ಟಿಎಂಸಿ ನಾಯಕಿ ಹಾಗೂ ಪ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂಡಿಯಾ ಬ್ಲಾಕ್‌ನ ಉಸ್ತುವಾರಿ ವಹಿಸಲು ಇಚ್ಛೆ ವ್ಯಕ್ತಪಡಿಸಿ ನೀಡಿರುವ ಹೇಳಿಕೆಯನ್ನು ರಾಷ್ಟ್ರವಾದಿ ಕಾಂಗ್ರೆಸ್ (ಎಸ್ಪಿ) ಅಧ್ಯಕ್ಷ ಶರದ್ ಪವಾರ್ ಬೆಂಬಲಿಸಿದ್ದಾರೆ.
ಕೊಲ್ಹಾಪುರ: ಟಿಎಂಸಿ ನಾಯಕಿ ಹಾಗೂ ಪ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂಡಿಯಾ ಬ್ಲಾಕ್‌ನ ಉಸ್ತುವಾರಿ ವಹಿಸಲು ಇಚ್ಛೆ ವ್ಯಕ್ತಪಡಿಸಿ ನೀಡಿರುವ ಹೇಳಿಕೆಯನ್ನು ರಾಷ್ಟ್ರವಾದಿ ಕಾಂಗ್ರೆಸ್ (ಎಸ್ಪಿ) ಅಧ್ಯಕ್ಷ ಶರದ್ ಪವಾರ್ ಬೆಂಬಲಿಸಿದ್ದಾರೆ.
ಕೊಲ್ಹಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ‘ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರು ಸಮರ್ಥ ನಾಯಕರಾಗಿದ್ದು, ವಿರೋಧ ಪಕ್ಷದ ಮೈತ್ರಿಕೂಟದ ನೇತೃತ್ವ ವಹಿಸುವ ಉದ್ದೇಶವನ್ನು ತೋರಿಸಲು ಅವರಿಗೆ ಹಕ್ಕಿದೆ’ ಎಂದರು.
ಈ ನಡುವೆ ಪವಾರ್ ಪುತ್ರಿ, ಸಂಸದೆ ಸುಪ್ರಿಯಾ ಸುಳೆ ಅವರೂ ಮಮತಾ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದರು.
ಶನಿವಾರವಷ್ಟೇ ಮಾತನಾಡಿದ್ದ ಮಮತಾ, ‘ಇಂಡಿಯಾ ಕೂಟ ಈಗ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ. ಇತರರು ಇಚ್ಛಿಸಿದರೆ ನಾನು ಅದರ ನೇತೃತ್ವ ವಹಿಸಲು ಸಿದ್ಧ’ ಎಂದಿದ್ದರು.
ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಎಂವಿಎ ಕೂಟ ಸೋತ ನಂತರ ಇಂಡಿಯಾ ಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಹೀಗಾಗಿ ಕಾಂಗ್ರೆಸ್ ಬದಲು ಟಿಎಂಸಿಗೆ ಕೂಟದ ನೇತೃತ್ವ ನೀಡಬೇಕೆಂಬ ಕೂಗು ಹೆಚ್ಚಿದೆ.