ಜೈಪುರ: 2025ನೇ ಸಾಲಿನ ‘ಮಿಸ್ ಯೂನಿವರ್ಸ್ ಇಂಡಿಯಾ’ ಪ್ರಶಸ್ತಿಯನ್ನು ರಾಜಸ್ಥಾನದ ಗಂಗಾನಗರದ ಮಣಿಕಾ ವಿಶ್ವಕರ್ಮ ಮುಡಿಗೇರಿಸಿಕೊಂಡಿದ್ದಾರೆ. ಮಣಿಕಾ ಮುಂದಿನ ವರ್ಷ ಥಾಯ್ಲೆಂಡ್‌ನಲ್ಲಿ ನಡೆಯಲಿರುವ 74ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಜೈಪುರದಲ್ಲಿ ನಡೆದ ಸಮಾರಂಭದಲ್ಲಿ 22 ವರ್ಷದ ಮಣಿಕಾ ಪ್ರಶಸ್ತಿ ಗೆದ್ದರು. 2024ನೇ ಸಾಲಿನ ಮಿಸ್ ಯೂನಿವರ್ಸ್ ರೆಹಾ ಸಿಂಘಾ ಮಣಿಕಾ ಅವರಿಗೆ ಮಿಸ್ ಯೂನಿವರ್ಸ್ ಕಿರೀಟವನ್ನು ತೊಡಿಸಿದರು. ಉತ್ತರ ಪ್ರದೇಶದ ತಾನ್ಯಾ ಶರ್ಮಾ ಮತ್ತು ಹರ್ಯಾಣದ ಮೆಹಕ್ ದಿಂಗ್ರಾ ಮೊದಲ ಮತ್ತು 2ನೇ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾದರು.
==46 ವರ್ಷ ಬಳಿಕ ಒಟ್ಟಿಗೆ ತೆರೆ ಮೇಲೆ ಬರಲಿರುವ ರಜನೀಕಾಂತ್-ಕಮಲ್!
ಚೆನ್ನೈ: ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳಾದ ರಜನೀಕಾಂತ್ ಮತ್ತು ಕಮಲ್ ಹಾಸನ್ 46 ವರ್ಷಗಳ ಬಳಿಕ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ರಜನಿ ಹೊಸ ಚಿತ್ರ ‘ಕೂಲಿ’ ನಿರ್ದೇಶಕ ಲೋಕೇಶ್ ಅವರೇ ಇಬ್ಬರು ಸ್ಟಾರ್‌ಗಳಿಗೆ ಆ್ಯಕ್ಷನ್ ಕಟ್ ಹೇಳಲಿದ್ದು, ಚಿತ್ರದ ಶೀರ್ಷಿಕೆ ಇನ್ನೂ ನಿರ್ಧಾರವಾಗಬೇಕಿದೆ. ರಜನೀ ಮತ್ತು ಕಮಲ್ ಈ ಚಿತ್ರದಲ್ಲಿ ಹಳೆಯ ಗ್ಯಾಂಗ್‌ಸ್ಟರ್‌ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಕೋವಿಡ್ ಮುನ್ನವೇ ಚಿತ್ರದ ಪ್ರಸ್ತಾಪವಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಿಕೆಯಾಗಿತ್ತು. ರಜನೀಕಾಂತ್ ಮತ್ತು ಕಮಲ್ 1979ರಲ್ಲಿ ಕಡೆಯ ಬಾರಿ ‘ಅಲಾವುದ್ದೀನುಂ ಅಲ್ಭೂತ ವಿಲಕ್ಕುಂ’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.==
2 ಮದುವೆ, ಜೊತೆಗೆ ಗೆಳತಿ ಬಳಿಕ ಮತ್ತೊಬ್ಬಳ ಜೊತೆ ಅಮೀರ್ ಅಕ್ರಮ ನಂಟುಮುಂಬೈ: ಬಾಲಿವುಡ್ ನಟ ಅಮೀರ್ ಖಾನ್, ಜೆಸ್ಸಿಕಾ ಹೈನ್ಸ್ ಎಂಬ ಬ್ರಿಟಿಷ್ ಪತ್ರಕರ್ತೆ ಜೊತೆ ವಿವಾಹೇತರ ಸಂಬಂಧ ಹೊಂದಿದ್ದರು ಹಾಗೂ ಅವರಿಗೆ ಒಂದು ಮಗುವೂ ಇದೆ ಎಂದು ಅಮೀರ್ ಸಹೋದರ ಫೈಸಲ್ ಖಾನ್ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೈಸಲ್, ‘ಅಮೀರ್ ತಮ್ಮ ಮೊದಲ ಪತ್ನಿ ರೀನಾರಿಗೆ ವಿಚ್ಛೇದನ ಕೊಟ್ಟು, ಕಿರಣ್ ರಾವ್ ಜೊತೆಯಲ್ಲಿದ್ದರು. ಅದೇ ಸಂದರ್ಭದಲ್ಲಿ ಬ್ರಿಟಿಷ್ ಪತ್ರಕರ್ತೆ ಹಾಗೂ ಲೇಖಕಿ ಜೆಸ್ಸಿಕಾ ಹೈನ್ಸ್ ಎಂಬಾಕೆ ಜೊತೆ ಸಂಬಂಧ ಹೊಂದಿದ್ದರು. ಗುಲಾಮ್ ಚಿತ್ರದ ಶೂಟಿಂಗ್ ವೇಳೆ ಇಬ್ಬರೂ ಭೇಟಿಯಾಗುತ್ತಿದ್ದರು. ಅವರಿಗೆ ಅಕ್ರಮವಾಗಿ ಮಗು ಕೂಡ ಜನಿಸಿದೆ. ಅದಕ್ಕೆ ಜಾನ್ ಎಂದು ಹೆಸರಿಟ್ಟಿದ್ದಾರೆ’ ಎಂದು ಆರೋಪಿಸಿದ್ದಾರೆ.ಅಮೀರ್ ಬೆಂಗಳೂರಿನ ಗೌರಿ ಜೊತೆ ಸಂಬಂಧದಲ್ಲಿರುವ ಸುದ್ದಿ ನಡುವೆಯೇ ಈ ಆರೋಪ ಕೇಳಿಬಂದಿದೆ.==
‘3 ಈಡಿಯಟ್ಸ್’ ಖ್ಯಾತಿಯ 125 ಚಿತ್ರಗಳಲ್ಲಿ ನಟಿಸಿದ್ದ ಅಚ್ಯುತ್ ಪೋತ್ದಾರ್ ನಿಧನಮುಂಬೈ: ಹಿಂದಿಯ ‘3 ಈಡಿಯಟ್ಸ್’, ‘ಪ್ರಧಾನ ಮಂತ್ರಿ’ ಚಿತ್ರಗಳ ಖ್ಯಾತಿಯ ಬಾಲಿವುಡ್‌ನ ಹಿರಿಯ ನಟ ಅಚ್ಯುತ್ ಪೋತ್ದಾರ್ (90) ಮಂಗಳವಾರ ನಿಧನರಾದರು. ವಯೋಸಹಜ ಅನಾರೋಗ್ಯ ಹಿನ್ನೆಲೆಯಲ್ಲಿ ಅವರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. 2019ರಲ್ಲಿ ನಟ ಅಮಿರ್ ಖಾನ್ ಮುಖ್ಯ ಭೂಮಿಕೆಯ ‘3 ಈಡಿಯಟ್ಸ್’ ಚಿತ್ರದಲ್ಲಿನ ಪ್ರೊಫೆಸರ್ ಪಾತ್ರ ಅಚ್ಯುತ್ ಅವರಿಗೆ ಬಹಳ ಜನಪ್ರಿಯತೆ ತಂದುಕೊಟ್ಟಿತ್ತು. ಅಚ್ಯುತ್ 125ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಗೂ ಟೀವಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು.