ತೃತೀಯ ಲಿಂಗಿ ಜತೆ ಮಹಾ ಸಚಿವನ ಖಾಸಗಿ ಕ್ಷಣದ ವಿಡಿಯೋ ವೈರಲ್‌

KannadaprabhaNewsNetwork |  
Published : Mar 27, 2026, 01:45 AM IST
Minister

ಸಾರಾಂಶ

ಮಹಾರಾಷ್ಟ್ರ ಸಚಿವ ನರಹರಿ ಜೀರ್ವಾಲ್‌ ಸರ್ಕಾರದ ಅಧಿಕೃತ ನಿವಾಸದಲ್ಲಿ ತೃತೀಯ ಲಿಂಗಿಯೊಬ್ಬರ ಜೊತೆ ಖಾಸಗಿ ಕ್ಷಣಗಳನ್ನು ಕಳೆಯುತ್ತಿರುವ ವಿಡಿಯೋ ಭಾರೀ ವೈರಲ್‌ ಆಗಿದೆ. ಈ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಯಾಗಿದೆ.

 ಮುಂಬೈ: ಮಹಾರಾಷ್ಟ್ರ ಸಚಿವ ನರಹರಿ ಜೀರ್ವಾಲ್‌ ಸರ್ಕಾರದ ಅಧಿಕೃತ ನಿವಾಸದಲ್ಲಿ ತೃತೀಯ ಲಿಂಗಿಯೊಬ್ಬರ ಜೊತೆ ಖಾಸಗಿ ಕ್ಷಣಗಳನ್ನು ಕಳೆಯುತ್ತಿರುವ ವಿಡಿಯೋ ಭಾರೀ ವೈರಲ್‌ ಆಗಿದೆ. ಈ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಯಾಗಿದೆ.

ಆಹಾರ ಮತ್ತು ಔಷಧ ಆಡಳಿತ ಸಚಿವ ಜೀರ್ವಾಲ್‌

ಆಹಾರ ಮತ್ತು ಔಷಧ ಆಡಳಿತ ಸಚಿವ ಜೀರ್ವಾಲ್‌ ಕೋಣೆಯ ಮಂಚದ ಮೇಲೆ ಮಲಗಿರುವುದು, ತೃತೀಯ ಲಿಂಗಿ ಆತನ ಸುತ್ತಮುತ್ತ ಸುಳಿದಾಡುವುದು, ನಂತರ ಇಬ್ಬರೂ ಅಕ್ಕಪಕ್ಕ ಮಲಗುವುದು ಸೇರಿದಂತೆ ಕೆಲವು ಖಾಸಗಿ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ. ಅಲ್ಲಿಯೇ ಇದ್ದ ತೃತೀಯ ಲಿಂಗಿಯ ಸಹೋದರ ವಿಡಿಯೋ ಮಾಡಿಕೊಂಡಿದ್ದ ಎನ್ನಲಾಗಿದೆ.

ಸರ್ಕಾರದ ವಿರುದ್ಧ ಮುಗಿಬಿದ್ದ

ವಿಡಿಯೋ ವೈರಲ್‌ ಆಗುತ್ತಿದ್ದಂತೆ ವಿಪಕ್ಷ ಕಾಂಗ್ರೆಸ್‌, ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ‘ಜೀರ್ವಾಲ್‌ ನಡೆ ಮಹಾರಾಷ್ಟ್ರ ರಾಜಕೀಯಕ್ಕೆ ಅವಮಾನ. ಸರ್ಕಾರ ತಕ್ಷಣ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಸಚಿವ ಸ್ಥಾನದಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ರಾಜಕೀಯಕ್ಕಾಗಿ ಟೀಕೆ ಬೇಡ : ವಿಪಕ್ಷಕ್ಕೆ ಮೋದಿ ಎಚ್ಚರ
ರೇಮಂಡ್ಸ್‌ ಮಾಜಿ ಮುಖ್ಯಸ್ಥ ಸಿಂಘಾನಿಯಾ ವಿಧಿವಶ