೆ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 40 ಲಕ್ಷ ರು. ದಂಡ ವಿಧಿಸಿದೆ.
ಪ್ರಕರಣವನ್ನು ಅತ್ಯಂತ ಅಮಾನವೀಯ ಮತ್ತು ಭೀಕರ ಎಂದು ಬಣ್ಣಿಸಿದ ನ್ಯಾಯಾಲಯ ದೋಷಿಗೆ ಜೀವಾವಧಿ ಶಿಕ್ಷೆಯೇ ಸೂಕ್ತ ಎಂದು ಹೇಳಿದೆ.
ಪ್ರಕರಣದಲ್ಲಿ ಒಬ್ಬ ಅಪ್ರಾಪ್ತ ಸೇರಿ ಮೂವರನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು.ಇದೀಗ ಮುಖ್ಯ ದಾಳಿಕೋರನಿಗೆ ಜೀವಾವಧಿ ಶಿಕ್ಷೆಯಾಗಿದೆ.
ಇನ್ನೊಬ್ಬನಿಗೆ 3 ತಿಂಗಳ ಜೈಲು ಶಿಕ್ಷೆ ನೀಡಲಾಗಿದೆ.ಬಾಲಾರೋಪಿ ಪ್ರಕರಣ ಇನ್ನೂ ಮುಕ್ತಾಯವಾಗಿಲ್ಲ.