ಮಮತಾ ಆಸ್ತಿ ಬರೀ 15.4 ಲಕ್ಷ ರು.!

KannadaprabhaNewsNetwork |  
Published : Apr 10, 2026, 02:30 AM IST
Mamatha banarjee

ಸಾರಾಂಶ

ಒಂದೆಡೆ ರಾಜಕಾರಣಿಗಳ ಆಸ್ತಿ ಏರುತ್ತಿದ್ದರೆ, ‘ದೇಶದ ಅತಿ ಬಡ ಮುಖ್ಯಮಂತ್ರಿ’ ಎನ್ನಿಸಿಕೊಂಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಆಸ್ತಿಯಲ್ಲಿ ಕಳೆದ 5 ವರ್ಷಗಳಲ್ಲಿ 1.35 ಲಕ್ಷ ರು. ಇಳಿಕೆಯಾಗಿದೆ.

 ಕೋಲ್ಕತಾ: ಒಂದೆಡೆ ರಾಜಕಾರಣಿಗಳ ಆಸ್ತಿ ಏರುತ್ತಿದ್ದರೆ, ‘ದೇಶದ ಅತಿ ಬಡ ಮುಖ್ಯಮಂತ್ರಿ’ ಎನ್ನಿಸಿಕೊಂಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಆಸ್ತಿಯಲ್ಲಿ ಕಳೆದ 5 ವರ್ಷಗಳಲ್ಲಿ 1.35 ಲಕ್ಷ ರು. ಇಳಿಕೆಯಾಗಿದೆ.

ಅಫಿಡವಿಟ್‌ನಿಂದ ಇದು ತಿಳಿದುಬಂದಿದೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಬಾನಿಪುರದಲ್ಲಿ ಅವರು ಬುಧವಾರ ಸಲ್ಲಿಸಿರುವ ಅಫಿಡವಿಟ್‌ನಿಂದ ಇದು ತಿಳಿದುಬಂದಿದೆ. ಕಳೆದ ಬಾರಿಯ ಅಫಿಡವಿಟ್‌ನಲ್ಲಿ 16.72 ಲಕ್ಷ ರು. ಇದ್ದ ಅವರ ಸಂಪತ್ತು ಈಗ 15.37 ಲಕ್ಷ ರು.ಗೆ ತಗ್ಗಿದೆ.

ಮಮತಾ ಬಳಿ 75,700 ರು. ನಗದು

ಸದ್ಯ ಮಮತಾ ಬಳಿ 75,700 ರು. ನಗದು ಇದ್ದು, ಬ್ಯಾಂಕ್‌ ಖಾತೆಯಲ್ಲಿ 12.7 ಲಕ್ಷ ರು. ಇದೆ. ಜತೆಗೆ ಮೂಲದಲ್ಲೇ ಕಡಿತವಾಗುವ ತೆರಿಗೆ (ಟಿಡಿಎಸ್‌) 40,600 ರು. ಆಗಿದೆ. ತಮ್ಮ ಬಳಿ 1.45 ಲಕ್ಷ ರು. ಮೌಲ್ಯದ ಆಭರಣಗಳಿರುವುದಾಗಿ ಘೋಷಿಸಿಕೊಂಡಿರುವ ಅವರು, ಯಾವುದೇ ಷೇರು, ಬಾಂಡ್‌, ವಿಮೆಗಳಲ್ಲಿ ಹೂಡಿಕೆ ಮಾಡಿಲ್ಲ. ಅಂತೆಯೇ, ಸ್ವಂತ ವಾಹನವನ್ನೂ ಹೊಂದಿಲ್ಲ. 2024-25ರಲ್ಲಿ ತಮ್ಮ ಒಟ್ಟು ಆದಾಯ 23.21 ಲಕ್ಷ ರು. ಎಂದು ಮಮತಾ ತಿಳಿಸಿದ್ದಾರೆ.ಜತೆಗೆ ಅವರ ಮೇಲೆ ಯಾವುದೇ ಕ್ರಿಮಿನಲ್‌ ಅಪರಾಧಗಳು ದಾಖಲಾಗಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಹೋರ್ಮುಜ್‌ ಮೂಲಕ ನಿತ್ಯ 15 ನೌಕೆಗೆ ಇರಾನ್ ಅಸ್ತು
ಯುದ್ಧ ವಿರಾಮಕ್ಕೆಒಪ್ಪದಿದ್ರೆ ಇರಾನಿಗೆಮತ್ತೆ ದಾಳಿ : ಟ್ರಂಪ್‌