ಹಿಮಾಚಲದಲ್ಲಿ 1 ವರ್ಷ ಕಾಟನ್‌ ಕ್ಯಾಂಡಿ ಮಾರಾಟಕ್ಕೆ ನಿಷೇಧ

KannadaprabhaNewsNetwork | Updated : Mar 17 2024, 07:59 AM IST

ಸಾರಾಂಶ

ಹಿಮಾಚಲ್‌ ಪ್ರದೇಶ ರಾಜ್ಯದಲ್ಲಿಯೂ ಕಾಟನ್‌ ಕ್ಯಾಂಡಿಯ ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು 1 ವರ್ಷದ ಅವಧಿಗೆ ನಿಷೇಧಿಸಿ ಶನಿವಾರ ಆದೇಶ ಹೊರಡಿಸಿದೆ.

ಸಿಮ್ಲಾ: ಇತ್ತೀಚಿಗಷ್ಟೇ ಕರ್ನಾಟಕದಲ್ಲಿ ಗೋಬಿ ಮಂಜೂರಿ ಮತ್ತು ಕಾಟನ್‌ ಕ್ಯಾಂಡಿಯಲ್ಲಿ ಬಳಸುವ ಕೃತಕ ಬಣ್ಣವನ್ನು ನಿಷೇಧಿಸಲಾಗಿತ್ತು. 

ಇದರ ಬೆನ್ನಲ್ಲೇ ಹಿಮಾಚಲ್‌ ಪ್ರದೇಶ ರಾಜ್ಯದಲ್ಲಿಯೂ ಕಾಟನ್‌ ಕ್ಯಾಂಡಿಯ ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು 1 ವರ್ಷದ ಅವಧಿಗೆ ನಿಷೇಧಿಸಿ ಶನಿವಾರ ಆದೇಶ ಹೊರಡಿಸಿದೆ.

ಕಾಟನ್‌ ಕ್ಯಾಂಡಿಗಳ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದ್ದು, ಅನುಮತಿ ನೀಡದ ಕೃತಕ ಬಣ್ಣ ಬಳಕೆ ಮಾಡುವುದು ಪತ್ತೆಯಾಗಿದೆ.

ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಪರಿಗಣಿಸಿ ಇಡೀ ರಾಜ್ಯದಲ್ಲಿ ಒಂದು ವರ್ಷದ ಮಟ್ಟಿಗೆ ಕ್ಯಾಂಡಿ ಮಾರಾಟ, ಸಂಗ್ರಹಣೆ, ವಿತಣೆಯನ್ನು ನಿಷೇಧಿಸಿ ಆಹಾರ ಸುರಕ್ಷತಾ ಆಯುಕ್ತರು ಹಾಗೂ ಆರೋಗ್ಯ ಇಲಾಖೆಯ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

Share this article