6 ದಶಕದ ಸೇವೆ ಬಳಿಕ ಮಿಗ್-21 ಯುದ್ಧ ವಿಮಾನಕ್ಕೆ ವಿದಾಯ

KannadaprabhaNewsNetwork |  
Published : Sep 27, 2025, 12:00 AM IST
ಮಿಗ್ | Kannada Prabha

ಸಾರಾಂಶ

ಚಂಡೀಗಢದ ವಾಯುನೆಲೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ, ಏರ್‌ ಮಾರ್ಷಲ್‌ ಎ.ಪಿ. ಸಿಂಗ್ ಮಿಗ್-21 ವಿಮಾನದ ಅಂತಿಮ ಹಾರಾಟ ನಡೆಸಿ, ವಿದಾಯ ಹೇಳಿದರು. ಈ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್,   ಎಸ್.ಪಿ. ತ್ಯಾಗಿ ಮತ್ತು ಬಿ.ಎಸ್. ಧನೋವಾ,   ಶುಭಾಂಶು ಶುಕ್ಲಾ  ಹಲವಾರು ಗಣ್ಯರು ಭಾಗವಹಿಸಿದ್ದರು.

 ಚಂಡೀಗಢ :  6 ದಶಕಗಳ ಕಾಲ ಭಾರತೀಯ ವಾಯುಸೇನೆಯ ಬೆನ್ನೆಲುಬಾಗಿ ಕೆಲಸ ಮಾಡಿದ್ದ ರಷ್ಯಾನಿರ್ಮಿತ ಮಿಗ್‌-21 ಯುದ್ಧವಿಮಾನಕ್ಕೆ ಶುಕ್ರವಾರ ಬೀಳ್ಕೊಡುಗೆ ನೀಡಲಾಯಿತು.

ಈ ವೇಳೆ ಉಪಸ್ಥಿತರಿದ್ದ ರಕ್ಷಣಾ ಸಚಿವ ರಾಜನಾಥ ಸಿಂಗ್ , ‘ಮಿಗ್‌-21 ನಮ್ಮ ಸೇನಾ ವಾಯುಯಾನ ಪಯಣಕ್ಕೆ ಹಲವು ಹೆಮ್ಮೆಯ ಕ್ಷಣಗಳನ್ನು ಸೇರಿಸಿದೆ. ಅದು ಕೇವಲ ಒಂದು ವಿಮಾನ ಅಥವಾ ಯಂತ್ರವಲ್ಲ, ಭಾರತ-ರಷ್ಯಾ ನಡುವಿನ ಆಳವಾದ ಸಂಬಂಧಕ್ಕೆ ಸಾಕ್ಷಿ’ ಎಂದು ಬಣ್ಣಿಸಿದರು. ಶುಕ್ರವಾರ ಚಂಡೀಗಢದ ವಾಯುನೆಲೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ, ಏರ್‌ ಮಾರ್ಷಲ್‌ ಎ.ಪಿ. ಸಿಂಗ್ ಮಿಗ್-21 ವಿಮಾನದ ಅಂತಿಮ ಹಾರಾಟ ನಡೆಸಿ, ವಿದಾಯ ಹೇಳಿದರು. ಈ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಾಯುಪಡೆಯ ಮಾಜಿ ಮುಖ್ಯಸ್ಥರಾದ ಎಸ್.ಪಿ. ತ್ಯಾಗಿ ಮತ್ತು ಬಿ.ಎಸ್. ಧನೋವಾ, ಗ್ರುಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. 

ವೈಮಾನಿಕ ಪ್ರದರ್ಶನ:

ವಾಯುಪಡೆಯ ‘ಆಕಾಶಗಂಗಾ’ ಸ್ಕೈಡೈವಿಂಗ್ ತಂಡವು 8,000 ಅಡಿ ಎತ್ತರದಲ್ಲಿ ವೈಮಾನಿಕ ಪ್ರದರ್ಶನ ನೀಡಿತು. ನಂತರ 23 ಸ್ಕ್ವಾಡ್ರನ್‌ಗೆ ಸೇರಿದ ಮಿಗ್‌-21 ವಿಮಾನಗಳು ಅಂತಿಮ ವೈಮಾನಿಕ ಪ್ರದರ್ಶನ ನೀಡಿದವು. ಏರ್ ವಾರಿಯರ್ ತಂಡದಿಂದ ಕವಾಯತು ಮತ್ತು ನಿವೃತ್ತ ವಿಮಾನಕ್ಕೆ ವಂದನೆಗಳನ್ನು ಸಲ್ಲಿಸಲಾಯಿತು.  

ನಿವೃತ್ತಿ ನಂತರ ಏನಾಗುತ್ತದೆ?:ದೆಹಲಿಯ ಪಾಲಂನಲ್ಲಿರುವ ವಾಯುಪಡೆಯ ವಸ್ತುಸಂಗ್ರಹಾಲಯಲ್ಲಿ ನಿವೃತ್ತ ಮಿಗ್-21 ವಿಮಾನಗಳನ್ನು ಪ್ರದರ್ಶನಕ್ಕಿಡುವ ಸಾಧ್ಯತೆಯಿದೆ. ಕೆಲವು ವರದಿಗಳ ಪ್ರಕಾರ, ಕೆಲವು ಮಿಗ್-21 ವಿಮಾನಗಳು ಸುಸ್ಥಿತಿಯಲ್ಲಿರುವ ಕಾರಣ, ಅವುಗಳನ್ನು ವಿಂಟೇಜ್ ಸ್ಕ್ವಾಡ್ರನ್ ಆಗಿ ಬಳಸುವ ನಿರೀಕ್ಷೆಯಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ