ಅಸ್ಸಾಂನಿಂದ ರಾಜ್ಯಸಭಾ ಸದಸ್ಯರಾಗಿದ್ದ ಸಮಯದಲ್ಲಿ ಮಾಜಿ ಸಿಎಂ ಸೈಕಿಯಾ ಮನೆಯಲ್ಲಿ ಬಾಡಿಗೆಗಿದ್ದ ಸಿಂಗ್‌

KannadaprabhaNewsNetwork |  
Published : Dec 28, 2024, 01:01 AM ISTUpdated : Dec 28, 2024, 04:18 AM IST
ಅಸ್ಸಾಂ | Kannada Prabha

ಸಾರಾಂಶ

 ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರು ಅಸ್ಸಾಂನಿಂದ ರಾಜ್ಯಸಭಾ ಸದಸ್ಯರಾಗಿದ್ದ ಸಮಯದಲ್ಲಿ ಅಲ್ಲಿನ ಅಂದಿನ ಮುಖ್ಯಮಂತ್ರಿಗಳ ನಿವಾಸದಲ್ಲೇ ಬಾಡಿಗೆಗೆ ಇದ್ದರು ಎಂಬ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ.

ಗುವಾಹಟಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರು ಅಸ್ಸಾಂನಿಂದ ರಾಜ್ಯಸಭಾ ಸದಸ್ಯರಾಗಿದ್ದ ಸಮಯದಲ್ಲಿ ಅಲ್ಲಿನ ಅಂದಿನ ಮುಖ್ಯಮಂತ್ರಿಗಳ ನಿವಾಸದಲ್ಲೇ ಬಾಡಿಗೆಗೆ ಇದ್ದರು ಎಂಬ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ.

ಈ ಕುರಿತು ಅಂದು ಅಸ್ಸಾಂ ಸಿಎಂ ಆಗಿದ್ದ ಹಿತೇಶ್ವರ್‌ ಸೈಕಿಯಾ ಅವರ ಪತ್ನಿ ಹೇಮೋಪ್ರವಾ ಮಾತನಾಡಿ, ‘ಪ್ರಧಾನಿಯಾಗಿದ್ದ ನರಸಿಂಹ ರಾವ್‌ ಅವರು ಸಿಂಗ್‌ ಅವರನ್ನು ರಾಜಕೀಯಕ್ಕೆ ಕರೆತಂದು ವಿತ್ತಸಚಿವರನ್ನಾಗಿ ಮಾಡಲು ಬಯಸಿದಾಗ ಅವರು ಈ ವಿಷಯವನ್ನು ನನ್ನ ಪತಿ ಸೈಕಿಯಾರ ಬಳಿ ಚರ್ಚಿಸಿದ್ದರು. ಆಗ ಸೈಕಿಯಾ, ನಿಮ್ಮನ್ನು ರಾಜ್ಯಸಭೆಗೆ ಕಳಿಸುವ ಸಾಧ್ಯೆ ಇದೆ ಎಂದಿದ್ದರು. 

ಆದರೆ ಸಿಂಗ್‌ ಅಸ್ಸಾಂನವರಲ್ಲದ ಕಾರಣ ಹಲವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಅವರಿಗೆ ರಾಜ್ಯದಲ್ಲಿ ವಿಳಾಸವೇ ಇಲ್ಲ ಎಂಬ ನೆಪವೊಡ್ಡಿ ಕೋರ್ಟ್‌ ಕದವನ್ನೂ ತಟ್ಟಿದ್ದರು. ಆಗಲೇ ಅವರಿಗೆ ನಾವು 2ಬಿಎಹ್‌ಕೆ ಮನೆಯನ್ನು 700 ರು.ಗೆ ಬಾಡಿಗೆಗೆ ನೀಡಿದ್ದೆವು. ಅಸ್ಸಾಂ ಹಾಗೂ ತಮ್ಮ ನಡುವೆ ನಂಟು ಬೆಸೆದದ್ದೇ ಆ ಮನೆ ಎಂಬ ಕಾರಣಕ್ಕೆ ಅದನ್ನೇ ಅವರು ಶಾಶ್ವತ ವಿಳಾಸವಾಗಿಸಿಕೊಂಡರು’ ಎಂದರು.

ಸಿಂಗ್‌ರ ಉದಾರತೆ ಹಾಗೂ ಹೃದಯ ವೈಶಾಲ್ಯತೆಯನ್ನು ಬಣ್ಣಿಸಿದ ಸೈಕಿಯಾ, ‘ಪ್ರಧಾನಿಯಾದ ಬಳಿಕವೂ ಅವರು ಚೆಕ್‌ ಮೂಲಕ ಬಾಡಿಗೆ ಪಾವತಿಸುತ್ತಿದ್ದರು. ಒಮ್ಮೆ ನಾವು ಅದನ್ನು ಬಳಸಿ ನಗದು ಪಡೆಯದೇ ಇದ್ದಾಗ ಇನ್ನೊಂದು ಚೆಕ್‌ ಕಳಿಸಿದ್ದರು’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಆಸ್ಟ್ರೇಲಿಯಾದಲ್ಲಿ 426 ಕೆಜಿಯ ಗಾಂಧಿ ಕಂಚಿನ ಪ್ರತಿಮೆ ಧ್ವಂಸ, ಕಳವು
6 ಕ್ಷೇತ್ರದ ಚುನಾವಣಾ ಉಸ್ತುವಾರಿ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ